ETV Bharat / sports

ಆಸ್ಟ್ರೇಲಿಯಾ ಟೆಸ್ಟ್​ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬಿಬಿಎಲ್​ನಲ್ಲಿ ಅಬ್ಬರಿಸಿದ ಜೋ ಬರ್ನ್ಸ್​ - ಬ್ರಿಸ್ಬೇನ್​ ಹೀಟ್ಸ್​

ದೇಶಿ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸಿದರೂ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಜೋ ಬರ್ನ್ಸ್​ಗೆ ಅವಕಾಶ ನೀಡಲಾಗಿತ್ತು. ಆದರೆ ಆರಂಭಿಕ ಬ್ಯಾಟ್ಸ್​ಮನ್​ ಮೊದಲ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಮೂರು ಇನ್ನಿಂಗ್ಸ್​ಗಳಲ್ಲಿ 0,4, 8 ರನ್​ಗಳಿಗೆ ಔಟ್​ ಆಗಿ ವಾರ್ನರ್​, ವಿಲ್ ಪುಕೋವ್​ಸ್ಕಿ ಅವರ ಅನುಪಸ್ಥಿತಿಯಲ್ಲಿ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿದ್ದರು.

ಬಿಬಿಎಲ್​ನಲ್ಲಿ ಅಬ್ಬರಿಸಿದ ಜೋ ಬರ್ನ್ಸ್​
ಬಿಬಿಎಲ್​ನಲ್ಲಿ ಅಬ್ಬರಿಸಿದ ಜೋ ಬರ್ನ್ಸ್​
author img

By

Published : Jan 4, 2021, 10:31 PM IST

ಬ್ರಿಸ್ಬೇನ್​: ಜೋ ಬರ್ನ್ಸ್​ ಭಾರತದ ವಿರುದ್ಧ ಮೊದಲೆರಡು ಟೆಸ್ಟ್​ ತಂಡದಲ್ಲಿ ಕಳೆಪೆ ಪ್ರದರ್ಶನ ತೋರಿ ಕೊನೆಯ ಟೆಸ್ಟ್​ ತಂಡದಿಂದ ಹೊರಬಿದ್ದಿದ್ದರು. ಆದರೆ ಇಂದು ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಚ್ಚರಿ ಮೂಡಿಸಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸಿದರೂ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಜೋ ಬರ್ನ್ಸ್​ಗೆ ಅವಕಾಶ ನೀಡಲಾಗಿತ್ತು. ಆದರೆ ಆರಂಭಿಕ ಬ್ಯಾಟ್ಸ್​ಮನ್​ ಮೊದಲ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಮೂರು ಇನ್ನಿಂಗ್ಸ್​ಗಳಲ್ಲಿ 0,4, 8 ರನ್​ಗಳಿಗೆ ಔಟ್​ ಆಗಿ ವಾರ್ನರ್​, ವಿಲ್ ಪುಕೋವ್​ಸ್ಕಿ ಅವರ ಅನುಪಸ್ಥಿತಿಯಲ್ಲಿ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿದ್ದರು.

ರಾಷ್ಟ್ರೀಯ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಜೋ ಬರ್ನ್ಸ್​ ಬಿಬಿಎಲ್​ನಲ್ಲಿ ಬ್ರಿಸ್ಬೇನ್​ ಪರ ಕಣಕ್ಕಿಳಿದಿದ್ದರು. ಅಲ್ಲೂ ಕೂಡ ಮೊದಲ ಪಂದ್ಯದಲ್ಲಿ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದು ಆಕರ್ಷಕ ಅರ್ಧಶತಕ ದಾಖಲಿಸಿ ಮಿಂಚಿದ್ದಾರೆ.

ಸಿಡ್ನಿ ಥಂಡರ್ ನೀಡಿದ 175 ರನ್​ಗಳ ಗುರಿಯನ್ನು ಬೆನ್ನತ್ತಿದ ಬ್ರಿಸ್ಬೇನ್ ಪರ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದರು. 3ನೇ ವಿಕೆಟ್​ಗೆ ಜೋ ಡೆನ್ಲಿ ಜೊತೆಗೂಡಿ 90 ರನ್​ಗಳ ಜೊತೆಯಾಟ ನೀಡಿ ಬರ್ನ್ಸ್​ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 52 ರನ್​ ಗಳಿಸಿ 9 ಎಸೆತಗಳಲ್ಲಿ 6 ರನ್​ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ಆವರು ತಮ್ಮ ಅದ್ಭುತ ಇನ್ನಿಂಗ್ಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಈ ಇನ್ನಿಂಗ್ಸ್​ ಜೋ ಬರ್ನ್ಸ್​ಗೆ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಂದು ವೇಳೆ ಶೇಕಾಡ 100ರಷ್ಟು ಫಿಟ್​ ಇಲ್ಲದ ವಾರ್ನರ್​ ಮತ್ತು ವಿಲ್​ ಪುಕೋವ್​ಸ್ಕಿ ಮೂರನೇ ಪಂದ್ಯದಲ್ಲಿ ವಿಫಲರಾದರೆ ಕೊನೆಯ ಪಂದ್ಯದಲ್ಲಿ ಬರ್ನ್ಸ್​ ಅವಕಾಶ ಪಡೆಯುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.