ನವದೆಹಲಿ: ಭಾರತ ತಂಡದ ಮಾಜಿ ನಾಯಕ ಧೋನಿ ಸ್ಪರ್ಧಾತ್ಮ ಕ್ರಿಕೆಟ್ಗೆ ಮರಳುತ್ತಿರುವುದು 2020ರ ಐಪಿಎಲ್ಗೆ ಹೆಚ್ಚಿನ ವಿಶೇಷತೆ ತಂದುಕೊಡಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಎಂಎಸ್ ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಭಾಗವಹಿಸಿಲ್ಲ. ಇನ್ನು ಟಿ20 ಕ್ರಿಕೆಟ್ಗೆ ಮರಳಬೇಕೆಂದುಕೊಂಡಿದ್ದ ಅವರಿಗೆ ವಿಶ್ವಕಪ್ ಮುಂದೂಡಿದ್ದರಿಂದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದರು. ಇದೀಗ ಸುಮಾರು 14 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿರುವುದಕ್ಕೆ ಸೆಹ್ವಾಗ್ ಈ ಬಾರಿಯ ಐಪಿಎಲ್ ಹೆಚ್ಚೇ ವಿಶೇಷ ಎಂದಿದ್ದಾರೆ.
ನನ್ನ ಪ್ರಕಾರ ಈ ಟೂರ್ನಾಮೆಂಟ್ ಪ್ರತಿಯೊಬ್ಬರಿಗೂ ಎಕ್ಸ್ಟ್ರಾ ಸ್ಪೆಷಲ್. ಆಟಗಾರನಾಗಿ ಅಥವಾ ವೀಕ್ಷಕನಾಗಿ ಧೋನಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ ಎಂದು ಸಹಾ ನಿರೂಪಕನಾಗಿರುವ ಫ್ಲಿಪ್ಕಾರ್ಟ್ನ 'ಪವರ್ ಪ್ಲೇ ವಿತ್ ಚಾಂಪಿಯನ್ಸ್ ಶೋ'ನಲ್ಲಿ ಸೆಹ್ವಾಗ್ ಹೇಳಿದ್ದಾರೆ.
ಇನ್ನು ದೀರ್ಘ ಸಮಯದ ನಂತರ ಕ್ರಿಕೆಟ್ ಐಪಿಎಲ್ ಮೂಲಕ ಮರಳುತ್ತಿರುವುದರಿಂದ ಮತ್ತೆ ಅಭಿಮಾನಿಗಳಿಗೆ ಸಾಕಷ್ಟು ಆನಂದವನ್ನು ತಂದುಕೊಡಲಿದೆ. ಏಕೆಂದರೆ ಕೋವಿಡ್ ಹಿನ್ನೆಲೆ ಕಳೆದ 6 ತಿಂಗಳಿಂದ ಯಾವುದೇ ಮಾದರಿಯ ಕ್ರಿಕೆಟ್ ನಡೆಯದಿರುವುದರಿಂದ ಅಭಿಮಾನಿಗಳು ಐಪಿಎಲ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ಧೋನಿ ನೇತೃತ್ವದ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಆರಂಭವಾಗಲಿದೆ.