ನವದೆಹಲಿ: ಆಂಗ್ಲರ ನಾಡಲ್ಲಿ ನಡೆಯಲಿರುವ 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 30ರಂದು ಆರಂಭವಾಗಲಿರುವ ಮಹಾ ಟೂರ್ನಿಗೆ ಕಾಮಂಟೆಟರ್ಸ್ಗಳನ್ನು ಘೋಷಣೆ ಮಾಡಿದೆ.
ಇದರಲ್ಲಿ ಭಾರತದಿಂದ ಮಾಜಿ ನಾಯಕ ಸೌರವ್ ಗಂಗೂಲಿ, ಹರ್ಷಾ ಬೋಗ್ಲೆ, ಸಂಜಯ್ ಮಂಜ್ರೇಕರ್ ಸೇರಿದಂತೆ ಪ್ರಖ್ಯಾತ ಕ್ರಿಕೆಟಿಗರು ಕಾಮಂಟೆಟರ್ಸ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರಲ್ಲಿ ಮೂವರು ಮಹಿಳಾ ಕಾಮಂಟೆಟರ್ಸ್ ಕೂಡ ಸೇರಿದ್ದಾರೆ.
2015ರ ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಮೈಕಲ್ ಕ್ಲಾರ್ಕ್ ಮೊದಲ ಬಾರಿಗೆ ವರ್ಲ್ಡ್ ಕಪ್ನಲ್ಲಿ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಶ್ರೀಲಂಕಾ ಲೆಜೆಂಡ್ ಕುಮಾರ್ ಸಂಗಕ್ಕರ, ಇಂಗ್ಲೆಂಡ್ನ ನಾಸಿರ್ ಹುಸೇನ್, ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಕೂಡ ಇರಲಿದ್ದಾರೆ.
ಇದೇ ಮೇ 30ರಂದು ಆತಿಥೇಯ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ಗೆ ಚಾಲನೆ ಸಿಗಲಿದೆ. ಟೀಂ ಇಂಡಿಯಾವು ಜೂನ್ 5ರಂದು ದಕ್ಷಿಣ ಆಫ್ರಿಕಾ ಜೊತೆ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಜುಲೈ 14ರಂದು ಫೈನಲ್ ಪಂದ್ಯ ನಡೆಯಲಿದೆ.
ಕಾಮಂಟೆಟರ್ಸ್ ಲಿಸ್ಟ್ ಇಂತಿದೆ: ಸೌರವ್ ಗಂಗೂಲಿ, ಸಂಜಯ್ ಮಂಜ್ರೇಕರ್, ಹರ್ಷ ಬೋಗ್ಲೆ, ನಾಸಿರ್ ಹುಸೇನ್, ಇಯಾನ್ ಬಿಷಪ್, ಮೆಲಾನಿ ಜೋನ್ಸ್, ಕುಮಾರ್ ಸಂಗಕ್ಕರ, ಮೈಕಲ್ ಅಥರ್ಟನ್, ಅಲಿಸನ್ ಮಿಚೆಲ್, ಬ್ರೆಂಡನ್ ಮೆಕಲಮ್, ಗ್ರೇಮ್ ಸ್ಮಿತ್, ವಾಸಿಮ್ ಅಕ್ರಮ್, ಶಾನ್ ಪೊಲಾಕ್, ಮೈಕಲ್ ಸ್ಲೇಟರ್, ಮಾರ್ಕ್ ನಿಕೋಲಸ್, ಮೈಕೆಲ್ ಹೋಲ್ಡಿಂಗ್, ಇಸಾ ಗುಹಾ, ಪೊಮ್ಮಿ ಮಬಿಂಗ್ವಾ, ಸೈಮನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಅಲಿ ಖಾನ್ ಮತ್ತು ಇಯಾನ್ ವಾರ್ಡ್