ನವದೆಹಲಿ: ಕಳೆದ ಮೂರು ತಿಂಗಳಿಂದ ಕೊರೊನಾದಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಪುನರಾರಂಭ ಕಂಡಿದ್ದು, ವೆಸ್ಟ್ ಇಂಡೀಸ್ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆರಂಭಿಸಿದೆ,
3 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೆ ಆರಂಭವಾಗಿದ್ದು, ಮುಂದಿನ ಎರಡು ಪಂದ್ಯಗಳು ಜುಲೈ 16 ರಿಂದ 20 ಹಾಗೂ ಜುಲೈ 24-28ರವರೆಗೆ ನಡೆಯಲಿವೆ. ಇದೀಗ ಐರ್ಲೆಂಡ್ ತಂಡ ಕೂಡ 3 ಪಂದ್ಯಗಳ ಏಕದಿನ ಸರಣಿಗೆ 21 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಜುಲೈ 31, ಆಗಸ್ಟ್ 1 ಹಾಗೂ ಆಗಸ್ಟ್ 4 ರಂದು ಮೂರು ಏಕದಿನ ಪಂದ್ಯವನ್ನಾಡಲಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳಲು ಜುಲೈ 18 ರಂದೇ ಡಬ್ಲಿನ್ನಿಂದ ಪ್ರಯಾಣ ಬೆಳಸಲಿದೆ. ಮೂರು ಏಕದಿನ ಪಂದ್ಯಗಳು ಸೌತಾಂಪ್ಟನ್ನಲ್ಲೇ ನಡೆಯುವುದರಿಂದ ಏಜಸ್ ಬೌಲ್ನ ಹೋಟೆಲ್ನಲ್ಲೇ ಎಲ್ಲ ಆಟಗಾರರು ಬಯೋ ಸೆಕ್ಯೂರ್ ವಾತಾವರಣದಲ್ಲಿ ಇರಲಿದ್ದಾರೆ.
ಸರಣಿಯಲ್ಲಿ 14 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದ 7 ಮಂದಿಯನ್ನು ಹೆಚ್ಚುವರಿ ಆಟಗಾರರಾಗಿ ತಂಡದ ಜೊತೆ ಇರಲಿದ್ದಾರೆ. ಈ ಸರಣಿ ನಂತರ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 3 ಟೆಸ್ಟ್ ಹಾಗೂ 3 ಟಿ-20 ಪಂದ್ಯಗಳನ್ನಾಡಲಿದೆ.
ಐರ್ಲೆಂಡ್ನ 21 ಸದಸ್ಯರ ತಂಡ:
ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಪಾಲ್ ಸ್ಟಿರ್ಲಿಂಗ್ , ಮಾರ್ಕ್ ಅದೈರ್, ಕರ್ಟಿಸ್ ಕ್ಯಾಂಪರ್, ಪೀಟರ್ ಚೇಸ್, ಗ್ಯಾರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಜೊನಾಥನ್ ಗಾರ್ತ್, ಟೈರೋನ್ ಕೇನ್, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಜೇಮ್ಸ್ ಮೆಕಲ್ಲಮ್, ಕೆವಿನ್ ಒ' ಬ್ರಿಯೆನ್, ವಿಲಿಯಂ ಪೋರ್ಟರ್‌ಫೀಲ್ಡ್, ಬಾಯ್ಡ್ ರಂಕಿನ್, ಸಿಮಿ ಸಿಂಗ್, ಹ್ಯಾರಿ ಟೆಕ್ಟರ್, ಲಾರ್ಕಾನ್ ಟಕರ್, ಗ್ಯಾರಿ ವಿಲ್ಸನ್, ಕ್ರೇಗ್ ಯಂಗ್