ETV Bharat / sports

ಟ್ವಿಟರ್​ನಲ್ಲಿ ಸಿಎಸ್​ಕೆ ಹೆಚ್ಚು ಟ್ವೀಟ್ ಮಾಡಲ್ಪಟ್ಟ ತಂಡ: ಕೊಹ್ಲಿ ಅತ್ಯಂತ ಜನಪ್ರಿಯ ಆಟಗಾರ

ಮುಂಬೈ ಇಂಡಿಯನ್ಸ್​ , ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ಪ್ಲೇ ಆಫ್​ ತಲುಪಿದ್ದವು. ಆದರೆ, ಸಿಎಸ್​ಕೆ 7ನೇ ಸ್ಥಾನಕ್ಕೆ ಕುಸಿದಿತ್ತು. ಆದರೂ ಸಾಮಾಜಿಕ ಜಾಲಾತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐಪಿಎಲ್ 2021
ಐಪಿಎಲ್ 2021
author img

By

Published : Nov 18, 2020, 4:33 PM IST

ಮುಂಬೈ: 13ನೇ ಐಪಿಎಲ್​ ಮುಕ್ತಾಯವಾಗಿದ್ದು, ಮುಂಬೈ ಇಂಡಿಯನ್ಸ್​ ತಂಡ 5ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. ಆದರೆ, ಟ್ವಿಟರ್​​ನಲ್ಲಿ ಫ್ಲೇ ಆಫ್​ ತಲುಪದ ತಂಡವಾಗಿರುವ ಸಿಎಸ್​ಕೆ ಐಪಿಎಲ್​ನಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ ಇಂಡಿಯನ್ಸ್​ , ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ಪ್ಲೇ ಆಫ್​ ತಲುಪಿದ್ದವು. ಆದರೆ, ಸಿಎಸ್​ಕೆ 7ನೇ ಸ್ಥಾನಕ್ಕೆ ಕುಸಿದಿತ್ತು. ಆದರೂ ಸಾಮಾಜಿಕ ಜಾಲಾತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟ್ವಿಟರ್​ ಇಂಟರ್ನಲ್​ ಡಾಟಾ ಪ್ರಕಾರ ಸಿಎಸ್​ಕೆ , ಮುಂಬೈ ಮತ್ತು ಆರ್​ಸಿಬಿ ತಂಡಗಳು ಐಪಿಎಲ್​ನ ಅತಿ ಹೆಚ್ಚು ಜನಪ್ರಿಯ ತಂಡಗಳಾಗಿವೆ. ಆದರೆ, ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ ಸಾಮಾಜಿಕ ಜಾಲಾತಾಣಗಳ ಜನಪ್ರಿಯತೆಯಲ್ಲಿ 8ನೇ ಸ್ಥಾನ ಪಡೆದಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. #IPL2020, #Whistlepodu, and #CSK ಅತಿ ಹೆಚ್ಚು ಬಾರಿ ಟ್ವೀಟ್ ಮಾಡಿರುವ ಹ್ಯಾಸ್​ಟ್ಯಾಗ್​ಗಳಾಗಿವೆ. ಇನ್ನು ಜನಪ್ರಿಯ ಪಂದ್ಯದ ವಿಭಾದಲ್ಲಿ ಮುಂಬೈ ಪ್ರಾಬಲ್ಯ ಸಾಧಿಸಿದೆ. #MI vsCSK ಅತಿ ಹೆಚ್ಚು ಜನಪ್ರಿಯ ಪಡೆದ ಪಂದ್ಯದ ಹ್ಯಾಸ್​ಟ್ಯಾಗ್ ಆಗಿದೆ. ಇದನ್ನು ಬಿಟ್ಟರೆ #MIvsSRH ಮತ್ತು #MIvsDC ಎರಡನೇ ಸ್ಥಾನ ಪಡೆದುಕೊಂಡಿದೆ.

ಸಚಿನ್​ ತೆಂಡೂಲ್ಕರ್​ ಟ್ವೀಟ್​ ಐಪಿಎಲ್​ನ ಗೋಲ್ಡನ್ ಟ್ವೀಟ್ ಆಗಿದೆ. ​ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಿಕೋಲಸ್​ ಪೂರನ್​ ಡೈವ್​ ಮಾಡಿ ಬೌಂಡರಿ ತಡೆದಿದ್ದ ಪೋಟೋವನ್ನು ಸಚಿನ್ ಶೇರ್​ ಮಾಡಿದ್ದರು. ಈ ಟ್ವೀಟ್​ 2 ಲಕ್ಷಕ್ಕೂ ಹೆಚ್ಚು ಲೈಕ್ ಹಾಗೂ 23,000 ರೀಟ್ವೀಟ್​ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.