ETV Bharat / sports

ಕೊರೊನಾ ಭೀತಿ: ಏ. 15ರವರೆಗೆ ಐಪಿಎಲ್​​ನಲ್ಲಿ ಭಾಗಿಯಾಗಲ್ಲ ವಿದೇಶಿ ಆಟಗಾರರು​! - ಕೊರೊನಾ ವೈರಸ್​

ಮಹಾಮಾರಿ ಕೊರೊನಾ ಭೀತಿ ಇಂಡಿಯನ್​ ಪ್ರೀಮಿಯರ್​​ ಲೀಗ್​ಗೂ ಆವರಿಸಿದೆ. ಈಗಾಗಲೇ ನಿಗದಿಯಾಗಿರುವಂತೆ ಟೂರ್ನಿ ನಡೆಸಬೇಕೋ ಅಥವಾ ಮುಂಡಬೇಕೋ ಎಂಬ ಗೊಂದಲ ಮೂಡಿದೆ.

Ipl governing committee meeting
ಇಂಡಿಯನ್​ ಪ್ರೀಮಿಯುರ್​ ಲೀಗ್​​
author img

By

Published : Mar 12, 2020, 8:59 AM IST

Updated : Mar 12, 2020, 12:23 PM IST

ಮುಂಬೈ: ವಿಶ್ವದ 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್​ ಹರಡಿದ್ದು, ಆತಂಕ ಸೃಷ್ಟಿಸಿದೆ. ಈಗಾಗಲೇ ಜಪಾನ್​ನ ಟೋಕಿಯೋದ ಒಲಿಂಪಿಕ್ಸ್​ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಹೀಗಾಗಿ ಪೂರ್ವಭಾವಿ ಕಾರ್ಯಕ್ರಮಗಳು ಬಹುತೇಕ ರದ್ದಾಗಿವೆ. ಇನ್ನು ಇದೇ ತಿಂಗಳ 29ರಿಂದ ಆರಂಭವಾಗಲಿರುವ ದೇಶದ ಶ್ರೀಮಂತ ಐಪಿಎಲ್​ ಟೂರ್ನಿ ಮೇಲೂ ಕೊರೊನಾ ಕೆಂಗಣ್ಣು ಬಿದ್ದಿದೆ.

ಈ ಹಿನ್ನೆಲೆಯಲ್ಲಿ ಮಾರ್ಚ್​ 14ರಂದು ಮುಂಬೈನಲ್ಲಿ ಐಪಿಎಲ್​​ ಗವರ್ನಿಂಗ್​ ಕೌನ್ಸಿಲ್​ನ ಮಹತ್ವದ ಸಭೆ ನಡೆಯಲಿದೆ. ಐಪಿಎಲ್​ ಟೂರ್ನಿ ನಿಗದಿಯಂತೆ ಆರಂಭಿಸುವುದೋ ಅಥವಾ ಬೇಡವೋ ಎಂಬ ಬಗ್ಗೆ ಈ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಬಾಸ್​​ ಸೌರವ್​ ಗಂಗೂಲಿ, ಯಾವುದೇ ಕಾರಣಕ್ಕೂ ಐಪಿಎಲ್ ಮುಂದೂಡಿಕೆ ಮಾಡಲ್ಲ. ಈಗಾಗಲೇ ನಿಗದಿ ಮಾಡಿರುವ ವೇಳಾಪಟ್ಟಿಯಂತೆ​ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್​ ಹರಡಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಬಿಸಿಸಿಐ ಕೂಡಾ ಇದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್​ 29ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಏಪ್ರಿಲ್​ 15ರವರೆಗೆ ಐಪಿಎಲ್​ನಲ್ಲಿ ಭಾಗಿಯಾಗಲ್ಲ ವಿದೇಶಿ ಪ್ಲೇಯರ್ಸ್

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವಿದೇಶಿ ಪ್ಲೇಯರ್ಸ್ ಭಾಗಿಯಾಗಬೇಕಾಗಿದೆ. ಆದರೆ ಈಗಾಗಲೇ ಕೇಂದ್ರ ಸರ್ಕಾರ ವಿದೇಶಿಗರ ವೀಸಾ ಮೇಲೆ ಏಪ್ರಿಲ್​​ 15ರವರೆಗೆ ನಿರ್ಬಧ ಹೇರಿರುವ ಕಾರಣ ಅವರು ಭಾರತಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ವಿದೇಶಿ ಆಟಗಾರರಿಲ್ಲದೆ ಕೆಲವೊಂದು ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.

ಕ್ರೀಡಾಭಿಮಾನಿಗಳಿಲ್ಲದೇ ಐಪಿಎಲ್​!?

ಮುಂಬೈನಲ್ಲಿ ಮೊದಲ ಪಂದ್ಯ ನಡೆಯಬೇಕಾಗಿರುವ ಕಾರಣ ಮಹಾರಾಷ್ಟ್ರ ಸರ್ಕಾರ, ಮೈದಾನದಲ್ಲಿ ಕ್ರೀಡಾಭಿಮಾನಿಗಳಿಲ್ಲದೇ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಅನುಮತಿ ನೀಡಲು ನಿರ್ಧಾರ ತೆಗೆದುಕೊಂಡಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿದ್ದು, ಕೊರೊನಾ ವೈರಸ್​ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದಲ್ಲಿನ ಕ್ಯಾಬಿನೆಟ್​ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

Last Updated : Mar 12, 2020, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.