ನವದೆಹಲಿ: ಕಪಿಲ್ ದೇವ್ ನಂತರ ಭಾರತ ಕಂಡ ಶ್ರೇಷ್ಠ ಆಲ್ರೌಂಡರ್ ಆಗಿರುವ ಇರ್ಫಾನ್ 7,8ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ತಮ್ಮನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸೂಚಿಸಿದ್ದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎಂದು ಸ್ವತಹ ಪಠಾಣ್ ತಿಳಿಸಿದ್ದಾರೆ.
ಪಠಾಣ್ರನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್ಗೆ ಕಳುಹಿಸಿ ಪ್ರಯೋಗ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆಂದು ಭಾರತ ತಂಡದ ಕೋಚ್ ಆಗಿದ್ದವರು ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಹಾಗೂ ನಾಯಕ ದ್ರಾವಿಡ್ ಆಗಿದ್ದರು. ಆದರೆ 3ನೇ ಕ್ರಮಾಂದಲ್ಲಿ ಪ್ರಯೋಗ ಮಾಡುವ ಉಪಾಯ ಸಚಿನ್ ತೆಂಡೂಲ್ಕರ್ ಅವರದ್ದಾಗಿತ್ತು.
ನನ್ನಲ್ಲಿದ್ದ ದೊಡ್ಡ ಹೊಡೆತ ಹೊಡೆಯುವ ಕೌಶಲ್ಯವನ್ನು ಪರಿಗಣಿಸಿ ಸಚಿನ್ ತೆಂಡೂಲ್ಕರ್ ನಾಯಕ ದ್ರಾವಿಡ್ ಪಠಾಣ್ರನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಕಳುಹಿಸಲು ಸಹೆ ನೀಡಿದ್ದರು. 2005 ರಿಂದ 2008ರವರೆಗೆ ಪಠಾಣ್18 ಬಾರಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಅವರು ಮೂರು ಅರ್ಧಶತಕ ಸಹಿತ 487 ರನ್ಗಳಿಸಿದ್ದಾರೆ.
" ನಾನು ನಿವೃತ್ತಿ ಘೋಷಿಸಿದ ದಿನಗಳಲ್ಲಿ ಈ ಬಗ್ಗೆ ಹೇಳಿದ್ದೇನೆ. ನನ್ನನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಕಳುಹಿಸು ನನ್ನ ವೃತ್ತಿ ಜೀವನ ಅಂತ್ಯವಾಗುವಂತೆ ಮಾಡಿದ್ದು ಎನ್ನಲಾಗುತ್ತಿದೆ. ಆದರೆ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸುವಂತೆ ಉಪಾಯ ಸಚಿನ್ ತೆಂಡೂಲ್ಕರ್ ಅವರದ್ದಾಗಿತ್ತು. ಅವರೇ ದ್ರಾವಿಡ್ಗೆ ನನ್ನಲ್ಲಿರುವ ದೊಡ್ಡ ಹೊಡೆತ ಬಾರಿಸುವ ಗುಣವನ್ನು ಗಮನದಲ್ಲಿಟ್ಟುಕೊಂಡು ಸಚಿನ್ ಪಾಜಿ ಆ ಆಲೋಚನೆ ಮಾಡಿದ್ದರು ಎಂದು ಪಠಾಣ್ ತಿಳಿಸಿದ್ದಾರೆ.
ಆದರೆ ನನ್ನ ವೃತ್ತಿ ಜೀವನ ಹಾಳಾಗಲು ಚಾಪೆಲ್ ಕಾರಣ ಎಂಬ ಸುದ್ದಿ ನಿಜವಲ್ಲ. ಅವರು ಭಾರತದವರಲ್ಲದ ಕಾರಣ ಅವರ ಮೇಲೆ ಪಂಚಿಂಗ್ ಬ್ಯಾಗ್ ಮಾಡುವು ಸುಲಭ ಎಂದು ಪಠಾಣ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪಠಾಣ್ ಕೊನೆಯ ಭಾರಿ ಭಾರತದ ಪರ ಆಡಿದ್ದು 8 ವರ್ಷಗಳ ಹಿಂದೆ, ಅಂದರೆ ಅವರಿಗೆ ಆಗ 28 ವರ್ಷ ವಯಸ್ಸಾಗಿತ್ತು. ಅವಕಾಶ ಸಿಗದೇ ಬೇಸರದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.