ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತ ತಂಡ ಬ್ರಿಸ್ಬೇನ್ನಲ್ಲಿ ನಿಗದಿ ಆಗಿರುವ ಕ್ವಾರಂಟೈನ್ ಅವಧಿಯನ್ನು ಕಡಿಮೆ ಮಾಡಬೇಕೆಂಬ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಮನವಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಿಸ್ಕರಿಸುವ ಸಾಧ್ಯತೆಯಿದೆ ಎಂದ ಆಸ್ಟ್ರೇಲಿಯಾ ಹೆಸರಾಂತ ಮಾಧ್ಯಮ ವರದಿ ಮಾಡಿದೆ.
ಕೋವಿಡ್ 19 ಕ್ರಿಕೆಟ್ ಆಟದ ನಿಯಮಗಳನ್ನೇ ಬದಲಿಸಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ವೇಳೆ ತಂಡಗಳು ಎರಡು ವಾರ ಕ್ವಾರಂಟೈನ್ಗೆ ಒಳಗಾಗಿದ್ದವು. ನಂತರ 2 ಬಾರಿ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದವು. ನಂತರ ಬಯೋಬಲ್ನಲ್ಲಿ ಹಲವು ನಿಯಮಾವಳಿಗಳ ನಡುವೆ 3 ಪಂದ್ಯಗಳನ್ನು ಆಡಿದ್ದವು.
"ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಅಧಿಕಾರಿಗಳು ಕ್ರಿಕೆಟ್‌ನ ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ನಿಯಮಾವಳಿಗಳಿಗೆ ಅನುಸಾರವಾಗಿಸಲು ಸಜ್ಜಾಗಿದ್ದಾರೆ, ಇದರ ವಿವರಗಳು ಸಿಎ ತನ್ನ 300 ಮಿಲಿಯನ್ ಡಾಲರ್ ಪರಿಷ್ಕೃತ ವೇಳಾಪಟ್ಟಿಯನ್ನು ಘೋಷಿಸುವುದನ್ನು ವಿಳಂಬಗೊಳಿಸಿದೆ" ಎಂದು ವರದಿ ತಿಳಿಸಿದೆ.
ಸಿಡ್ನಿಯಲ್ಲಿ ಹೊಸ ವರ್ಷದ ಟೆಸ್ಟ್ ಅನ್ನು ಜನವರಿ 7 ಕ್ಕೆ ಮರು ನಿಗದಿಪಡಿಸುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ಪ್ರಸ್ತಾಪಿಸಿದೆ, ಆದರೆ ಗಂಗೂಲಿ ಸಹ ಕ್ವಾರಂಟೈನ್ ಅವಧಿಯನ್ನು ಕಡಿಮೆ ಮಾಡುವಂತೆ ಮಂಡಳಿಗೆ ಮನವಿ ಮಾಡಿದ್ದಾರೆ. ಆದರೆ ಈ ಮನವಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಿರಸ್ಕರಿಸುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾದಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ನಿಗದಿಪಡಿಸಲಾಗಿದೆ. ಆದರೆ ಅದನ್ನು ಕಡಿಮೆ ಮಾಡಲು ಬಯಸುತ್ತೇನೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗಂಗೂಲಿ ಈಗಾಗಲೆ ಹೇಳಿದ್ದರು.
ನವೆಂಬರ್ 10 ರಂದು ಐಪಿಎಲ್ ಫೈನಲ್ ಪಂದ್ಯದ ನಂತರ ಭಾರತದ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬಗಳು ಬ್ರಿಸ್ಬೇನ್ಗೆ ತೆರಳಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.