ಅಹಮದಾಬಾದ್: ಟೀಂ ಇಂಡಿಯಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡ ಐದು ಟಿ20 ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಕೊಹ್ಲಿ ಪಡೆ ನೀಡಿದ್ದ 157 ರನ್ಗಳ ಗುರಿಯನ್ನು ಕೇವಲ 18.2 ಓವರ್ಗಳಲ್ಲಿ ಆಂಗ್ಲರ ಪಡೆ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ 77 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ಗಳಿಕೆ ಮಾಡಿತು. ಈ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಆದರೆ ವಿಕೆಟ್ ಕೀಪರ್ ಬಟ್ಲರ್ ಹಾಗೂ ಬೈರ್ಸ್ಟೋ ಟೀಂ ಇಂಡಿಯಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್ಗೆ ಒಂದಾದ ಬಟ್ಲರ್ (83 ಅಜೇಯ) ಹಾಗೂ ಬೈರ್ಸ್ಟೋ(40 ಅಜೇಯ) ರನ್ ಕಲೆ ಹಾಕಿ ಗೆಲುವಿನ ಗುರಿ ತಲುಪಿದರು.
ಇದನ್ನೂ ಓದಿ: ವಿರಾಟ್ ರೂಪ ಪ್ರದರ್ಶಿಸಿದ ಕಿಂಗ್ ಕೊಹ್ಲಿ: ಇಂಗ್ಲೆಂಡ್ ಗೆಲುವಿಗೆ 157 ರನ್ ಟಾರ್ಗೆಟ್
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ಗಳಿಕೆ ಮಾಡಿತು. ಇಂಗ್ಲೆಂಡ್ ಪರ ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್, ಜೋರ್ಡನ್ 2 ವಿಕೆಟ್ ಪಡೆದುಕೊಂಡರು.
ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಹಾಗೂ ಚಹಾಲ್ ತಲಾ 1ವಿಕೆಟ್ ಪಡೆದುಕೊಂಡರು.