ETV Bharat / sports

ಹೈದರಾಬಾದ್​ ಮಣಿಸಿ ಫೈನಲ್ ಪ್ರವೇಶಿಸಲು ನಾವು ಸಮರ್ಥ : ಮಾರ್ಕಸ್ ಸ್ಟೋಯ್ನಿಸ್​ ಕಾನ್ಫಿಡೆಂಟ್‌

author img

By

Published : Nov 8, 2020, 4:56 PM IST

ಸ್ಟೋಯ್ನಿಸ್​ ಟೂರ್ನಿಯಲ್ಲಿ 314 ರನ್​ ಗಳಿಸಿದ್ದಲ್ಲದೇ 9 ವಿಕೆಟ್‌ಗಳನ್ನ ಸಹ ಪಡೆದಿದ್ದಾರೆ. ಅವರು ಯಾವುದೇ ವಾದವಿಲ್ಲದೆ ಈ ಸೀಸನ್​ನ ಉತ್ತಮ ಆಟಗಾರರಲ್ಲಿ ಒಬ್ಬರು ಎಂದು ಹೇಳಬಹುದು. ಕೆಲ ಪಂದ್ಯಗಳನ್ನ ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ..

ಮಾರ್ಕಸ್ ಸ್ಟೋಯ್ನಿಸ್​
ಮಾರ್ಕಸ್ ಸ್ಟೋಯ್ನಿಸ್​

ದುಬೈ : ಇಂದು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಡೆಲ್ಲಿ ಕಾಪಿಟಲ್ಸ್​ ತಂಡ ಸೆಣೆಸಲಿದೆ. ಡೆಲ್ಲಿ ​ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಎದುರಾಳಿ ತಂಡವನ್ನ ಅಪಾಯಕಾರಿ ಎಂದು ಕರೆದಿದ್ದಾರೆ. ಆದರೂ ಆ ತಂಡವನ್ನು ಮಣಿಸಿ ಫೈನಲ್​ಗೆ ಅರ್ಹತೆ ಪಡೆಯುವ ಸಾಮರ್ಥ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ನಡೆದ ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡ 57 ರನ್​ಗಳ ಹೀನಾಯ ಸೋಲು ಕಂಡಿತ್ತು. ಇದೀಗ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈನಷ್ಟೇ ಬಲಿಷ್ಟ ತಂಡವನ್ನು ಹೊಂದಿರುವ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ, ಲೀಗ್​ನಲ್ಲಿ ನಡೆದ 2 ಪಂದ್ಯಗಳಲ್ಲೂ ಡೆಲ್ಲಿ ಸೋಲು ಕಂಡಿದೆ.

ಅವರು ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಸೀಸನ್​ನಲ್ಲಿ ಲೀಗ್​ ಫಿನಿಶ್​ ಮಾಡಿ ಪ್ಲೇಆಫ್​ ತಲುಪಿದ ರೀತಿ ತುಂಬಾ ಉತ್ತಮವಾಗಿತ್ತು. ಕಳೆದ ರಾತ್ರಿಯ ಪಂದ್ಯದಲ್ಲೂ ಗೆದ್ದಿದ್ದಾರೆ. ಆ ತಂಡ ಬಲಿಷ್ಠವಾಗಿದ್ದು, ಅದರಲ್ಲಿ ಕೆಲವು ಅತ್ಯುತ್ತಮ ಬ್ಯಾಟ್ಸ್​ಮನ್​ಗಳಿದ್ದಾರೆ.

ಅವರೆಲ್ಲಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜೊತೆಗೆ ಅಪಾಯಕಾರಿಯಾದ ಕೆಲವು ಬೌಲರ್​ಗಳನ್ನು ಹೈದರಾಬಾದ್​ ಹೊಂದಿದೆ. ಹೀಗಾಗಿ, ಇದು ಒಳ್ಳೆಯ ಪಂದ್ಯವಾಗಲಿದೆ ಎಂದು ಮಾರ್ಕಸ್​ ಸ್ಟೋಯ್ನಿಸ್​ ಹೇಳಿದ್ದಾರೆ.

ಮಾರ್ಕಸ್ ಸ್ಟೋಯ್ನಿಸ್​
ಮಾರ್ಕಸ್ ಸ್ಟೋಯ್ನಿಸ್​

ಸ್ಟೋಯ್ನಿಸ್​ ಟೂರ್ನಿಯಲ್ಲಿ 314 ರನ್​ ಗಳಿಸಿದ್ದಲ್ಲದೇ 9 ವಿಕೆಟ್‌ಗಳನ್ನ ಸಹ ಪಡೆದಿದ್ದಾರೆ. ಅವರು ಯಾವುದೇ ವಾದವಿಲ್ಲದೆ ಈ ಸೀಸನ್​ನ ಉತ್ತಮ ಆಟಗಾರರಲ್ಲಿ ಒಬ್ಬರು ಎಂದು ಹೇಳಬಹುದು. ಕೆಲ ಪಂದ್ಯಗಳನ್ನ ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ.

ತಂಡಕ್ಕಾಗಿ ರನ್​ಗಳಿಸಿರುವುದು ಯಾವಾಗಲು ಖುಷಿ ನೀಡುತ್ತದೆ. ಅದರಲ್ಲೂ ತಂಡ ಗೆದ್ದಾಗ ರನ್​ಗಳಿಸುವುದು ಉತ್ತಮವಾಗಿರುತ್ತದೆ. ಹಾಗಾಗಿ, ನನ್ನ ಕೈಯಲ್ಲಿ ಆಗುವುದನ್ನೆಲ್ಲಾ ತಂಡಕ್ಕಾಗಿ ಮಾಡಲು ನಾನು ಸಿದ್ಧನಿದ್ದೇನೆ. ದಿನದ ಕೊನೆಯಲ್ಲಿ ಪಂದ್ಯ ಗೆಲ್ಲುವುದೇ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.