ETV Bharat / sports

ಆಸೀಸ್​ಗೆ ಲಾಬುಶೇನ್, ಸ್ಮಿತ್ ಆಸರೆ: ದಿನಾಂತ್ಯಕ್ಕೆ 197 ರನ್ ಮುನ್ನಡೆ ಸಾಧಿಸಿದ ಕಾಂಗರೂ ಪಡೆ - ಮಾರ್ನಸ್ ಲಾಬುಶೇನ್

ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದು, ಸ್ಟೀವ್ ಸ್ಮಿತ್ 29 ಮತ್ತು ಮಾರ್ನಸ್ ಲಾಬುಶೇನ್ 47 ರನ್​ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Steve Smith, Marnus Labuschagne Steady Australia After Early Setbacks
ದಿನಾಂತ್ಯಕ್ಕೆ 197 ರನ್ ಮುನ್ನಡೆ ಸಾಧಿಸಿದ ಕಾಂಗರೂ ಪಡೆ
author img

By

Published : Jan 9, 2021, 12:57 PM IST

ಸಿಡ್ನಿ: ಆರಂಭಿಕ ಆಘಾತದ ನಡುವೆಯೂ ಕಾಂಗರೂ ತಂಡಕ್ಕೆ ಲಾಬುಶೇನ್ ಮತ್ತು ಸ್ಮಿತ್ ಆಸರೆಯಾಗಿದ್ದು, ದ್ವಿತೀಯ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಕಳೆದುಕೊಂಡು 103 ರನ್​ ಗಳಿಸುವ ಮೂಲಕ 197 ರನ್​ಗಳ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಆಲ್​ಔಟ್ ಆದ ನಂತರ ದ್ವಿತೀಯ ಇನ್ನಿಂಗ್ಸ್​ ಆರಂಭಿದ ಆಸ್ಟ್ರೇಲಿಯಾಕ್ಕೆ ಸಿರಾಜ್ ಶಾಕ್ ನೀಡಿದ್ರು. ಕಳೆದ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದ್ದ ಪುಕೋವ್​ಸ್ಕಿ (10) ಸಹಾಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು.

ವಾರ್ನರ್ ಕೂಡ ಹೆಚ್ಚು ಕಾಲ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಅಶ್ವಿನ್ ಎಸೆತದಲ್ಲಿ ಸ್ವೀಪ್ ಮಾಡಲು ಹೋಗಿ, ಎಲ್​ಬಿ ಬಲೆಗೆ ಬಿದ್ರು. ಆರಂಭಿಕ ಆಟಗಾರರು ಪೆವಿಲಿಯನ್ ಸೇರುತ್ತಿದ್ದಂತೆ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್ ಮೂರನೇ ದಿನದ ಅಂತ್ಯದ ವರೆಗೂ ಬ್ಯಾಟ್ ಬೀಸಿದ್ರು.

ಮೂರನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದು, ಒಟ್ಟು 197 ರನ್​ಗಳ ಮುನ್ನಡೆ ಸಾಧಿಸದೆ. ಸ್ಟೀವ್ ಸ್ಮಿತ್ 29 ಮತ್ತು ಮಾರ್ನಸ್ ಲಾಬುಶೇನ್ 47 ರನ್​ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಸಿರಾಜ್ ಮತ್ತು ಆಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.