ಚೆನ್ನೈ: ಇಲ್ಲಿನ ಎಂ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಸುಭದ್ರ ಸ್ಥಿತಿಯಲ್ಲಿದ್ದು, ಮೂರು ವಿಕೆಟ್ ಕಳೆದುಕೊಂಡು 263ರನ್ಗಳಿಕೆ ಮಾಡಿದೆ. ಅಜೇಯ 128ರನ್ಗಳಿಕೆ ಮಾಡಿರುವ ಇಂಗ್ಲೆಂಡ್ ಕ್ಯಾಪ್ಟನ್ ರೂಟ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
-
It's Stumps on Day 1 of the 1st @Paytm #INDvENG Test!
— BCCI (@BCCI) February 5, 2021 " class="align-text-top noRightClick twitterSection" data="
1⃣2⃣8⃣* for Joe Root
8⃣7⃣ for Dominic Sibley
2⃣ wickets for @Jaspritbumrah93
Scorecard 👉 https://t.co/VJF6Q6jMis pic.twitter.com/25qD0TK6aj
">It's Stumps on Day 1 of the 1st @Paytm #INDvENG Test!
— BCCI (@BCCI) February 5, 2021
1⃣2⃣8⃣* for Joe Root
8⃣7⃣ for Dominic Sibley
2⃣ wickets for @Jaspritbumrah93
Scorecard 👉 https://t.co/VJF6Q6jMis pic.twitter.com/25qD0TK6ajIt's Stumps on Day 1 of the 1st @Paytm #INDvENG Test!
— BCCI (@BCCI) February 5, 2021
1⃣2⃣8⃣* for Joe Root
8⃣7⃣ for Dominic Sibley
2⃣ wickets for @Jaspritbumrah93
Scorecard 👉 https://t.co/VJF6Q6jMis pic.twitter.com/25qD0TK6aj
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಇಂಗ್ಲೆಂಡ್ ಮೊದಲ ವಿಕೆಟ್ನಷ್ಟಕ್ಕೆ 63ರನ್ಗಳ ಜೊತೆಯಾಟ ಪಡೆದುಕೊಂಡಿತು. ಈ ವೇಳೆ ರೊರಿ ಬುರ್ನ್(33) ಅಶ್ವಿನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಡಾನೀಲ್ (0) ಬುಮ್ರಾ ಬಲೆಗೆ ಬಿದ್ದರು.
ಓದಿ: 100ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದ ರೂಟ್!
ತಂಡದ ಸ್ಕೋರ್ 63 ಆಗಿದ್ದ ವೇಳೆ ಡಾಮಿನಿಕ್ ಸಿಬ್ಲಿ ಸೇರಿಕೊಂಡ ನಾಯಕ ರೂಟ್ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇಬ್ಬರು ಪ್ಲೇಯರ್ಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಟೀಂ ಇಂಡಿಯಾ ವೇಗಿಗಳು ಹಾಗೂ ಸ್ಪಿನ್ನರ್ಗಳನ್ನ ಸುಲಭವಾಗಿ ಎದುರಿಸಿದರು.
ಆಕರ್ಷಕ ಆಟವಾಡಿದ ಸಿಬ್ಲಿ - ರೂಟ್ ಜೋಡಿ ತಂಡವನ್ನ ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಯಿತು. ದಿನದ ಕೊನೆಯವರೆಗೆ ಬ್ಯಾಟ್ ಬೀಸಿದ ರೂಟ್ ಅಜೇಯ 128ರನ್ಗಳಿಕೆ ಮಾಡಿದ್ರೆ, 87ರನ್ಗಳಿಕೆ ಮಾಡಿದ್ದ ಸಿಬ್ಲಿ ಬುಮ್ರಾ ಮಾಡಿದ ಕೊನೆ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇಂಗ್ಲೆಂಡ್ ಮೊದಲ ದಿನ ಒಟ್ಟು 89.3 ಓವರ್ ಎದುರಿಸಿದ್ದು, ಮೂರು ವಿಕೆಟ್ ಕಳೆದುಕೊಂಡು 263ರನ್ಗಳಿಕೆ ಮಾಡಿದೆ.
ಟೀಂ ಇಂಡಿಯಾ ಪರ ಬುಮ್ರಾ 2ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದುಕೊಂಡಿದ್ದಾರೆ. ಉಳಿದಂತೆ ಯಾವೊಬ್ಬ ಬೌಲರ್ ಮಾರಕವಾಗಿ ಪರಿಣಮಿಸಲಿಲ್ಲ.