ಸೆಂಚುರಿಯನ್: ಇಂಗ್ಲೆಂಡ್ ಪರ 150 ಟೆಸ್ಟ್ ಪಂದ್ಯವಾಡುತ್ತಿರುವ ಜೇಮ್ಸ್ ಆ್ಯಂಡರ್ಸನ್ ಇಂದು ತಮ್ಮ ಮೊದಲ ಓವರ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದು ಮಿಂಚಿದ್ದಾರೆ.
ಇಂಗ್ಲೆಂಡ್ ಪರ ಆಲಿಸ್ಟರ್ ಕುಕ್(161) ಬಿಟ್ಟರೆ 150 ಟೆಸ್ಟ್ ಪಂದ್ಯವಾಡಿದ ದಾಖಲೆಗೆ ಪಾತ್ರರಾಗಿದ್ದರು. ಇಂದು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಇನ್ನಿಂಗ್ಸ್ನ ಆರಂಭದ ಎಸೆತದಲ್ಲಿಯೇ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ಮನ್ ಡೀನ್ ಎಲ್ಗರ್ ವಿಕೆಟ್ ಪಡೆದು ತಮ್ಮ ತಂಡಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಅಲ್ಲದೆ ಹಿಂದಿನ 10 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ 5ನೇ ಬೌಲರ್ ಎನಿಸಿಕೊಂಡರು.
ಜೇಮ್ಸ್ ಆ್ಯಂಡರ್ಸನ್ 150 ಪಂದ್ಯವಾಡಿದ ವಿಶ್ವದ ಏಕೈಕ ಬೌಲರ್ ಆಗಿದ್ದು, ಅವರು 576 ವಿಕೆಟ್ ಪಡೆದಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದ ವೇಗದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.
-
AND HE GETS A WICKET ON THE FIRST BALL!
— ICC (@ICC) December 26, 2019 " class="align-text-top noRightClick twitterSection" data="
South Africa are 0/1 at Centurion.#SAvENG https://t.co/XwOefuG4aF
">AND HE GETS A WICKET ON THE FIRST BALL!
— ICC (@ICC) December 26, 2019
South Africa are 0/1 at Centurion.#SAvENG https://t.co/XwOefuG4aFAND HE GETS A WICKET ON THE FIRST BALL!
— ICC (@ICC) December 26, 2019
South Africa are 0/1 at Centurion.#SAvENG https://t.co/XwOefuG4aF
37 ವರ್ಷದ ಆ್ಯಂಡರ್ಸನ್ ತಮ್ಮ 20ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅವರು 2021ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಶಸ್ ಸರಣಿಯವರೆಗೂ ಇಂಗ್ಲೆಂಡ್ ತಂಡದ ಪರ ಆಡುವ ಗುರಿ ಹೊಂದಿದ್ದಾರೆ.