ETV Bharat / sports

ಅಶ್ವಿನ್​-ಬುಮ್ರಾ ಸಾಲಿಗೆ ಸೇರಲು ಚಹಲ್​ಗೆ ಬೇಕು ಒಂದು ವಿಕೆಟ್​ - ಟಿ20 ಕ್ರಿಕೆಟ್​ನಲ್ಲಿ ಚಹಲ್​ 50 ವಿಕೆಟ್​

ನಾಗ್ಪುರದಲ್ಲಿ ಭಾನುವಾರ ಬಾಂಗ್ಲಾದೇಶ ಅಂತಿಮ ಟಿ 20 ಪಂದ್ಯ ನಡೆಯಲಿದೆ. ಭಾರತದ ಪ್ರಮುಖ ಸ್ಪಿನ್ ಅಸ್ತ್ರವಾದ ಚಹಲ್ ಈ ಪಂದ್ಯದಲ್ಲಿ ಇನ್ನೊಂದು ವಿಕೆಟ್​ ಪಡೆದರೆ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪಡೆದ ಭಾರತದ ಮೂರನೇ ಹಾಗೂ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಬೌಲರ್​ ಎನಿಸಿಕೊಳ್ಳಲಿದ್ದಾರೆ.

India vs Bangladesh
author img

By

Published : Nov 9, 2019, 6:53 PM IST

ನಾಗ್ಪುರ: ಸರಣಿ ಗೆಲ್ಲಲು ಬಾಂಗ್ಲಾದೇಶ ಮತ್ತು ಭಾರತ ತಂಡಕ್ಕೆ ಅಂತಿಮ ಪಂದ್ಯ ನಿರ್ಣಾಯಕವೆನಿಸಿದೆ. ಇದೇ ಪಂದ್ಯದಲ್ಲಿ ಕೇವಲ ಒಂದು ವಿಕೆಟ್​ ಪಡೆದರೆ ಸ್ಪಿನ್ನರ್​ ಯಜುವೇಂದ್ರ ಚಹಲ್ ಮೈಲುಗಲ್ಲೊಂದನ್ನು ಸ್ಥಾಪಿಸಲಿದ್ದಾರೆ.

ನಾಗ್ಪುರದಲ್ಲಿ ಭಾನುವಾರ ಬಾಂಗ್ಲಾದೇಶ ಅಂತಿಮ ಟಿ 20 ಪಂದ್ಯ ನಡೆಯಲಿದೆ. ಭಾರತದ ಪ್ರಮುಖ ಸ್ಪಿನ್ ಅಸ್ತ್ರವಾದ ಚಹಲ್ ಈ ಪಂದ್ಯದಲ್ಲಿ ಇನ್ನೊಂದು ವಿಕೆಟ್​ ಪಡೆದರೆ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪಡೆದ ಭಾರತದ ಮೂರನೇ ಬೌಲರ್​ ಎನಿಸಿಕೊಳ್ಳಲಿದ್ದಾರೆ.

ಈಗಾಗಲೆ ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್​(52), ವೇಗಿ ಜಸ್ಪ್ರೀತ್ ಬುಮ್ರಾ(51) ವಿಕೆಟ್​ ಪಡೆದಿದ್ದಾರೆ. ಆದರೆ ಅಶ್ವಿನ್​ ಈ ಸಾಧನೆಗಾಗಿ 42 ಪಂದ್ಯಗಳನ್ನಾಡಿದ್ದಾರೆ. ಬುಮ್ರಾ 41 ಪಂದ್ಯಗಳನ್ನಾಡಿದ್ದಾರೆ.

ಸಧ್ಯಕ್ಕೆ ವಿಕೆಟ್​ ಅರ್ಧಶತಕದ ಹೊಸ್ತಿಲಲ್ಲಿರುವ ಚಹಲ್​ 33 ಪಂದ್ಯಗಳನ್ನಾಡಿದ್ದ 49 ವಿಕೆಟ್​ ಪಡೆದಿದ್ದಾರೆ.​​ ನಾಳಿನ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಪಡೆದರೆ 50 ವಿಕೆಟ್​ ಸಾಧನೆಯ ಜೊತೆಗೆ ವೇಗವಾಗಿ ಈ ಮೈಲುಗಲ್ಲು ತಲುಪಿದ ಭಾರತೀಯ ಬೌಲರ್​ ಎನಿಸಿಕೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ದಾಖಲೆ ಶ್ರೀಲಂಕಾದ ಅಜಂತಾ ಮೆಂಡಿಸ್​ ಹೆಸರಿನಲ್ಲಿದೆ. ಮೆಂಡಿಸ್​ ಕೇವಲ 26 ಪಂದ್ಯಗಳಲ್ಲಿ 50 ವಿಕೆಟ್​ ಪಡೆದಿದ್ದಾರೆ. 2 ನೇ ಸ್ಥಾನದಲ್ಲಿ ಇಮ್ರಾನ್​ ತಾಹೀರ್​ (31), 3ನೇ ಸ್ಥಾನದಲ್ಲಿ ಮುಸ್ತಫಿಜುರ್​ ರಹಮಾನ್(31) 4ನೇ ಸ್ಥಾನದಲ್ಲಿ ಡೇಲ್​ ಸ್ಟೈನ್​(33) ಇದ್ದಾರೆ. ನಾಳೆ ಚಹಲ್​ ಒಂದು ವಿಕೆಟ್​ ಪಡೆದರೆ ವೇಗವಾಗಿ 50 ವಿಕೆಟ್​ ಪಡೆದ ವಿಶ್ವದ 6ನೇ ಬೌಲರ್​ ಎನಿಸಿಕೊಳ್ಳಲಿದ್ದಾರೆ.​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.