ವೆಸ್ಟ್ ಇಂಡೀಸ್: ಪೂನಮ್ ರಾವತ್ ಅರ್ಧ ಶತಕದ ನೆರವಿನಿಂದ ಹಾಗೂ ಸ್ಪಿನ್ನರ್ಗಳ ಸಹಾಯದಿಂದ ಭಾರತ ತಂಡವು ಐಸಿಸಿ ಮಹಿಳಾ ಚಾಂಪಿಯನ್‌ಷಿಪ್ ಸರಣಿಯ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 53 ರನ್ಗಳ ರೋಚಕ ಗೆಲುವು ದಾಖಲಿಸಿ ಸರಣಿ ಸಮಬಲ (1-1) ಮಾಡಿಕೊಂಡಿದೆ.
ಈ ಮೂಲಕ ಒಟ್ಟಾರೆ ಏಕದಿನದಲ್ಲಿ 150 ಪಂದ್ಯಗಳಲ್ಲಿ ಗೆದ್ದು ಹೊಸ ಮೈಲಿಗಲ್ಲು ಸಾಧಿಸಿದೆ.
-
India secured a 53-run win over West Indies in the second women's ODI in Antigua and levelled the three-match series 1-1.#WIvIND Report ⬇️ https://t.co/qRopRJnlME
— ICC (@ICC) November 4, 2019 " class="align-text-top noRightClick twitterSection" data="
">India secured a 53-run win over West Indies in the second women's ODI in Antigua and levelled the three-match series 1-1.#WIvIND Report ⬇️ https://t.co/qRopRJnlME
— ICC (@ICC) November 4, 2019India secured a 53-run win over West Indies in the second women's ODI in Antigua and levelled the three-match series 1-1.#WIvIND Report ⬇️ https://t.co/qRopRJnlME
— ICC (@ICC) November 4, 2019
ಸರಣಿಯ ಮೊದಲ ಪಂದ್ಯದಲ್ಲಿ ಒಂದು ರನ್‌ನಿಂದ ಸೋಲನುಭವಿಸಿದ್ದ ಮಿಥಾಲಿ ತಂಡ ಭಾನುವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191ರನ್ ಗಳಿಸಲಷ್ಟೇ ಶಕ್ತವಾಯ್ತು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ರಿಯಾ ಪೂನಿಯಾ (5), ರೋಡ್ರಿಗಸ್ (0) ರನ್ ಪೇರಿಸಲು ಸಂಪೂರ್ಣ ವಿಫಲರಾದರು. ಬಳಿಕ ಬಂದ ಪೂನಮ್ ರಾವತ್ ಅವರ (77) ಆಕರ್ಷಕ ಅರ್ಧ ಶತಕ, ನಾಯಕಿ ಮಿಥಾಲಿ ರಾಜ್ (40), ಹರ್ಮನ್ಪ್ರೀತ್ ಕೌರ್ (46) ತಂಡಕ್ಕೆ ಚೇತರಿಕೆ ತಂದರೂ ತಂಡ ಅಲ್ಪಮೊತ್ತ ಮಾತ್ರ ಕಲೆಹಾಕಲು ಸಾಧ್ಯವಾಯಿತು.
ಭಾರತ ನೀಡಿದ್ದ 192 ರನ್ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿಯರು ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್ ಹಾಗೂ ದೀಪ್ತಿ ಶರ್ಮಾ ಅವರ (ತಲಾ 2 ವಿಕೆಟ್) ದಾಳಿಗೆ 47.2 ಓವರ್ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಯಿತು. ವಿಂಡೀಸ್ ಪರ ನಾಯಕಿ ಕ್ಯಾಂಪ್ಬೆಲ್ ಮಾತ್ರ 39 ರನ್ ಗಳಿಸಿದರು. ಪೂನಮ್ ರಾವತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೂರನೇ ಹಾಗೂ ಏಕದಿನ ಪಂದ್ಯ ಬುಧವಾರ ನಡೆಯಲಿದೆ.