ETV Bharat / sports

ರಾಜಸ್ಥಾನ್ ರಾಯಲ್ಸ್​ ವಿರುದ್ದ ಟಾಸ್​ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

author img

By

Published : Oct 22, 2020, 7:08 PM IST

Updated : Oct 22, 2020, 7:53 PM IST

ಸನ್​ರೈಸರ್ಸ್ ಹೈದರಾಬಾದ್​ ತಂಡ ಜೇಸನ್ ಹೋಲ್ಡರ್​ ಹಾಗೂ ನದೀಮ್​ಗೆ ಅವಕಾಶ ನೀಡಿದೆ. ನದೀಮ್ ತಂಪಿ ಬದಲು ಅವಕಾಶ ಪಡೆದಿದ್ದರೆ, ವಿಲಿಯಮ್ಸನ್​ ಸ್ಥಾನದಲ್ಲಿ ಹೋಲ್ಡರ್​ ಹೈದರಾಬಾದ್​ ಪರ ಪದಾರ್ಪಣೆ ಮಾಡುತ್ತಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​- ರಾಜಸ್ಥಾನ್ ರಾಯಲ್ಸ್​

ದುಬೈ: ಪ್ಲೇ ಆಫ್ ಪ್ರವೇಶಿಸಲೂ ನಿರ್ಣಾಯಕವಾಗಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಟಾಸ್​ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ರಾಜಸ್ಥಾನ್ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯುತ್ತಿದ್ದರೆ, ಹೈದರಾಬಾದ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ವಿಲಿಯಮ್ಸನ್ ಬದಲಿಗೆ ಜೇಸನ್ ಹೋಲ್ಡರ್ ಹಾಗೂ ಥಂಪಿ ಬದಲಿಗೆ ನದೀಮ್​ಗೆ ಅವಕಾಶ ನೀಡಿದೆ.

ಹೈದರಾಬಾದ್ ತಂಡ ಇಲ್ಲಿಯವರೆಗೆ ಒಟ್ಟು ಒಂಬತ್ತು ಪಂದ್ಯಗಳನ್ನಾಡಿದ್ದು, 3 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ, ಆರು ಪಂದ್ಯಗಳಲ್ಲಿ ಸೋತಿದೆ. ಇತ್ತ ರಾಜಸ್ಥಾನ ತಂಡ ಆಡಿರುವ 10 ಪಂದ್ಯಗಳ ಪೈಕಿ 4 ಪಂದ್ಯ ಜಯಿಸಿದರೆ, 6ರಲ್ಲಿ ಸೋಲು ಕಂಡಿದೆ. ಎರಡು ತಂಡಗಳಿಗೂ ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ನಿರ್ಣಾಯಕವಾಗಲಿದೆ.

ಉಭಯ ತಂಡಗಳು ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ದರೆ, 6 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.

ಹೈದರಾಬಾದ್ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೀ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಪ್ರಿಯಮ್ ಗರ್ಗ್, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ನದೀಮ್

ರಾಜಸ್ಥಾನ್ ತಂಡ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಾಜ್‌ಪೂತ್, ಕಾರ್ತಿಕ್ ತ್ಯಾಗಿ.

Last Updated : Oct 22, 2020, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.