ಸಿಡ್ನಿ: ರವೀಂದ್ರ ಜಡೇಜಾ ಹೊಂದಿರುವ ಅವರ ಆಲ್ರೌಂಡರ್ ಕೌಶಲ್ಯಗಳಿಗೆ ತಕ್ಕಂತೆ ಸಿಕ್ಕಬೇಕಿರುವ ಸ್ಥಾನಮಾನ ಸಿಗುತ್ತಿಲ್ಲ. ಅವರ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಜಡೇಜಾ ಹೆಲ್ಮೆಟ್ಗೆ ಚೆಂಡು ಬಡಿದಿತ್ತು. ಈ ಕಾರಣದಿಂದ ಅವರ ಬದಲು ಚಹಾಲ್ ಕನ್ಕ್ಯೂಷನ್ ಆಟಗಾರನಾಗಿ ಆಡಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಿಂದ ಜಡೇಜಾ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ತುಂಬಲಾರದ ನಷ್ಟ ಎಂದು ಅವರು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
-
For two successive games Ravindra Jadeja showed why he is of so much value to India in white-ball cricket as he provides much needed balance. Even after 11 years he continues to be grossly underrated and deserves a lot more respect than he gets. Feel India will miss him dearly
— Mohammad Kaif (@MohammadKaif) December 4, 2020 " class="align-text-top noRightClick twitterSection" data="
">For two successive games Ravindra Jadeja showed why he is of so much value to India in white-ball cricket as he provides much needed balance. Even after 11 years he continues to be grossly underrated and deserves a lot more respect than he gets. Feel India will miss him dearly
— Mohammad Kaif (@MohammadKaif) December 4, 2020For two successive games Ravindra Jadeja showed why he is of so much value to India in white-ball cricket as he provides much needed balance. Even after 11 years he continues to be grossly underrated and deserves a lot more respect than he gets. Feel India will miss him dearly
— Mohammad Kaif (@MohammadKaif) December 4, 2020
" ರವೀಂದ್ರ ಜಡೇಜಾ ಸತತ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾ ಪರ ವೈಟ್ ಬಾಲ್ ಕ್ರಿಕೆಟ್ನಲ್ಲಿ ತಾವೊಬ್ಬ ಮೌಲ್ಯಯುತ ಹಾಗೂ ತಂಡದ ಸಮತೋಲನಕ್ಕೆ ಅಗತ್ಯವಾಗಿರುವ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ" ಎಂದು ಟ್ವೀಟ್ನಲ್ಲಿ ಕೈಫ್ ತಿಳಿಸಿದ್ದಾರೆ.
ಇದನ್ನು ಓದಿ: ಲಾರಾ ಘೋಷಿಸಿದ ಈ ಯುಗದ ಶ್ರೇಷ್ಠ ಬ್ಯಾಟ್ಸ್ಮನ್-ಬೌಲರ್ಗಳ ಪಟ್ಟಿಯಲ್ಲಿ ಕೊಹ್ಲಿ-ಬುಮ್ರಾ!
" ಅವರು 11 ವರ್ಷಗಳಿಂದ ಇದೇ ರೀತಿಯ ಪ್ರದರ್ಶನ ತೋರುತ್ತಿದ್ದರೂ ಅವರನ್ನು ಕಡೆಗಣಿಸಲಾಗುತ್ತಿದೆ. ಖಂಡಿತ ಅವರು ಈಗ ಪಡೆಯುವತ್ತಿವುದಕ್ಕಿಂತ ಹೆಚ್ಚಿನ ಗೌರವ ಪಡೆಯಲೂ ಅವರು ಅರ್ಹರು. ಅವರ ಸೇವೆಯನ್ನು ಮುಂದಿನ ಪಂದ್ಯಗಳಲ್ಲಿ ಭಾರತ ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಬೇಸರವಾಗುತ್ತಿದೆ" ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.
ಜಡೇಜಾ ಕೊನೆಯ ಏಕದಿನ ಪಂದ್ಯದಲ್ಲಿ 66 ರನ್, ಹಾಗೂ ಮೊದಲ ಟಿ-20 ಪಂದ್ಯದಲ್ಲಿ 23 ಎಸೆತಗಳಲ್ಲಿ 44 ರನ್ ಚಚ್ಚಿದ್ದರು.
ಇದನ್ನು ಓದಿ: ರವೀಂದ್ರ ಜಡೇಜಾಗೆ ಚಹಾಲ್ ಸರಿಸಮನಾದ ಆಟಗಾರನೇ?: ಆಸೀಸ್ ತಂಡದ ಹೆನ್ರಿಕ್ಸ್ ಪ್ರಶ್ನೆ