ಸಿಡ್ನಿ (ಆಸ್ಟ್ರೇಲಿಯಾ): ಕನ್ನಡಿಗ ಮಯಾಂಕ್ ಅಗರ್ವಾಲ್ ಗಾಯದ ಕಾರಣ ಆಸೀಸ್ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಹೇಳಿದ್ದಾರೆ.
ಟೀಂ ಇಂಡಿಯಾ ಆಟಗಾರ ಮಯಾಂಕ್ ಅಗರ್‌ವಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಂಡಿರಜ್ಜು ಗಾಯದಿಂದಾಗಿ ವೈಟ್ ಬಾಲ್ ಸರಣಿಯನ್ನು ತಪ್ಪಿಸಿಕೊಂಡಿರುವ ರೋಹಿತ್ ಶರ್ಮಾ ಅವರ ಸ್ಥಾನ ತುಂಬಬಲ್ಲರು ಎಂದಿದ್ದಾರೆ.
"ರೋಹಿತ್ ಒಬ್ಬ ಶ್ರೇಷ್ಠ ಆಟಗಾರ. ಅವರು ಈ ಹಿಂದೆ ನಮ್ಮ ವಿರುದ್ಧ ಯಶಸ್ಸು ಗಳಿಸಿದ್ದರು. ಸೀಮಿತ ಓವರ್ಗಳ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿರುವುದು ದುರದೃಷ್ಟಕರ" ಎಂದು ಫಿಂಚ್ ಹೇಳಿದ್ದಾರೆ.
ಭಾರತ - ಆಸ್ಟ್ರೇಲಿಯಾ ಸರಣಿ: ಸಮಯ, ಸ್ಥಳ, ದಿನಾಂಕ, ತಂಡಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
"ನೀವು ಯಾವಾಗಲೂ ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತೀರಿ. ಮಂಡಿರಜ್ಜು ಗಾಯದಿಂದ ಹೊರಗುಳಿದಿರುವ ರೋಹಿತ್ ಅವರ ಸ್ಥಾನವನ್ನು ಮಯಾಂಕ್ ಅಗರ್ವಾಲ್ ತುಂಬಬಹುದು. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತ ರೋಹಿತ್ ಅವರ ಅನುಭವವನ್ನು ಕಳೆದುಕೊಳ್ಳಲಿದೆ. ಆದರೆ ಗುಣಮಟ್ಟದ ಆಟಗಾರರನ್ನು ಸಹ ಹೊಂದಿದೆ" ಎಂದು ಹೇಳಿದ್ದಾರೆ.
ಶುಕ್ರವಾರ ಪ್ರಾರಂಭವಾಗುವ ಏಕದಿನ ಪಂದ್ಯದಿಂದ ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿಯಾಗಲಿವೆ. ಡಿಸೆಂಬರ್ 4ರಿಂದ ಟಿ-20 ಸರಣಿ ಪ್ರಾರಂಭವಾದ್ರೆ, ಡಿಸೆಂಬರ್ 17ರಿಂದ ಬಹು ನಿರೀಕ್ಷಿತ ಟೆಸ್ಟ್ ಸರಣಿ ಆರಂಭವಾಗಲಿದೆ.