ETV Bharat / sports

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ, ಫ್ಯಾನ್ಸ್​ ರಂಜಿಸಲು ಇದು ಉತ್ತಮ ಅವಕಾಶ: ಕೊಹ್ಲಿ - ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಈಗಾಗಲೇ ಕೊಹ್ಲಿ ಬಳಗ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಗುರುವಾರ ತಮ್ಮಲ್ಲೇ ಎರಡು ತಂಡಗಳನ್ನು ಮಾಡಿಕೊಂಡು ಪಂದ್ಯವನ್ನು ಆಡಿವೆ. ಎಬಿಡಿ, ಪಡಿಕ್ಕಲ್​ ಮತ್ತು ಸೈನಿ ಸೇರಿದಂತೆ ಹಲವು ಆಟಗಾರರು ಉತ್ತಮ ರಿದಮ್​ಗೆ ಮರಳಿದ್ದಾರೆ. ಸೆಪ್ಟೆಂಬರ್​ 21 ರಿಂದ ಆರ್​ಸಿಬಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ವಿರಾಟ್​ ಕೊಹ್ಲಿ ಐಪಿಎಲ್
ವಿರಾಟ್​ ಕೊಹ್ಲಿ ಐಪಿಎಲ್
author img

By

Published : Sep 17, 2020, 5:59 PM IST

ದುಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಖಾಲಿ ಕ್ರೀಡಾಂಗಣದಲಲ್ಲಿ ಆಡುವುದರ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಅನುಪಸ್ಥಿತಿಯಲ್ಲೂ ತಮ್ಮ ತಂಡದ ಸಾಮರ್ಥ್ಯ ಕುಗ್ಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ಚಾಂಪಿಯನ್​ ಪಟ್ಟಕ್ಕೇರದಿದ್ದರೂ ಸಹಾ ಅಭಿಮಾನಿಗಳು ಮಾತ್ರ ತಂಡದ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದರು. ಕ್ರೀಡಾಂಗಣದಲ್ಲಿ ವಿರಾಟ್​ ಬಳಗಕ್ಕೆ ತಂಡಕ್ಕೆ ಉಳಿದ ತಂಡಕ್ಕಿಂತಲೂ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿತ್ತು. ಆದರೆ ಈ ಸೆಪ್ಟೆಂಬರ್​ 19 ರಿಂದ ಆರಂಭವಾಗುತ್ತಿರುವ 13ನೇ ಆವೃತ್ತಿಯಲ್ಲಿ ವೀಕ್ಷಕರ ಅನುಪಸ್ಥಿತಿಯಲ್ಲಿ ಆಡಬೇಕಾಗಿದೆ. 'ಈ ಸನ್ನಿವೇಶ ನಿಜಕ್ಕೂ ವಿಚಿತ್ರ ಎನಿಸಲಿದೆ' ಎಂದು ಟೀಮ್ ​ಇಂಡಿಯಾ ಕ್ಯಾಪ್ಟನ್​ ವಿರಾಟ್​ ಅಭಿಪ್ರಾಯಪಟ್ಟಿದ್ದಾರೆ.

"ನಾವೆಲ್ಲರೂ ಖಾಲಿ ಕ್ರೀಡಾಂಗಣಗಳ ಮುಂದೆ ಆಡುವ ಬಗ್ಗೆ ಈಗಾಗಲೇ ಯೋಚಿಸಿದ್ದೇವೆ. ಇದೊಂದು ವಿಚಿತ್ರ ಭಾವನೆಯನ್ನುಂಟು ಮಾಡಲಿದೆ. ಆದರೆ ನಾವು ಅದನ್ನು ಖಂಡಿತ ಅಲ್ಲಗಳೆಯಲು ಸಾಧ್ಯವಿಲ್ಲ. ದಿನದ ಕೊನೆಯಲ್ಲಿ ನೀವು ಏಕೆ ಕ್ರೀಡೆಯನ್ನು ಆಡಲು ಪ್ರಾಂರಂಭಿಸಿದ್ದೀರಿ ಎಂಬುದು ನಿಮಗೆ ಅರ್ಥವಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ನೀವು ಆಟವನ್ನು ಎಷ್ಟರಮಟ್ಟಿಗೆ ಇಷ್ಟಪಡುತ್ತೀರಿ ಎಂಬುದನ್ನು ತೋರಿಸುವ ಸಮಯ ಬಂದಿದೆ.

ಯಾವುದೇ ಕ್ರೀಡಾಗಾದರೂ ಅಭಿಮಾನಿಗಳು ಒಂದು ಪ್ರಮುಖ ಭಾಗವಾಗಿರುತ್ತಾರೆ. ಈಗ ಅದು ಆಟಕ್ಕೆ ಪ್ರಮುಖ ವಿಷಯವಲ್ಲ. ಈ ಪರಿಸ್ಥಿತಿಯಲ್ಲೂ ನಾವು ಸಾವಿರಾರು ಜನರಿಗೆ ಸಂತೋಷವನ್ನು ತರುವ ಅವಕಾಶವಿದೆ. ಪ್ರೇಕ್ಷಕರ ಅನುಪಸ್ಥಿತಿಯಿಂದ ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಉತ್ಸಾಹದ ಮಟ್ಟ ಇಳಿಯುವುದಿಲ್ಲ" ಎಂದು ವರ್ಚುವಲ್​ ಮಾಧ್ಯಮಗೋಷ್ಟಿಯಲ್ಲಿ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಐಪಿಎಲ್ ಸಾಧನೆ
ವಿರಾಟ್​ ಕೊಹ್ಲಿ ಐಪಿಎಲ್ ಸಾಧನೆ

ಬಯೋ ಸೆಕ್ಯೂರ್​ ಜೀವನಕ್ಕೆ ಹೇಗೆ ಹೊಂದಿಕೊಂಡಿದ್ದೀರಾ ಎಂದು ಕೇಳಿದ್ದಕ್ಕೆ," ನಮ್ಮ ಸುತ್ತ ಮುತ್ತಲಿನ ವಿಷಯಗಳ ಬಗ್ಗೆ ಮೆಚ್ಚುಗೆಯನ್ನಿಟ್ಟುಕೊಳ್ಳಲು ನಾವು ಚರ್ಚಿಸಿದ್ದೇವೆ. ಹಾಗಾಗಿ ನಮಗೆಲ್ಲರಿಗೂ ಜೈವಿಕ ಸುರಕ್ಷತಾ ವಲಯದಲ್ಲಿ ಏನು ಮಾಡಬೇಕೆಂದು ತಿಳಿದಿದೆ. ನಾವು ವಾಸಿಸುತ್ತಿರುವ ಪರಿಸ್ಥಿತಿಯನ್ನು ಇಷ್ಟಪಟ್ಟು ಒಪ್ಪಿಕೊಂಡಿರುವುದರಿಂದ ಎಲ್ಲರೂ ನಿರಾಳರಾಗಿದ್ದೇವೆ. ನಮಗೆ ಇಲ್ಲಿರಲು ಯಾವುದೇ ರೀತಿಯ ಹತಾಶೆ ಇಲ್ಲ. ಇದು ಸಾಂಕ್ರಾಮಿಕದಿಂದ ನಾನು ಕಲಿತಿರುವ ದೊಡ್ಡ ಪಾಠ'' ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.