ETV Bharat / sports

ಕೀಪರ್​ ಸ್ಥಾನದಲ್ಲಿ ಧೋನಿ ಇದ್ದಿದ್ದರಿಂದ ವೃತ್ತಿ ಜೀವನವೆಲ್ಲಾ ಒತ್ತಡದಲ್ಲೇ ಆಡುವಂತಾಯಿತು: ದಿನೇಶ್ ಕಾರ್ತಿಕ್​ - ವಿಕೆಟ್ ಕೀಪಿಂಗ್

ದಿನೇಶ್ ಕಾರ್ತಿಕ್ 2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರಾದರೂ ಅವಕಾಶ ಸಿಕ್ಕಿರುವುದು 26 ಟೆಸ್ಟ್, 94 ಏಕದಿನ ಹಾಗೂ 32 ಟಿ20 ಪಂದ್ಯಗಳಲ್ಲಿ ಮಾತ್ರ. ಅವರು ಟೆಸ್ಟ್​ನಲ್ಲಿ 1025, ಏಕದಿನ ಕ್ರಿಕೆಟ್​ನಲ್ಲಿ 1752 ಹಾಗೂ ಟಿ20 ಕ್ರಿಕೆಟ್​ನಲ್ಲಿ 399 ರನ್​ ದಾಖಲಿಸಿದ್ದಾರೆ.

ಎಂಎಸ್ ಧೋನಿ
ಎಂಎಸ್ ಧೋನಿ
author img

By

Published : Oct 19, 2020, 6:45 PM IST

Updated : Oct 19, 2020, 6:53 PM IST

ನವದೆಹಲಿ: ಭಾರತದ ಕ್ರಿಕೆಟ್​ 90ರ ದಶಕದಲ್ಲಿ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಪರಿತಪಿಸುತ್ತಿದ್ದ ಕಾಲದಲ್ಲಿ ಟೀಂ ಇಂಡಿಯಾ ಸೇರ್ಪಡೆಗೊಂಡ ಧೋನಿ ಅನಂತರ ಸುದೀರ್ಘ 15 ವರ್ಷಗಳ ಕಾಲ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಂಡರು.

"ನನ್ನ ವೃತ್ತಿ ಜೀವನದುದ್ದಕ್ಕೂ ಒಂದು ವಿಷಯ ಮಾತ್ರ ಖಚಿತವಾಗಿದೆ. ನಾನು ಆಟವಾಡುವಾಗಲೆಲ್ಲಾ ಸಾಕಷ್ಟು ಒತ್ತಡ ಎದುರಿಸುತ್ತಿದ್ದೆ ಎನ್ನುವುದು ಸತ್ಯ. ತಂಡದಲ್ಲಿರಬೇಕಾದರೆ ನಾನು ಏನಾದರೂ ವಿಶೇಷವಾಗಿ ಮಾಡಲೇ ಬೇಕಾಗಿತ್ತು. ಏಕೆಂದರೆ ವಿಕೆಟ್ ಕೀಪರ್​ ಸ್ಥಾನದಲ್ಲಿ ಧೋನಿಯಂತಹ ಆಟಗಾರ ನಿಮ್ಮ ಸುತ್ತ ಇರುವಾಗ ತಂಡದಲ್ಲಿ ಅವಕಾಶ ಪಡೆಯುವುದು ಸಾಮಾನ್ಯ ವಿಷಯವಾಗಿರಲಿಲ್ಲ" ಎಂದು ಸೌರವ್ ಗೋಶಾಲ್ ಅವರ ಫಿನಿಶ್ ಲೈನ್ ಕಾರ್ಯಕ್ರಮದಲ್ಲಿ ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ, ದಿನೇಶ್​ ಕಾರ್ತಿಕ್

ಆದ್ದರಿಂದ ನೀವು ಆ ರೀತಿಯ ಆಟಗಾರನನ್ನು ಹೊಂದಿರುವಾಗ, ನೀವು ವಿಶೇಷವಾದ ಕೌಶಲ್ಯವನ್ನು ತೋರಿಸಿ ಆ ಸ್ಥಾನವನ್ನು ವಶಪಡಿಸಿಕೊಳ್ಳಬೇಕಾಗಿರುತ್ತದೆ. ಕೆಲವೊಮ್ಮೆ ನಾನು ಹಾಗೆ ಮಾಡಿ ತೋರಿಸಿದ್ದೆ, ಕೆಲವೊಮ್ಮೆ ಅದು ಸಾಧ್ಯವಾಗಲಿಲ್ಲ. ಜೀವನ ಯಾವಾಗಲೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಕೆಲವೊಮ್ಮೆ ನೀವು ಒಂಟಿಯಾಗಿ ಕಠಿಣವಾದ ರೇಸ್​ನಲ್ಲಿ ಓಡಬೇಕಾಗುತ್ತದೆ ಎಂದು ತಂಡದಲ್ಲಿ ಆಡುವ ಹೆಚ್ಚಿನ ಅವಕಾಶ ಏಕೆ ಸಿಗಲಿಲ್ಲ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

Last Updated : Oct 19, 2020, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.