ಶಾರ್ಜಾ: ರಾಜಸ್ಥಾನ್ ರಾಯಲ್ಸ್ ತಂಡದ ಯುವ ಪ್ರತಿಭೆ ಸಂಜು ಸಾಮ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 2ನೇ ಸಿಕ್ಸರ್ ಸಿಡಿಸುತ್ತಿದ್ದಂತೆ ಐಪಿಎಲ್ನಲ್ಲಿ 100 ಸಿಕ್ಸರ್ ಸಿಡಿಸಿದವರ ಕ್ಲಬ್ಗೆ ಎಂಟ್ರಿಕೊಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಸಿಕ್ಸರ್ಗಳ ಸುರಿಮಳೆ ಸುರಿಸಿದ್ದ ಸಂಜು ಸಾಮ್ಸನ್ ಕೇವಲ 32 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 74 ರನ್ ದಾಖಲಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ತಮ್ಮ ಆರ್ಭಟ ಶುರುಮಾಡಿದ್ದು ಈಗಾಗಲೆ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸಂಜು ಸಾಮ್ಸನ್ ರವಿ ಬಿಷ್ಣೋಯ್ಗೆ ಸಿಕ್ಸರ್ ಸಿಡಿಸುತ್ತಿದ್ದಂತೆ ಐಪಿಎಲ್ನಲ್ಲಿ ತಮ್ಮ 100ನೇ ಸಿಕ್ಸರ್ ಪೂರ್ತಿಗೊಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 100 ಸಿಕ್ಸರ್ಗಳಿಸಿದ 19 ನೇ ಬ್ಯಾಟ್ಸ್ಮನ್ ಹಾಗೂ 11 ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ 326, ಎಬಿ ಡಿ ವಿಲಿಯರ್ಸ್ 215, ಎಂಎಸ್ ಧೋನಿ 212, ರೋಹಿತ್ ಶರ್ಮಾ 200, ಸುರೇಶ್ ರೈನಾ 194 ಹಾಗೂ ವಿರಾಟ್ ಕೊಹ್ಲಿ 190 ಸಿಕ್ಸರ್ ಸಿಡಿಸಿ ಮೊದಲ 6 ಸ್ಥಾನದಲ್ಲಿದ್ದಾರೆ.