ಹೈದರಾಬಾದ್: 2021ರ ಐಪಿಎಲ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವಸಲುವಾಗಿ ಹಲವು ಆಟಗಾರರನ್ನು ಉಳಿಸಿಕೋಂಡು, ಕೆಲವರನ್ನು ಬಿಡುಗಡೆ ಮಾಡಿರುವ ತಂಡಗಳು, ಉತ್ತಮ ಆಟಗಾರರನ್ನು ಕೊಂಡುಕೊಳ್ಳುವ ಲೆಕ್ಕಾಚಾರದಲ್ಲಿವೆ.
ಫೆ.16 ರಂದು ನಡೆಯಲಿರುವ ಮಿನಿ ಹರಾಜಿಗೆ ಎಲ್ಲ ತಂಡಗಳು ಸಿದ್ಧವಾಗುತ್ತಿದ್ದು, ತಮ್ಮ ಬಳಿ ಉಳಿದಿರುವ ಹಣದಲ್ಲಿ ಸಮರ್ಥ ಆಟಗಾರರನ್ನು ಖರೀದಿಸಲು ಯೋಜನೆ ರೂಪಿಸುತ್ತಿವೆ.
ಯಾವ ತಂಡದ ಬಳಿ ಎಷ್ಟು ಹಣವಿದೆ:
ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್.ಧೋನಿ ನೇತೃತ್ವದ ಸಿಎಸ್ಜೆ ತಂಡ ಕೇದಾರ್ ಜಾಧವ್, ಶೇನ್ ವ್ಯಾಟ್ಸನ್, ಮುರಳಿ ವಿಜಯ್ ಮತ್ತು ಇತರರನ್ನು ಬಿಡುಗಡೆ ಮಾಡಿದ ಕಾರಣ, ಅವರು ಈಗ ತಮ್ಮ ಖಾತೆಯಲ್ಲಿ ಸಾಕಷ್ಟು ಹಣವನ್ನು ಹೊಂದಿದ್ದು, ಹರಾಜಿನಲ್ಲಿ 22.9 ಕೋಟಿ ರೂ. ಖರ್ಚು ಮಾಡಬಹುದಾಗಿದೆ.
ಮುಂಬೈ ಇಂಡಿಯನ್ಸ್: ಐದು ಬಾರಿಯ ಐಪಿಎಲ್ ಚಾಂಪಿಯನ್ಸ್ ಆಗಿರುವ ಮುಂಬೈ ತಂಡ ಹೆಚ್ಚಾಗಿ ವಿದೇಶಿ ವೇಗಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬೌಲರ್ಗಳ ಖರೀದಿಸಲು ಯೋಜನೆ ರೂಪಿಸಿದ್ದು, ಹಾಲಿ ಚಾಂಪಿನ್ನರ ಖಾತೆಯಲ್ಲಿ 15.35 ಕೋಟಿ ರೂಪಾಯಿ ಉಳಿದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ತಂಡವು 10 ಆಟಗಾರರನ್ನು ಬಿಡುಗಡೆ ಮಾಡಿದ ಕಾರಣ ಹೆಚ್ಚು ಹಣ ಹೊಂದಿರುವ ಎರಡನೇ ಅತಿದೊಡ್ಡ ವಾಗಿದೆ. ಬೆಂಗಳೂರು ಮೂಲದ ಫ್ರ್ಯಾಂಚೈಸ್ ಉತ್ತಮ ತಂಡ ಕಟ್ಟಬೇಕಾಗಿದ್ದು, ಮುಂಬರುವ ಸೀಸನ್ನಲ್ಲಿ ಬಲವಾದ ತಂಡವನ್ನು ನಿರ್ಮಿಸಲು 35.9 ಕೋಟಿ ರೂ. ಹೊಂದಿದೆ.
ಕೋಲ್ಕತಾ ನೈಟ್ ರೈಡರ್ಸ್: ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಕೆಕೆಆರ್, ದಿನೇಶ್ ಕಾರ್ತಿಕ್ ಮತ್ತು ಕುಲದೀಪ್ ಯಾದವ್ ಅವರನ್ನು ಉಳಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಇಯೊನ್ ಮೋರ್ಗಾನ್ ನೇತೃತ್ವದ ತಂಡದಲ್ಲಿ 10.75 ಕೋಟಿ ರೂ.ಗಳ ಬಾಕಿ - ಉಳಿದಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್: ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶೆಲ್ಡನ್ ಕಾಟ್ರೆಲ್ ಬಿಡುಗಡೆಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಭಾರಿ ಮೊತ್ತದ ಹಣವ ಹೊಂದಿದ್ದು, ಹರಾಜಿನಲ್ಲಿ 53.2 ಕೋಟಿ ರೂ. ಖರ್ಚು ಮಾಡಬಹುದಾಗಿದೆ. ಈ ಹಿಂದೆ ಮ್ಯಾಕ್ಸ್‌ವೆಲ್10.75 ಕೋಟಿ ರೂ. ಮತ್ತು ಕಾಟ್ರೆಲ್ ಅನ್ನು 8.5 ಕೋಟಿ ರೂ. ಖರ್ಚು ಮಾಡಿ ಖರೀದಿಸಿತ್ತು.
ಸನ್‌ರೈಸರ್ಸ್ ಹೈದರಾಬಾದ್: ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾದ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಬಳಿ 10.75 ಕೋಟಿ ರೂ. ಉಳಿದಿದೆ. ಅವರ ಯಶಸ್ಸು ಯುವ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಋತುವಿನಲ್ಲಿ ಕೆಲವು ಅನುಭವಿ ಆಟಗಾರರು ಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್: ಆರು ಆಟಗಾರರನ್ನು ಬಿಡುಗಡೆ ಮಾಡುವುದರ ಹೊರತಾಗಿ, ದೆಹಲಿ ಕ್ಯಾಪಿಟಲ್ಸ್ ಇಬ್ಬರು ಆಟಗಾರರನ್ನು ಕ್ಯಾಷ್ ಡೀಲ್ ಮೂಲಕ ಆರ್‌ಸಿಬಿಗೆ ವ್ಯಾಪಾರ ಮಾಡಿದ್ದು, ಅವರ ಬಳಿ 12.9 ಕೋಟಿ ರೂ. ಉಳಿದಿದೆ.
ರಾಜಸ್ಥಾನ್ ರಾಯಲ್ಸ್: ಐಪಿಎಲ್ 2021 ಹರಾಜಿಗೆ ಮುಂಚಿತವಾಗಿ ಹೆಚ್ಚು ಹಣ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತನ್ನ ನಾಯಕನನ್ನು ಬಿಡುಗಡೆ ಮಾಡಿದ ಏಕೈಕ ತಂಡವಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ನಾಯಕನನ್ನಾಗಿ ಘೋಷಣೆ ಮಾಡಿದ್ದು, ಆರ್ಆರ್ ತಂಡದಲ್ಲಿ 34.85 ಕೋಟಿ ರೂ. ಬಾಕಿ ಉಳಿದಿದೆ.