ETV Bharat / sports

ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ರೋಹಿತ್: ಸುನೀಲ್ ಗವಾಸ್ಕರ್ ಆಕ್ರೋಶ

ಅಂತಿಮ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿರುದ್ಧ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gavaskar slams Rohit
ರೋಹಿತ್ ವಿರುದ್ಧ ಸುನೀಲ್ ಗವಾಸ್ಕರ್ ಆಕ್ರೋಶ
author img

By

Published : Jan 16, 2021, 1:31 PM IST

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ರೋಹಿತ್ ಶರ್ಮಾ ತಮ್ಮ ವಿಕೆಟ್ ಉಡುಗೊರೆಯಾಗಿ ನೀಡುತ್ತಿದ್ದಂತೆ, ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ವಾಗ್ದಾಳಿ ನಡೆಸಿದ್ದಾರೆ.

ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಿಧಾನವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕ್ರಮೇಣ ಬೌಂಡರಿಗಳ ಮೂಲಕ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದ್ರು, 44 ರನ್ ಗಳಿಸಿರುವಾಗ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ರೋಹಿತ್ ತಮ್ಮ ವಿಕೆಟ್ ಅನ್ನು ಆಫ್ ಸ್ಪಿನ್ನರ್ ನಾಥನ್ ಲಿಯಾನ್‌ಗೆ ಉಡುಗೊರೆಯಾಗಿ ನೀಡಿದರು.

ಈ ವೇಳೆ ಕಮೆಂಟರಿ ಬಾಕ್ಸ್​ನಲ್ಲಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ರೋಹಿತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. "ಏಕೆ? ಏಕೆ? ಏಕೆ? ಅದು ನಂಬಲಾಗದ ಹೊಡೆತ. ಅದು ಬೇಜವಾಬ್ದಾರಿ ಹೊಡೆತ. ಲಾಂಗ್- ಆನ್‌ನಲ್ಲಿ ಫೀಲ್ಡರ್ ಇದ್ದಾನೆ, ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡರ್ ಇದ್ದಾನೆ. ನೀವು ಮೊದಲು ಒಂದೆರಡು ಎಸೆತಗಳನ್ನು ಬೌಂಡರಿ ಹೊಡೆದಿದ್ದೀರಿ, ಏಕೆ ನೀವು ಆ ಹೊಡೆತವನ್ನು ಆಡುತ್ತೀರಾ? ನೀವು ಹಿರಿಯ ಆಟಗಾರ, ಇಂತಾ ಅನಗತ್ಯ ಹೊಡೆತಕ್ಕೆ ಯಾವುದೇ ಕ್ಷಮೆ ಇಲ್ಲ, ಉಡುಗೊರೆಯಾಗಿ ವಿಕೆಟ್ ನೀಡಲಾಗಿದೆ" ಎಂದು ಕಿಡಿ ಕಾರಿದ್ದಾರೆ.

ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಕಾರಣ ದ್ವಿತೀಯ ದಿನದಾಟ ಮುಕ್ತಾಯವಾಗಿದೆ. ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದ್ದು, ಪೂಜಾರ 8 ಮತ್ತು ರಹಾನೆ 2 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.