ನವದೆಹಲಿ: ವೆಸ್ಟ್ ಇಂಡೀಸ್ ತಂಡಕ್ಕೆ ಎರಡು ವಿಶ್ವಕಪ್ ತಂದುಕೊಟ್ಟಿರುವ ಮಾಜಿ ನಾಯಕ ಡರೇನ್ ಸಾಮಿ 2021ರ ಟಿ-20 ವಿಶ್ವಕಪ್ಗೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
36 ವರ್ಷದ ಡರೇನ್ ಸಾಮಿ ಕೆರೆಬಿಯನ್ ತಂಡಕ್ಕೆ 2012 ಹಾಗೂ 2016ರ ಟಿ-20 ವಿಶ್ವಕಪ್ ತಂದುಕೊಟ್ಟಿದ್ದರು. 2017ರಲ್ಲಿ ಕೊನೆಯದಾಗಿ ವಿಂಡೀಸ್ ಪರ ಆಡಿರುವ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಗಿಲು ಇನ್ನೂ ಮುಚ್ಚಿಲ್ಲ. ಸಿಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೆ ತಂಡಕ್ಕೆ ಮರಳುವೆ ಎಂದು ಹೇಳಿಕೊಂಡಿದ್ದಾರೆ.
ಆಗಸ್ಟ್ 18ರಿಂದ ಟ್ರಿನಿಡಾಡ್ ಮತ್ತು ಟೊಬ್ಯಾಗೋದಲ್ಲಿ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಾಮಿ ಸೇಂಟ್ ಲೂಸಿಯಾ ಝೌಕ್ಸ್ ಪರ ಆಡಲಿದ್ದಾರೆ.
"ನಾನಿನ್ನೂ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡಿಲ್ಲ. ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಗಿಲು ಮುಚ್ಚಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ರಾಷ್ಟ್ರೀಯ ತಂಡದ ಆಯ್ಕೆದಾರರು ನನ್ನ ಮೇಲೆ ಗಮನ ಹರಿಸುತ್ತಾರೆ" ಎಂದು ಹೇಳಿದ್ದಾರೆ.
ಸಾಮಿ ವಿಂಡೀಸ್ ಪರ 38 ಟೆಸ್ಟ್ ಪಂದ್ಯಗಳಲ್ಲಿ 1323 ರನ್, 84 ವಿಕೆಟ್, 126 ಏಕದಿನ ಪಂದ್ಯಗಳಲ್ಲಿ 1871 ರನ್ ಹಾಗೂ 81 ವಿಕೆಟ್ ಹಾಗೂ 68 ಟಿ-20 ಪಂದ್ಯಗಳಲ್ಲಿ 587 ರನ್ ಹಾಗೂ 44 ವಿಕೆಟ್ ಪಡೆದಿದ್ದಾರೆ.