ETV Bharat / sports

ಸಿಎಸ್​ಕೆ ತಂಡಕ್ಕೆ ಮತ್ತೊಂದು ಹೊಡೆತ... ಐಪಿಎಲ್​​ನಿಂದ ಹೊರಬಿದ್ದ ಡ್ವೇನ್​ ಬ್ರಾವೋ! - ಡ್ವೇನ್​ ಬ್ರಾವೋ ಐಪಿಎಲ್​ ಸುದ್ದಿ

ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಸ್ಟಾರ್​ ಆಲ್​ರೌಂಡರ್​ ಡ್ವೇನ್​ ಬ್ರಾವೋ ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಮೂಲಕ ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

Dwayne Bravo
Dwayne Bravo
author img

By

Published : Oct 21, 2020, 3:00 PM IST

ದುಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಮುಂಬರುವ ಎಲ್ಲಾ ಪಂದ್ಯಗಳಿಂದ ಆಲ್​ರೌಂಡರ್​ ಡ್ವೇನ್​ ಬ್ರಾವೋ ಹೊರ ಬಿದ್ದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಿಎಸ್​ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್​​ ಮಾಹಿತಿ ನೀಡಿದ್ದಾರೆ. ಸಿಎಸ್​ಕೆ ತಂಡದ ಪರ ಬ್ರಾವೋ ಆರು ಪಂದ್ಯಗಳನ್ನಾಡಿದ್ದು, ಏಳು ರನ್ ​ಗಳಿಸಿದ್ದಾರೆ. ಆದರೆ ಏಳು ವಿಕೆಟ್​ ಪಡೆದುಕೊಂಡು ಗಮನ ಸೆಳೆದಿದ್ದರು.

ಡೆಲ್ಲಿ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿದ್ದ ಡ್ವೇನ್​ ಬ್ರಾವೋ ತೊಡೆ ಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಮುಂದಿನ ಯಾವುದೇ ಪಂದ್ಯಗಳಿಗೂ ಲಭ್ಯವಿರುವುದಿಲ್ಲ ಎಂದು ತಿಳಿದು ಬಂದಿದೆ.

CSK team
ಚೆನ್ನೈ ಸೂಪರ್ ಕಿಂಗ್ಸ್​ ತಂಡ

ಡೆತ್‌ ಓವರ್‌ ಸ್ಪೆಷಲಿಸ್ಟ್‌ ಡ್ವೇನ್‌ ಬ್ರಾವೋ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಕಾರಣ ಅನಿವಾರ್ಯವಾಗಿ ರವೀಂದ್ರ ಜಡೇಜಾ ಅವರಿಗೆ ಕೊನೆ ಓವರ್​ ನೀಡಲಾಗಿತ್ತು. ಇದೇ ಕಾರಣಕ್ಕಾಗಿ ಸಿಎಸ್​ಕೆ ತಂಡ ಸೋಲು ಕಂಡಿತ್ತು ಎಂಬ ಮಾತು ಗಂಭೀರವಾಗಿ ಕೇಳಿ ಬಂದಿತ್ತು. ಪಂದ್ಯ ಮುಗಿದ ಬಳಿಕ ಧೋನಿ ಇದೇ ವಿಚಾರವಾಗಿ ಮಾತನಾಡಿದ್ದರು.

ಸಿಎಸ್​ಕೆ ಆಡಿರುವ 10 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಮುಂದಿನ ಹಂತಕ್ಕೆ ತಲುಪುವುದು ಬಹುತೇಕ ಕಷ್ಟವಾಗಿದೆ. ಇದರ ಬೆನ್ನಲ್ಲೇ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿರುವುದು ಕ್ಯಾಪ್ಟನ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

CSK Team
ಹರ್ಭಜನ್​ ಸಿಂಗ್​, ರೈನಾ

ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ಈಗಾಗಲೇ ಸಿಎಸ್​ಕೆ ತಂಡದಿಂದ ಸುರೇಶ್​ ರೈನಾ ಹಾಗೂ ಹರ್ಭಜನ್​ ಸಿಂಗ್​ ಹೊರಗುಳಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.