ETV Bharat / sports

ಟೆಸ್ಟ್​ ಕ್ರಿಕೆಟ್​: ವಿದೇಶದಲ್ಲಿ ಅತಿ ದೊಡ್ಡ ಜಯ ಸಾಧಿಸಿದ ಟೀಮ್​ ಇಂಡಿಯಾ - ಬೃಹತ್​ ಅಂತರದ ಜಯ

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ವಿದೇಶದಲ್ಲಿ ಭಾರತ ತಂಡ ವಿಂಡೀಸ್​ ವಿರುದ್ಧ ಅತಿ ಹೆಚ್ಚು ರನ್​ಗಳ ಅಂತರದಿಂದ ಜಯ ಸಾಧಿಸಿದೆ. ಕೊಹ್ಲಿ ಪಡೆ ಮೊದಲ ಪಂದ್ಯದಲ್ಲಿ 318 ರನ್​ಗಳಿಂದ ವಿಂಡೀಸ್​ ಪಡೆಗೆ ಸೋಲುಣಿಸಿದೆ.

ಟೆಸ್ಟ್​ ಕ್ರಿಕೆಟ್​
author img

By

Published : Aug 26, 2019, 12:27 PM IST

ಆ್ಯಂಟಿಗುವಾ: ಭಾರತ ತಂಡ ಭಾನುವಾರ ಆಂತ್ಯಗೊಂಡ ವೆಸ್ಟ್​ ಇಂಡೀಸ್​ ತಂಡವನ್ನು 318 ರನ್​ಗಳಿಂದ ಮಣಿಸುವ ಮೂಲಕ ವಿದೇಶದಲ್ಲಿ ಅತಿದೊಡ್ಡ ರನ್​ಗಳ ಅಂತರದಿಂದ ಜಯ ಸಾಧಿಸಿದೆ.

ಅತಿಥೇಯ ವೆಸ್ಟ್​ ಇಂಡೀಸ್​ಗೆ 419 ರನ್​ಗಳ ಟಾರ್ಗೆಟ್​ ನೀಡಿದ್ದ ಕೊಹ್ಲಿ ಪಡೆ ಬುಮ್ರಾ ಹಾಗೂ ಇಶಾಂತ್​ ಶರ್ಮಾರ ಬೌಲಿಂಗ್​ ನೆರವಿನಿಂದ ಅತಿಥೇಯ ವಿಂಡೀಸ್​ ತಂಡವನ್ನು ಕೇವಲ 100 ರನ್​ಗಳಿಗೆ ಆಲೌಟ್​ ಮಾಡಿ 318ರನ್​ಗಳ ಬೃಹತ್​ ಜಯ ಸಾಧಿಸಿದೆ.

ಈ ಜಯ ಭಾರತ ತಂಡದ ಟೆಸ್ಟ್​ ಇತಿಹಾಸದಲ್ಲಿ ಸಂದ ಬೃಹತ್​ ಜಯವಾಗಿದೆ. ಈ ಹಿಂದೆ 2017ರಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ 304 ರನ್​ಗಳ ಜಯ ಸಾಧಿಸಿದ್ದು ದಾಖಲೆಯಾಗಿತ್ತು.

ವಿದೇಶದಲ್ಲಿ ಭಾರತ ತಂಡದ ಬೃಹತ್​ ಅಂತರದ ಜಯ

  • 318 ವಿಂಡೀಸ್​ ವಿರುದ್ಧ (2019) ನಾರ್ಥ್​ ಸೌಂಡ್​
  • 304 ಶ್ರೀಲಂಕಾ ವಿರುದ್ಧ (2017) ಗಾಲೆ
  • 279 ಇಂಗ್ಲೆಂಡ್​ ವಿರುದ್ಧ(1986) ಲೀಡ್ಸ್​
  • 278 ಶ್ರೀಲಂಕಾ ವಿರುದ್ಧ (2015)ಕೊಲೊಂಬೊ
  • 272 ನ್ಯೂಜಿಲ್ಯಾಂಡ್​ ವಿರುದ್ಧ (1967/68)ಆಕ್ಲೆಂಡ್​

ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಬಹುದೊಡ್ಡ ಜಯ (ರನ್​ಗಳ ಅಂತರದಲ್ಲಿ)

  • 337 ದಕ್ಷಿಣ ಆಫ್ರಿಕಾ ವಿರುದ್ಧ(2015/16) ದೆಹಲಿ
  • 321 ನ್ಯೂಜಿಲ್ಯಾಂಡ್​ ವಿರುದ್ಧ(2016/17) ಇಂದೋರ್​
  • 320 ಆಸ್ಟ್ರೇಲಿಯಾ ವಿರುದ್ಧ(2008/09)ಮೊಹಾಲಿ
  • 318 ವೆಸ್ಟ್​ ಇಂಡೀಸ್​ ವಿರುದ್ಧ(2019)ನಾರ್ಥ್​ ಸೌಂಡ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.