ETV Bharat / sports

ತಂದೆ ಆಸ್ಪತ್ರೆಯಲ್ಲಿದ್ದರೂ ತಂಡಕ್ಕಾಗಿ ಹೋರಾಡಿ ಗೆಲ್ಲಿಸಿದ ಇಂಗ್ಲೆಂಡ್​ ಆಟಗಾರ

ಬಟ್ಲರ್​ ಮೈದಾನದಲ್ಲಿ ಇಂಗ್ಲೆಂಡ್​ ತಂಡಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದರೆ, ಅತ್ತ ಆಸ್ಪತ್ರೆಯಲ್ಲಿ ಅವರ ತಂದೆ ಜಾನ್​ ಬಟ್ಲರ್​ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.

ಜೋಸ್​ ಬಟ್ಲರ್​
ಜೋಸ್​ ಬಟ್ಲರ್​
author img

By

Published : Aug 10, 2020, 2:46 PM IST

ಮ್ಯಾಂಚೆಸ್ಟರ್​: ಇಂಗ್ಲೆಂಡ್​ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಜೋಸ್​ ಬಟ್ಲರ್ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಆಕರ್ಷಕ ಬ್ಯಾಟಿಂಗ್​ ನಡೆಸಿ ಸೋಲಿನತ್ತ ಸಾಗುತ್ತಿದ್ದ ಪಂದ್ಯವನ್ನು ಇಂಗ್ಲೆಂಡ್​ ಕಡೆಗೆ ತಿರುಗಿಸಿದ್ದರು.

ಆದರೆ, ಅವರು ಮೈದಾನದಲ್ಲಿ ಇಂಗ್ಲೆಂಡ್​ ತಂಡಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದರೆ, ಅತ್ತ ಆಸ್ಪತ್ರೆಯಲ್ಲಿ ಅವರ ತಂದೆ ಜಾನ್​ ಬಟ್ಲರ್​ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. (ಅವರು ಕಳೆದ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.)

ಬಟ್ಲರ್​ ಸ್ಟೋಕ್ಸ್​
ಬಟ್ಲರ್​ ಸ್ಟೋಕ್ಸ್​

ಈ ವಿಚಾರವನ್ನು ಬಟ್ಲರ್ ಅವರ ಸಹೋದರಿ ಬಹಿರಂಗ ಪಡಿಸಿದ್ದರು. ತಂದೆ ಆಸ್ಪತ್ರೆಯಲ್ಲಿದ್ದಾಗ ಪಂದ್ಯದ 3 ದಿನಗಳು ಬಾಕಿ ಉಳಿದಿದ್ದವು. ರಾತ್ರಿ 10 ಗಂಟೆಗೆ ತಂದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಬಟ್ಲರ್​ಗೆ ತಿಳಿಸಿದ್ದರು. ಆದರೂ ಬಟ್ಲರ್​ ತಂಡಕ್ಕಾಗಿ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್​ ನಾಯ ಜೋ ರೂಟ್​, ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಭೀತಿ ಮತ್ತು ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒತ್ತಡವನ್ನು ಸಹಿಸಿಕೊಂಡು ಆಡಿದ್ದಕ್ಕೆ ಬಟ್ಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ." ಜೋಸ್​ ಅವರು ಎಂತಹ ಒತ್ತಡವನ್ನಾದರೂ ಎದುರಿಸಲು ಸಮರ್ಥರಾಗಿದ್ದಾರೆ ಎಂದು ಅವರ ಆಟವೇ ತೋರಿಸಿದೆ" ಎಂದು ತಿಳಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ನನ್ನ ಪ್ರದರ್ಶನದ ಬಗ್ಗೆ ಆಲೋಚಿಸುತ್ತಾ ಅದೆಷ್ಟೋ ರಾತ್ರಿ ಕಳೆದಿದ್ದೇನೆ. ಪಾಕ್​ ವಿರುದ್ಧದ ಟೆಸ್ಟ್​ನಲ್ಲಿ ರನ್​ಗಳಿಸದೇ ಹೋದರೆ ಅದೇ ನನ್ನ ಕೊನೆಯ ಟೆಸ್ಟ್​ ಎಂದು ನನ್ನ ತಲೆಯಲ್ಲಿತ್ತು. ಕೀಪಿಂಗ್​ ಕೂಡ ಸರಿಯಾಗಿ ಮಾಡದಿದ್ದರಿಂದ ಬ್ಯಾಟಿಂಗ್​ನಲ್ಲಾದರೂ ಅಮೂಲ್ಯವಾದ ರನ್​ಗಳಸಬೇಕೇಂದುಕೊಂಡಿದ್ದೆ. ಅದು ಸಾಧ್ಯವಾಗಿದ್ದಕ್ಕೆ ಆನಂದವಿದೆ ಎಂದು ಜೋಸ್​ ಬಟ್ಲರ್​ ಹೇಳಿದ್ದಾರೆ.

ಕೊನೆಯ ಎರಡು ದಿನ ಆಟ ಬಾಕಿಯುಳಿದಿದ್ದಾಗ ಪಾಕ್​ 277 ರನ್​ಗಳ ಸವಾಲಿನ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದೆ. ಇಂಗ್ಲೆಂಡ್​ 117 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಂದಾದ ಬಟ್ಲರ್ (75) ಹಾಗೂ ವೋಕ್ಸ್​(84) 139 ರನ್​ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್​ಗೆ ಅಚ್ಚರಿಯ ಗೆಲುವು ತಂದು ಕೊಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.