ಅಹಮದಾಬಾದ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಜ್ಯಾಕ್ ಲೀಚ್ ಸ್ಪಿನ್ ಬೌಲಿಂಗ್ ಮುಂದೆ ಪರದಾಡಿದ ಭಾರತ ತಂಡ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 145ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 33 ರನ್ಗಳ ಸಾಧಾರಣ ಮುನ್ನಡೆ ಸಾಧಿಸಿದೆ.
ಬುಧವಾರ 99ಕ್ಕೆ3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು ಆ ಮೊತ್ತಕ್ಕೆ 46 ರನ್ ಸೇರಿಸಲಷ್ಟೇ ಶಕ್ತವಾಯಿತು. ನೈಟ್ ವಾಚ್ಮನ್ ಅಜಿಂಕ್ಯ ರಹಾನೆ(7) ರನ್ ಹಾಗೂ ರೋಹಿತ್ ಶರ್ಮಾ (66) ವಿಕೆಟ್ ಒಪ್ಪಿಸಿದರು.
-
Tea in Ahmedabad ☕
— ICC (@ICC) February 25, 2021 " class="align-text-top noRightClick twitterSection" data="
England take seven wickets for 46 runs in the first session to bowl India out for 145 👀
Joe Root gets his first five-wicket haul in Tests!#INDvENG ➡️ https://t.co/0unCGUOHmI pic.twitter.com/svXq65HrPF
">Tea in Ahmedabad ☕
— ICC (@ICC) February 25, 2021
England take seven wickets for 46 runs in the first session to bowl India out for 145 👀
Joe Root gets his first five-wicket haul in Tests!#INDvENG ➡️ https://t.co/0unCGUOHmI pic.twitter.com/svXq65HrPFTea in Ahmedabad ☕
— ICC (@ICC) February 25, 2021
England take seven wickets for 46 runs in the first session to bowl India out for 145 👀
Joe Root gets his first five-wicket haul in Tests!#INDvENG ➡️ https://t.co/0unCGUOHmI pic.twitter.com/svXq65HrPF
ನಂತರ ಬಂದ ರಿಷಭ್ ಪಂತ್ 1ರನ್ ಗಳಿಸಿ ರೂಟ್ಗೆ ಮೊದಲ ಬಲಿಯಾದರು. ನಂತರ ಪೆವಿಲಿಯನ್ ಪರೇಡ್ ನಡೆಸಿದ ಭಾರತ ತಂಡ ಕೇವಲ 145 ಕ್ಕೆ ಆಲೌಟ್ ಆಯಿತು. ಅಶ್ವಿನ್(17), ವಾಷಿಂಗ್ಟನ್ ಸುಂದರ್(0), ಅಕ್ಸರ್ ಪಟೇಲ್(0), ಜಸ್ಪ್ರೀತ್ ಬುಮ್ರಾ (1)ರ ವಿಕೆಟ್ ಅನ್ನು ಆಂಗ್ಲರ್ ನಾಯಕ ಜೋ ರೂಟ್ಗೆ ವಿಕೆಟ್ ಒಪ್ಪಿಸಿದರು.
ಜೋ ರೂಟ್ ಕೇವಲ 6.2 ಓವರ್ಗಳಲ್ಲಿ 8 ರನ್ ನೀಡಿ 5 ವಿಕೆಟ್ ಪಡೆದರೆ, ಜ್ಯಾಕ್ ಲೀಚ್ 10 ಓವರ್ಗಳಲ್ಲಿ 54 ರನ್ ನೀಡಿ 4 ವಿಕೆಟ್ ಪಡೆದರು. 102ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜೋ ರೂಟ್ ಇದೇ ಮೊದಲ ಬಾರಿಗೆ 5 ವಿಕೆಟ್ ಪಡೆದರು.