ETV Bharat / sports

ಭಾರತ-ಬಾಂಗ್ಲಾ ಮೊದಲ ಟಿ-20 ಪಂದ್ಯ ನಡೆಯೋದು ಡೌಟ್!

ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ನವೆಂಬರ್​ 3ರಂದು ನಡೆಯಲಿರುವ ಭಾರತ-ಬಾಂಗ್ಲಾ ನಡುವಿನ ಕ್ರಿಕೆಟ್​​ ಪಂದ್ಯದ ಮೇಲೆ ಕರಿನೆರಳು ಆವರಿಸಿದೆ.

author img

By

Published : Oct 31, 2019, 5:14 PM IST

ಬಾಂಗ್ಲಾ ಕ್ರಿಕೆಟಿಗ ಲಿಟನ್​ ದಾಸ್​​

ನವದೆಹಲಿ: ನವೆಂಬರ್​ 3ರಂದು ಅರುಣ್​ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶದ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಬಾಂಗ್ಲಾ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದೆ. ಇದರ ಮಧ್ಯೆ ಮೊದಲ ಟಿ-20 ಪಂದ್ಯ ನಡೆಯುವುದು ಸಂಶಯ ಎಂದು ಹೇಳಲಾಗುತ್ತಿದೆ.

India vs Bangladesh
ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ

ನವದೆಹಲಿಯಲ್ಲಿ ವಾಯು ಗುಣಮಟ್ಟ ಸಂಪೂರ್ಣವಾಗಿ ಕೆಟ್ಟು ಹೋಗಿರುವ ಕಾರಣ, ಈಗಾಗಲೇ ಮೈದಾನದಲ್ಲಿ ಬಾಂಗ್ಲಾ ಆಟಗಾರರು​​​​ ಮುಖಗಳಿಗೆ ಮಾಸ್ಕ್​ ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆದರೆ ಆಟ​ಗಾ​ರರ ಜೊತೆ ಪ್ರೇಕ್ಷ​ಕ​ರಿಗೆ ತೊಂದರೆ ಉಂಟಾ​ಗುವ ಸಾಧ್ಯ​ತೆ ಹೆಚ್ಚಿರುವ ಕಾರಣ ಈ ಪಂದ್ಯ ಸ್ಥಳಾಂತರ ಅಥವಾ ರದ್ಧು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

India vs Bangladesh
ಅಭ್ಯಾಸ ನಿರತ ಬಾಂಗ್ಲಾ ಟೀಂ

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಇದೇ ವಿಷಯವಾಗಿ ಮಾತನಾಡಿದ್ದು, ಈಗಾಗಲೇ ನಿಗದಿಯಾದಂತೆ ಇದೇ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎಂದಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನವೆಂಬರ್ 3ರರೊಳಗೆ ವಾಯುಮಾಲಿನ್ಯ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

India vs Bangladesh
ಅಭ್ಯಾಸನಿರತ ಬಾಂಗ್ಲಾ ಟೀಂ

ಈ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್​ ಗಂಭೀರ್ ಪ್ರತಿಕ್ರಿಯಿಸಿದ್ದು, ದೆಹಲಿಯ ಗಾಳಿಯ ಗುಣಮಟ್ಟ ನಿಯಂತ್ರಣಕ್ಕೆ ಬರುವವರೆಗೂ ಮೈದಾನದಲ್ಲಿ ಯಾವುದೇ ರೀತಿಯ ಕ್ರಿಕೆಟ್​ ಪಂದ್ಯ ನಡೆಯುವುದಿಲ್ಲ ಎಂದಿದ್ದಾರೆ.

Goutham Gambhir
ಗೌತಮ್​ ಗಂಭೀರ್​​ ಪ್ರತಿಕ್ರಿಯೆ

ಈ ಕುರಿತು ಮಾತಿಗೆ ಸಿಕ್ಕ ಬಾಂಗ್ಲಾ ಕ್ರಿಕೆಟಿಗ ಲಿಟನ್ ದಾಸ್, ನನಗೆ ವೈಯಕ್ತಿಕ ಆರೋಗ್ಯ ಸಮಸ್ಯೆಗಳಿವೆ. ಹಾಗಾಗಿ ನಾನು ಮಾಸ್ಕ್ ಧರಿಸಿ ಅಂಗಣಕ್ಕೆ ಇಳಿದಿದ್ದೇನೆ ಎಂದು ಹೇಳಿದ್ರು.

2017ರಲ್ಲೂ ಈ ಮೈದಾನದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವವಾಗಿತ್ತು. ಆ ಸಂದರ್ಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಮುಖಗವಸು​ ಧರಿಸಿ ಕ್ರೀಡಾಂಗಣಕ್ಕಿಳಿದಿದ್ದರು.

Intro:Body:

ಭಾರತ-ಬಾಂಗ್ಲಾ ನಡುವೆ ಮೊದಲ ಟಿ-20 ಪಂದ್ಯ ನಡೆಯುವುದೇ ಡೌಟ್​​... ರದ್ದಾಗುತ್ತಾ ,ಸ್ಥಳಾಂತರವಾಗುತ್ತಾ?

ನವದೆಹಲಿ: ನವೆಂಬರ್​ 3ರಂದು ಅರುಣ್​ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶದ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಬಾಂಗ್ಲಾ ತಂಡ ಭಾರತಕ್ಕೆ ಬಂದು ಅಭ್ಯಾಸ ಆರಂಭಿಸಿದೆ. ಇದರ ಮಧ್ಯೆ ಮೊದಲ ಟಿ-20 ಪಂದ್ಯ ನಡೆಯುವುದೇ ಡೌಟ್​ ಎಂದು ಹೇಳಲಾಗುತ್ತಿದೆ. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ, ಈಗಾಗಲೇ ಮೈದಾನದಲ್ಲಿ ಬಾಂಗ್ಲಾ ಕ್ರಿಕೆಟರ್ಸ್​​​​ ಮುಖಗಳಿಗೆ ಮಾಸ್ಕ್​ ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆದರೆ ಭಾರತ- ಬಾಂಗ್ಲಾ ಆಟ​ಗಾ​ರರ ಜೊತೆ ಪ್ರೇಕ್ಷ​ಕ​ರಿಗೆ ತೊಂದರೆ ಉಂಟಾ​ಗುವ ಸಾಧ್ಯ​ತೆ ದಟ್ಟವಾಗಿರುವ ಕಾರಣ ಈ ಪಂದ್ಯ ಸ್ಥಳಾಂತರ ಅಥವಾ ರದ್ಧು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಆದರೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಇದೇ ವಿಷಯವಾಗಿ ಮಾತನಾಡಿದ್ದು, ಈಗಾಗಲೇ ನಿರ್ಧಾರವಾಗಿರುವಂತೆ ಇದೇ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎಂದಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನವೆಂಬರ್ 3ರರೊಳಗೆ ವಾಯು ಮಾಲಿನ್ಯ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಇದರ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್​ ಗಂಭೀರ್​ ಮಾತನಾಡಿದ್ದು, ದೆಹಲಿಯಲ್ಲಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೂ ಮೈದಾನದಲ್ಲಿ ಯಾವುದೇ ರೀತಿಯ ಕ್ರಿಕೆಟ್​ ಪಂದ್ಯ ನಡೆಯುವುದಿಲ್ಲ ಎಂದಿದ್ದಾರೆ.

2017ರಲ್ಲೂ ಈ ಮೈದಾನದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವವಾಗಿತ್ತು. ಆ ವೇಳೆ ಭಾರತದ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ  ಮುಖಕ್ಕೆ ಮಾಸ್ಕ್​ ಧರಿಸಿ ಮೈದಾನಕ್ಕಿಳಿದಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.