ಮುಂಬೈ: 7 ದಿನಗಳ ಕ್ವಾರಂಟೈನ್ ಮುಗಿಸಿರುವ ಉಮೆಶ್ ಯಾದವ್ ಅಭ್ಯಾಸ ಆರಂಭಿಸಿದ್ದು, ಮತ್ತೆ ತಮ್ಮ ಹಳೆಯ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ರಪ ಆಡುವುದಕ್ಕೆ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.
ಉಮೇಶ್ ಯಾದವ್ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಡೆಲ್ಲಿ ಡೇರ್ ಡೇವಿಲ್ಸ್(ಕ್ಯಾಪಿಟಲ್ಸ್) ಪರ ಆಡಿದ್ದರು. ಇದೀಗ ಆರ್ಸಿಬಿಯಿಂದ ಹೊರಬಿದ್ದಿದ್ದ ಅವರನ್ನು ಮೂಲಬೆಲೆ 1 ಕೋಟಿ ರೂ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.
ಒಂದು ವಾರದ ಕ್ವಾರಂಟೈನ್ ಮುಗಿದ ನಂತರ ಹುಡುಗರ ಜೊತೆಗೆ ಮೈದಾನಕ್ಕಿಳಿದದು ಕೆಲವು ಸಮಯ ಕಳೆದಿರುವುದು ಅದ್ಭುತವೆನ್ನಿಸುತ್ತಿದೆ. ನನ್ನ ಕೈಗೆ ಚೆಂಡು ಪಡೆದಾಗಲೆಲ್ಲಾ ಉತ್ತಮವಾದದ್ದನ್ನೇ ಮಾಡಲು ನಾನು ಬಯಸುತ್ತೇನೆ. ನಾನು ಖಂಡಿತವಾಗಿಯೂ ನನ್ನ ತಂಡಕ್ಕೆ ಅತ್ಯುತ್ತಮವಾದದನ್ನು ನೀಡುತ್ತೇನೆ ಮತ್ತು ಪ್ರತಿದಿನ ಉತ್ತಮಗೊಳ್ಳುತ್ತಿದ್ದೇನೆ ಎಂದು 121 ಐಪಿಎಲ್ ಪಂದ್ಯಗಳಿಂದ 119 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಡಿಸಿ ವೆಬ್ಸೈಟ್ಗೆ ತಿಳಿಸಿದ್ದಾರೆ.
ಡೆಲ್ಲಿ ತಂಡದ ಪರ ನನ್ನ ಐಪಿಎಲ್ ವೃತ್ತಿ ಜೀವನವನ್ನು ಆರಂಭಿಸಿದ್ದೆ. ಹಾಗಾಗಿ ಮತ್ತೆ ಈ ತಂಡ ಸೇರಿರುವುದು ಮರಳಿ ಮನೆಗೆ ಬಂದಂತೆ ಭಾವಿಸುತ್ತಿದ್ದೇನೆ. ತಂಡದಲ್ಲಿ ಬಹಳಷ್ಟು ಆಟಗಾರರಿದ್ದಾರೆ ಎಂದು ನನಗೆ ತಿಳಿದಿದೆ. ನಾನು ಸ್ವಲ್ಪ ಸಮಯದಿಂದ ಇಶಾಂತ್ ಶರ್ಮಾ, ಆಕ್ಷರ್ ಪಟೇಲ್ ಮತ್ತು ರಿಷಭ್ ಪಂತ್ ಅವರೊಂದಿಗೆ ಆಡುತ್ತಿದ್ದೇನೆ. ಹಾಗಾಗಿ ಹೊಸ ತಂಡ ಸೇರಿದ್ದೇನೆ ಎನ್ನಿಸುತ್ತಿಲ್ಲ. ಈಗಾಗಲೆ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಹೊಂದಿಕೊಂಡಿದ್ದೇನೆ ಎಂದು ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: 'ಭವಿಷ್ಯದಲ್ಲಿ ಪಂತ್ರನ್ನು ಭಾರತದ ನಾಯಕ ಸ್ಥಾನಕ್ಕೆ ಮುಂಚೂಣಿ ಸ್ಪರ್ಧಿಯಾಗಿ ನೋಡಿದರೆ ಅಚ್ಚರಿಯಿಲ್ಲ'