ETV Bharat / sports

IPL​ ರದ್ದಾದರೆ ಬಿಸಿಸಿಐಗೆ ಅಂದಾಜು 4,000 ಕೋಟಿ ರೂ ನಷ್ಟ: ಅರುಣ್​ ಸಿಂಗ್​ ಧುಮಾಲ್​

ಮಾರ್ಚ್​ 29 ರಿಂದ 12ನೇ ಆವೃತ್ತಿಯ ಐಪಿಎಲ್​ ಟೂರ್ನಿ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್​ಡೌನ್​ನಿಂದ ಏಪ್ರಿಲ್​ 15ಕ್ಕೆ ಕ್ರೀಡಾಕೂಟ ಮುಂದೂಡಬೇಕಾಯ್ತು. ನಂತರ ಲಾಕ್​ಡೌನ್​ ವಿಸ್ತರಿಸಲ್ಪಟ್ಟ ಕಾರಣ ಮತ್ತೆ ಅನಿರ್ಧಿಷ್ಟಾವಧಿಗೆ ಭಾರತದ ಮಿಲಿಯನ್ ಡಾಲರ್‌ ಆಟ ಮುಂದೆ ಹೋಗಿದೆ.

author img

By

Published : May 13, 2020, 9:24 AM IST

ಐಪಿಎಲ್​ 2020
ಐಪಿಎಲ್​ 2020

ಮುಂಬೈ: ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟ ಐಪಿಎಲ್​ ರದ್ದಾದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಭಾರಿ ನಷ್ಟವಾಗಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್​ ಸಿಂಗ್​ ಧುಮಾಲ್​ ತಿಳಿಸಿದ್ದಾರೆ.

ಬಿಸಿಸಿಐ ತುಂಬಾ ನಷ್ಟವನ್ನು ಎದುರು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದ್ವೇಳೆ ಟೂರ್ನಿ ನಡೆಯದೇ ಹೋದರೆ ಸುಮಾರು ನಾಲ್ಕು ಸಾವಿರ ಕೋಟಿ ರೂ ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ನಷ್ಟವಾಗಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್​ ತಿಳಿಸಿದ್ದಾರೆ.

ಈ ವರ್ಷ ಐಪಿಎಲ್‌ ಆಯೋಜಿಸುವುದರ ಕುರಿತು ಖಚಿತವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಕೊರೊನಾ ತೊಂದರೆಯಿಂದಾಗಿ ಎಷ್ಟು ಪಂದ್ಯಗಳು ರದ್ದಾಗಲಿವೆ? ಎಂಬ ಸ್ಪಷ್ಟ ಚಿತ್ರಣ ಸಿಕ್ಕ ನಂತರವಷ್ಟೇ ನಮಗಾಗುವ ನಷ್ಟವನ್ನು ನಿಖರವಾಗಿ ಹೇಳಲು ಸಾಧ್ಯ ಎಂದು ಧುಮಾಲ್​ ಹೇಳಿದರು.

ಕಳೆದ ವರ್ಷ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ 51 (6.7 ಬಿಲಿಯನ್​ ಡಾಲರ್​) ಸಾವಿರ ಕೋಟಿ ರೂ ಇತ್ತೆಂದು ಎಂದು ಡಫ್‌ ಆ್ಯಂಡ್​ ಫೆಲ್ಪ್ಸ್‌ ಫೈನಾನ್ಶಿಯಲ್‌ ಕನ್ಸಲ್ಟೆನ್ಸಿ ವರದಿಯಲ್ಲಿ ತಿಳಿಸಿದೆ. ಭಾರತದ ಬ್ರಾಡ್​ಕಾಸ್ಟರ್​ ಸ್ಟಾರ್‌ ಸ್ಪೋರ್ಟ್ಸ್‌ ಸಮೂಹವು ₹1,700 (220 ಮಿಲಿಯನ್​ ಡಾಲರ್​) ಕೋಟಿಗೂ ಅಧಿಕ ಮೊತ್ತ ನೀಡಿ 2022ರವರೆಗೆ ಐಪಿಎಲ್​ ಪ್ರಸಾರದ ಹಕ್ಕುಗಳನ್ನು ಪಡೆದಿದೆ. ಈ ಬಾರಿ ಲೀಗ್‌ನಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ಸುಮಾರು 3,000 ಕೋಟಿ ರೂ ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು.

ಕೊರೊನಾ ಬಿಕ್ಕಟ್ಟಿನಿಂದ ಕ್ರಿಕೆಟ್‌ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಹಾಗೂ ಲಾ ಲಿಗಾ ಫುಟ್‌ಬಾಲ್‌ ಸಂಸ್ಥೆಗಳು ಈಗಾಗಲೇ ತಮ್ಮ ಸಿಬ್ಬಂದಿ ವೇತನ ಕಡಿತಕ್ಕೆ ಮುಂದಾಗಿವೆ.

ಈ ಕುರಿತು ಮಾತನಾಡಿರುವ ಧುಮಾಲ್‌, ವೇತನ ಕಡಿತದ ಬಗ್ಗೆ ಇನ್ನೂ ಯಾವುದೇ ಆಲೋಚನೆಯಿಲ್ಲ. ಆದರೆ ನಷ್ಟದ ಕುರಿತ ಸ್ಪಷ್ಟತೆ ಸಿಕ್ಕ ನಂತರ ಮುಂದೇನು ಮಾಡಬೇಕೆಂಬುದನ್ನು ಯೋಚಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.