ETV Bharat / bharat

ಇದು ಡಿ.31ರ ಸ್ಪೆಷಲ್​: ಕುಡಿತ ಜಾಸ್ತಿಯಾದರೆ ಹೋಟೆಲ್​​​​​​ನವರೇ ಮನೆಗೆ ಬಿಡ್ತಾರೆ; ಈ ವ್ಯವಸ್ಥೆ ಎಲ್ಲಿದೆ ಗೊತ್ತಾ? - DRUNK CUSTOMER SAFELY DROP TO HOME

ಭಯಬೇಡ, ಕುಡಿತ ಜಾಸ್ತಿಯಾದರೆ ಹೋಟೆಲ್ ನವರೇ ಸುರಕ್ಷಿತವಾಗಿ ಮನೆಗೆ ಬಿಡ್ತಾರೆ - ಪುಣೆ ಹೊಟೇಲ್ ಅಸೋಸಿಯೇಶನ್ ನಿಂದ ಮಹತ್ವದ ನಿರ್ಧಾರ

Pune Hotel
ಇದು ಡಿ.31ರ ಸ್ಪೆಷಲ್​: ಕುಡಿತ ಜಾಸ್ತಿಯಾದರೆ ಹೋಟೆಲ್​​​​​​ನವರೇ ಮನೆಗೆ ಬಿಡ್ತಾರೆ; ಈ ವ್ಯವಸ್ಥೆ ಎಲ್ಲಿದೆ ಗೊತ್ತಾ? (file photo - ETV Bharat)
author img

By ETV Bharat Karnataka Team

Published : Dec 31, 2024, 11:38 AM IST

ಪುಣೆ, ಮಹಾರಾಷ್ಟ್ರ: ಇಂದು ಡಿಸೆಂಬರ್ 31. ಜನವರಿ 1, 2025 ಹೊಸ ವರ್ಷವನ್ನು ಸ್ವಾಗತಿಸಲು ವಿಶ್ವದ ಎಲ್ಲೆಡೆ ಭರದ ಸಿದ್ಧತೆಗಳು ನಡೆದಿವೆ. ಎಲ್ಲ ಮಹಾನಗರಗಳಲ್ಲಿ ಹೋಟೆಲ್‌ಗಳು ಮತ್ತು ಪಬ್ ನಿರ್ವಾಹಕರು ಭರದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅದರಂತೆ ಪುಣೆ ನಗರವು ವರ್ಷಾಚರಣೆಗೆ ಅಣಿಯಾಗಿ ನಿಂತಿದೆ.

ಹೊಸ ವರ್ಷದ ಆಚರಣೆ ಗಮನದಲ್ಲಿಟ್ಟುಕೊಂಡು ಪುಣೆ ಸಿಟಿಯ ಹೊಟೇಲ್ ಅಸೋಸಿಯೇಷನ್‌ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 31 ರಂದು ಪಾರ್ಟಿಯ ನಂತರ ಗ್ರಾಹಕರು ಹೆಚ್ಚು ಪಾನೀಯ ಸೇವಿಸಿದರೆ, ಅಂತಹವರನ್ನು ಓಲಾ, ಉಬರ್​ ಸಹಾಯದಿಂದ ಅವರವರ ಮನೆಗಳಿಗೆ ಬಿಟ್ಟು ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೋಟೆಲ್​​ ಗಳ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ ಹೇಳಿದ್ದಾರೆ.

ಬೆಳಗಿನ 5 ಗಂಟೆವರೆಗೂ ಒಪನ್​ ಇರಲಿವೆ ಹೋಟೆಲ್​ಗಳು: ಹೊಸ ವರ್ಷವನ್ನು ಸ್ವಾಗತಿಸಲು ಇಂದು ಪುಣೆ ನಗರದಲ್ಲಿ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸೆಂಬರ್​ 31 ರಾತ್ರಿಯಿಂದ ಜನವರಿ 1 ರ ಬೆಳಗಿನ ಜಾವ 5 ಗಂಟೆಗಳ ವರೆಗೂ ಹೋಟೆಲ್‌, ಬಾರ್​​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈ ಮೂಲಕ ನಾಗರಿಕರು ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಲು ಅನುವು ಮಾಡಿಕೊಡಲಾಗಿದೆ.

ಹೋಟೆಲ್​ ಮಾಲೀಕರ ಸಂಘ ಹೇಳಿದ್ದಿಷ್ಟು: ಈ ಬಗ್ಗೆ ಮಾಹಿತಿ ನೀಡಿರುವ ಹೋಟೆಲ್‌ಗಳ ಸಂಘದ ಅಧ್ಯಕ್ಷ ಗಣೇಶ್‌ ಶೆಟ್ಟಿ, ನಮ್ಮ ಅಸೋಸಿಯೇಷನ್​​​​ ನಿರ್ಧಾರದ ಪ್ರಕಾರ ಜನವರಿ 1 ರ ಬೆಳಗಿನ ಜಾವ 5 ಗಂಟೆಯವರೆಗೆ ಹೋಟೆಲ್‌ಗಳು ತೆರೆದಿರಲಿವೆ. ಈ ನಿರ್ಧಾರಕ್ಕೆ ಅನುಮತಿ ನೀಡಿರುವ ಸರ್ಕಾರಕ್ಕೆ ನಾವು ಮೊದಲಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಒಬ್ಬ ವ್ಯಕ್ತಿ ಅತಿಯಾಗಿ ಕುಡಿದರೆ, ಅವರಿಗೆ ಸರ್ವ್ ಮಾಡುವುದನ್ನು ನಿಲ್ಲಿಸುತ್ತೇವೆ. ಅಷ್ಟೇ ಅಲ್ಲ ಈಗಲೇ ನಿಲ್ಲಿಸಿ ಎಂದು ಅವರ ಗುಂಪಿನಲ್ಲಿರುವವರಿಗೆ ಹೇಳಲಿದ್ದೇವೆ. ಆ ದಿನ ಯಾರೂ ವಾದ ಮಾಡಬಾರದು ಎಂದು ನಾವು ಗ್ರಾಹಕರಿಗೂ ಮತ್ತು ಸಿಬ್ಬಂದಿಗೂ ಮನವಿ ಮಾಡುತ್ತಿದ್ದೇವೆ. ತಮ್ಮ ಕರ್ತವ್ಯವನ್ನು ಶಾಂತಿಯಿಂದ ಮಾಡಿ. ನಮ್ಮ ಗುಂಪಿನಲ್ಲಿರುವ ಓಲಾ ಉಬರ್ ಕಾರ್ ಡ್ರೈವರ್‌ಗಳಿಗೆ ಇಂದು ತಡ ರಾತ್ರಿ 1 ರಿಂದ 3:30ರ ನಂತರ ಸಿದ್ಧರಾಗಿರಲು ನಾವು ಹೇಳಿದ್ದೇವೆ. ಏಕೆಂದರೆ ವ್ಯಕ್ತಿಯೊಬ್ಬ ಹೆಚ್ಚು ಕುಡಿದು ಓಡಾಡಲು ಆಗಲ್ಲ ಎಂಬುವವರನ್ನು ಗುರುತಿಸಿ, ಅವರು ಸ್ವಂತ ಬೈಕ್​​ ಅಥವಾ ಕಾರು ತಂದಿದ್ದರೂ ಅವರನ್ನು ಓಲಾ, ಉಬರ್​​​​ ಗಳ ಮೂಲಕ ಮನೆಗೆ ಬಿಡುತ್ತೇವೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕಾನೂನು ಪಾಲನೆ ಮತ್ತು ಆಗಬಹುದಾದ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ: ಹೊಸ ವರ್ಷವನ್ನು ಸ್ವಾಗತಿಸಲು ನಗರದ ಹೊಟೇಲ್ ಉದ್ಯಮಿಗಳು ಸಾಕಷ್ಟು ತಯಾರಿ ನಡೆಸಿದ್ದು, ಕೆಲವು ಹೋಟೆಲ್‌ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶೆಟ್ಟಿ ತಿಳಿಸಿದ್ದಾರೆ.

ಇದನ್ನು ಓದಿ: 2024ಕ್ಕೆ ಗುಡ್ ​​​​ಬೈ​, 2025ಕ್ಕೆ ವೆಲ್​ಕಮ್​ ಮಾಡಲು ಕ್ಷಣಗಣನೆ: ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.