ETV Bharat / sports

ಟೀಂ ಇಂಡಿಯಾಪರ ಜಡೇಜಾ ಕಮಾಲ್: ಸ್ಮಿತ್ ಶತಕದಾಟ, 338ಕ್ಕೆ ಆಸೀಸ್ ಸರ್ವಪತನ - ಭಾರತ vs ಆಸ್ಟ್ರೇಲಿಯಾ ಲೈವ್

ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ ಬೌಲರ್​ಗಳ ಕರಾರುವಾಕ್​ ದಾಳಿಗೆ ಆಸ್ಟ್ರೇಲಿಯಾ ತಂಡ 337 ರನ್​​ಗಳಿಗೆ ಆಲೌಟ್​ ಆಗಿದೆ.

India bowl out Australia for 338
ಟೀಂ ಇಂಡಿಯಾಪರ ಜಡೇಜಾ ಕಮಾಲ್
author img

By

Published : Jan 8, 2021, 9:38 AM IST

Updated : Jan 8, 2021, 9:45 AM IST

ಸಿಡ್ನಿ: ಸ್ಟೀವ್ ಸ್ಮಿತ್ ಶತಕ, ಲಾಬುಶೇನ್ ಮತ್ತು ಪುಕೋವ್​ಸ್ಕಿ ಅರ್ಧಶತಕದ ನೆರವಿನಿಂದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ 338 ರನ್​​ಗಳಿಗೆ ಸರ್ವಪತನ ಕಂಡಿದೆ.

ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಲಾಬುಶೇನ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಈ ಜೋಡಿ ಮೂರನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟ ಆಡಿತು. ನಿನ್ನೆಯಿಂದಲೂ ಭಾರತೀಯ ಬೌಲರ್​ಗಳನ್ನು ಕಾಡಿದ್ದ ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದ್ರು.

91 ರನ್​ ಗಳಿಸಿದ್ದ ಲಾಬುಶೇನ್ ಜಡೇಜಾ ಬೌಲಿಂಗ್​ನಲ್ಲಿ ಪೂಜಾರಗೆ ಕ್ಯಾಚ್​ನೀಡಿ ನಿರ್ಗಮಿಸಿದ್ರು. ನಂತರ ಬಂದ ಮ್ಯಾಥ್ಯೂ ವೇಡ್ ಕೇವಲ 13 ರನ್​ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ರೀನ್ ಬುಮ್ರಾ ಎಸೆತದಲ್ಲಿ ಎಲ್​ಬಿ ಬಲೆಗೆಬಿದ್ದು ಶೂನ್ಯ ಸುತ್ತಿದ್ರು.

ಈ ನಡುವೆ ಉತ್ತಮವಾಗಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್​ನಲ್ಲಿ 27ನೇ ಶತಕ ಸಿಡಿಸಿದ್ರು. ನಾಯಕ ಟಿಮ್ ಪೇನ್ 1 ರನ್​ಗೆ ಪೆವಿಲಿಯನ್ ಸೇರಿಕೊಂಡ್ರೆ, ಕಮ್ಮಿನ್ಸ್ ಶೂನ್ಯಕ್ಕೆ ಔಟ್ ಆದ್ರು. ಕೆಲ ಕಾಲ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟಾರ್ಕ್ 24 ರನ್​ ಗಳಸಿ ಸೈನಿಗೆ ವಿಕೆಟ್ ಒಪ್ಪಿಸಿದ್ರು. ನಾಥನ್ ಲಿಯಾನ್(0) ಮತ್ತು ​30 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ರನ್​​ಔಟ್​ಗೆ ಬಲಿಯಾಗುವ ಮೂಲಕ ಆಸೀಸ್ 337 ರನ್​ಗಳಿಗೆ ಸರ್ವಪತನ ಕಂಡಿತು​. ಭಾರತದ ಪರ ಜಡೇಜಾ 4 ವಿಕೆಟ್, ಸೈನಿ 2, ಬುಮ್ರಾ 2 ಮತ್ತು ಸಿರಾಜ್ 1 ವಿಕೆಟ್ ಪಡೆದಿದ್ದಾರೆ.

Last Updated : Jan 8, 2021, 9:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.