ಮುಂಬೈ: ಕಳೆದ ವರ್ಷ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ವೇಗಿ ಕಮಲೇಶ್ ನಾಗರಕೋಟಿ ಬರೋಬ್ಬರಿ 19 ತಿಂಗಳ ಬಳಿಕ ಟೀಂ ಇಂಡಿಯಾ ತಂಡ ಸೇರಿಕೊಂಡಿದ್ದು, ಮತ್ತೊಮ್ಮೆ ಮಿಂಚಿನ ದಾಳಿ ನಡೆಸಲು ಸಜ್ಜಾಗಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ ಗಂಟೆಗೆ 146 ಕಿ.ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದ ನಾಗರಕೋಟೆ ತದನಂತರ ಗಾಯದ ಸಮಸ್ಯೆಗೆ ಒಳಗಾಗಿ ಪ್ರಮುಖ ಟೂರ್ನಿಗಳಿಂದ ಹೊರಬಿದ್ದಿದ್ದರು. ಜತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸೇಲ್ ಆಗಿದ್ದ ನಾಗರಕೋಟಿ ಒಂದೇ ಒಂದು ಪಂದ್ಯ ಆಡದೇ ಹೊರಗುಳಿಯಬೇಕಾಗಿತ್ತು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆದುಕೊಂಡು ಫಿಟ್ ಆಗಿದ್ದಾರೆ.
ತಂಡ ಇಂತಿದೆ: ವಿನಾಯಕ್ ಗುಪ್ತಾ, ಆರ್ಯನ್ ಜುಯಲ್, ಬಿ ಆರ್ ಶರತ್, ಚಿನ್ಮಯಾ ಸುತಾರ್, ಯಶ್ ರಾಥೋಡ್,ಆರ್ಮನ್ ಜಾಫರ್,ಸನ್ವಿರ್ ಸಿಂಗ್, ಕಲ್ಮೇಶ್ ನಾಗರಕೋಟಿ, ಹೃತಿಕ್ ಶೋಕಿನ್,ಎಸ್ಎ ದೇಸಾಯಿ, ಆರ್ಶದೀಪ್ ಸಿಂಗ್, ಎಸ್ ಆರ್ ದುಬೈ,ಕುಮಾರ್ ಸೂರಜ್, ಪಿ. ರೇಖಾಡೆ,ಕುಲ್ದೀಪ್ ಯಾದವ್
ನವೆಂಬರ್ ತಿಂಗಳಲ್ಲಿ ಬಾಂಗ್ಲಾದಲ್ಲಿ ಏಷ್ಯಾಕಪ್ ಟೂರ್ನಿ ಪ್ರಾರಂಭಗೊಳ್ಳಲಿದ್ದು, ಮುಂಬೈನಲ್ಲಿ ಸಭೆ ಸೇರಿದ ಜೂನಿಯರ್ ಆಯ್ಕೆ ಸಮಿತಿ 15 ಸದಸ್ಯರನ್ನೊಳಗೊಂಡ ತಂಡ ಪ್ರಕಟಗೊಳಿಸಿದೆ.