ETV Bharat / sports

ಯುಎಇಗೆ ತೆರಳುವ ಮುನ್ನ ಮುಂಬೈ ಇಂಡಿಯನ್ಸ್​ ಆಟಗಾರರಿಗೆ 5 ಬಾರಿ ಕೋವಿಡ್ ಟೆಸ್ಟ್​! - IPL in UAE

ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಮುಂಬೈ ಇಂಡಿಯನ್ಸ್​ ಅಧಿಕಾರಿಯೊಬ್ಬರು, ಆಟಗಾರರು ಈಗಾಗಲೇ ಆಗಮಿಸಲು ಪ್ರಾರಂಭಿಸಿದ್ದಾರೆ ಮತ್ತು ಕೊರೊನಾ ವೈರಸ್‌ಗೆ ಯಾರೂ ತುತ್ತಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಪ್ರೋಟೋಕಾಲ್​ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ಆಟಗಾರರಿಗೆ 5 ಬಾರಿ ಕೋವಿಡ್ ಟೆಸ್ಟ್

author img

By

Published : Aug 4, 2020, 5:28 PM IST

ನವದೆಹಲಿ: ಹಾಲಿ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರು ನಿಧಾನವಾಗಿ ಮುಂಬೈಗೆ ಸೇರಿಕೊಳ್ಳುತ್ತಿದ್ದಾರೆ. ಕೆಲವರು ಇನ್ನೆರಡು ದಿನದಲ್ಲಿ ಬರಲಿದ್ದಾರೆ. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಕೂಡ 7-8 ದಿನಗಳಲ್ಲಿ ಮುಂಬೈ ಸೇರಿಕೊಳ್ಳಲಿದ್ದಾರೆ. ಯುಎಇನಲ್ಲಿ ನಡೆಯುವ 13ನೇ ಆವೃತ್ತಿಯ ಐಪಿಎಲ್​ಗಾಗಿ ಅವರು ಒಂದುಗೂಡುತ್ತಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಮುಂಬೈ ಇಂಡಿಯನ್ಸ್​ ಅಧಿಕಾರಿಯೊಬ್ಬರು, ಆಟಗಾರರು ಈಗಾಗಲೇ ಆಗಮಿಸಲು ಪ್ರಾರಂಭಿಸಿದ್ದಾರೆ ಮತ್ತು ಕೊರೊನಾ ವೈರಸ್‌ಗೆ ಯಾರೂ ತುತ್ತಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಪ್ರೋಟೋಕಾಲ್​ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೇಶೀಯ ತಂಡದ ಆಟಗಾರರು ಮುಂಬೈಗೆ ಬರಲು ಪ್ರಾರಂಭಿಸಿದ್ದಾರೆ ಮತ್ತು ಅವರೆಲ್ಲರನ್ನೂ 14 ದಿನಗಳ ಕಾಲ ಕ್ವಾರಂಟೈನ್​ಗೆ ಕಳುಹಿಸಲಾಗುತ್ತದೆ. ಅವರು ಕೋವಿಡ್​-19 ಪರೀಕ್ಷೆ ಪೂರೈಸಿದ ನಂತರ ಮಾತ್ರ ಹೋಟೆಲ್​ ರೂಮಿನಿಂದ ನಿರ್ಗಮಿಸಲು ಅವಕಾಶವಿದೆ. ಅಲ್ಲಿಯವರೆಗೆ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ರೂಮ್​ನಲ್ಲೇ ಒದಗಿಸಲಾಗುತ್ತದೆ. ಭಾರತೀಯ ಆಟಗಾರರು ಆದಷ್ಟು ಬೇಗ ಬರಲಿದ್ದಾರೆ. ಅವರು ಕೂಡ ಕ್ವಾರಂಟೈನ್​ ಮುಗಿಸಿದ ನಂತರ ತರಬೇತಿಗೆ ಮೈದಾನಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪರೀಕ್ಷಾ ವಿಧಾನದ ಬಗ್ಗೆ ಮಾತನಾಡಿರುವ ಅವರು, ಯುಎಇ ವಿಮಾನ ಹತ್ತುವವರೆಗೆ 5 ಸುತ್ತುಗಳ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮುಂಬೈಗೆ ಬರುವ ಮೊದಲು ಆಟಗಾರರು ತಮ್ಮ ತವರು ಸಿಟಿಯಲ್ಲಿ ಎರಡು ಬಾರಿ ಪರೀಕ್ಷೆ ಮಾಡಿಸಬೇಕು. ಅವರು ಇಲ್ಲಿಗೆ ಬಂದ ಮೇಲೆ ಉಳಿದ ಮೂರು ಸುತ್ತಿನ ಪರೀಕ್ಷೆಗೆ ಒಳಗಾಗಲಿದ್ದಾರೆ. ಆಟಗಾರರಷ್ಟೇ ಅಲ್ಲದೆ ಎಲ್ಲಾ ಸಹಾಯಕ ಸಿಬ್ಬಂದಿ ವರ್ಗದವರು ಕೂಡ 5 ಸುತ್ತಿನ ಪರೀಕ್ಷೆಗೆ ಒಳಗಾಗಬೇಕು ಎಂದು ನಿರೀಕ್ಷಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಯುಎಇಗೆ ಯಾವಾಗ ತೆರಳಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಬಿಸಿಸಿಐನಿಂದ ಎಸ್​ಒಪಿಗೆ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಆಡಳಿತ ಮಂಡಳಿ ಸಭೆ ನಡೆಯಲಿದೆ. ಆಗಸ್ಟ್​ 21 ಅಥವಾ 22ರಂದು ತೆರಳಲು ತೀರ್ಮಾನಿಸಿದ್ದೇವೆ. ಸಭೆಯ ನಂತರ ಅಂತಿಮ ದಿನಾಂಕವನ್ನು ನಿರ್ಧಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.