ಬ್ರಿಸ್ಬೇನ್ (ಆಸ್ಟ್ರೇಲಿಯಾ): ಗಬ್ಬಾ ಮೈದಾನದಲ್ಲಿ ಆಸೀಸ್ ಬೌಲರ್ಗ ಲೆಕ್ಕಾಚಾರ ಉಲ್ಟಾ ಮಾಡಿ ಶತಕದ ಜೊತೆಯಾಟವಾಡಿದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ 30 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
-
The partnership between Washington Sundar and Shardul Thakur is worth 59* runs – the highest by an India pair for the seventh wicket in Tests at the Gabba 🙌#AUSvIND ⏩ https://t.co/oDTm20rn07 pic.twitter.com/YosCiRoCbP
— ICC (@ICC) January 17, 2021 " class="align-text-top noRightClick twitterSection" data="
">The partnership between Washington Sundar and Shardul Thakur is worth 59* runs – the highest by an India pair for the seventh wicket in Tests at the Gabba 🙌#AUSvIND ⏩ https://t.co/oDTm20rn07 pic.twitter.com/YosCiRoCbP
— ICC (@ICC) January 17, 2021The partnership between Washington Sundar and Shardul Thakur is worth 59* runs – the highest by an India pair for the seventh wicket in Tests at the Gabba 🙌#AUSvIND ⏩ https://t.co/oDTm20rn07 pic.twitter.com/YosCiRoCbP
— ICC (@ICC) January 17, 2021
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಎರಡನೇ ಟೆಸ್ಟ್ ಪಂದ್ಯವಾಡುತ್ತಿರುವ ಶಾರ್ದೂಲ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ರು. ಈ ಜೋಡಿ 7ನೇ ವಿಕೆಟ್ಗೆ 123ರನ್ಗಳನ್ನು ಕಲೆಹಾಕಿದೆ. ಈ ಮೂಲಕ ಗಬ್ಬಾ ಮೈದಾನದಲ್ಲಿ 7ನೇ ವಿಕೆಟ್ಗೆ ಅತಿಹೆಚ್ಚು ರನ್ ಪೇರಿಸಿದ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ 1991ರಲ್ಲಿ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಜೋಡಿ 7ನೇ ವಿಕೆಟ್ಗೆ 58 ರನ್ ಕಲೆಹಾಕಿದ್ದು, ಈ ಹಿಂದಿನ ದಾಖಲೆಯಾಗಿತ್ತು. ಇದೀಗ 30 ವರ್ಷಗಳ ಬಳಿಕ ಈ ಮೈಲಿಗಲ್ಲನ್ನು ಬ್ರೇಕ್ ಮಾಡಲಾಗಿದೆ.
186 ರನ್ಗಳಿಗೆ ಪ್ರಮುಖ ಬ್ಯಾಟ್ಸ್ಮನ್ಗಳೆಲ್ಲ ಪೆವಿಲಿಯನ್ ಸೇರಿದ ನಂತರ 7ನೇ ವಿಕೆಟ್ಗೆ ಜೊತೆಯಾದ ಆಲ್ರೌಡರ್ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ ಇಬ್ಬರು ಆಟಗಾರರು ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರುಮಾಡಿದ್ರು.