ETV Bharat / sports

ಮಿಂಚಿದ ಹೋಲ್ಡರ್​: ರಾಜಸ್ಥಾನ್​ ತಂಡವನ್ನು 154 ರನ್​ಗಳಿಗೆ ನಿಯಂತ್ರಿಸಿದ ಹೈದರಾಬಾದ್​ - ಜೇಸನ್ ಹೋಲ್ಡರ್​ 3 ವಿಕೆಟ್ಸ್​

ಹೋಲ್ಡರ್ ಬೌಲಿಂಗ್​​​ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್​ಗಳಿಸಿದೆ.

ಜೇಸನ್ ಹೋಲ್ಡರ್
ಜೇಸನ್ ಹೋಲ್ಡರ್
author img

By

Published : Oct 22, 2020, 9:28 PM IST

Updated : Oct 22, 2020, 10:02 PM IST

ದುಬೈ: ಜೇಸನ್​ ಹೋಲ್ಡರ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ ತಂಡವನ್ನು 154 ರನ್​ಗಳಿಗೆ ನಿಯಂತ್ರಿಸುವಲ್ಲಿ ಸನ್​ರೈಸರ್ಸ್ ಹೈದರಾಬಾದ್ ಯಶಸ್ವಿಯಾಗಿದೆ.

ಟಾಸ್ ಗೆದ್ದ ಕ್ಯಾಪ್ಟನ್​ ವಾರ್ನರ್​ ರಾಜಸ್ಥಾನ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಉತ್ತಪ್ಪ 19 ರನ್​ಗಳಿಸಿ ರನೌಟ್​​​ ಆದರು. ರನ್​ಗಳಿಸಲು ಆರಂಭದಿಂದಲೂ ಪರದಾಡಿದ ಬೆನ್​ಸ್ಟೋಕ್ಸ್, ಸಾಮ್ಸನ್​ ಜೊತೆ ಸೇರಿ 56ರನ್​ಗಳ ಜೊತೆಯಾಟ ನಡೆಸಿದರು.​ ಆದರೆ 32ಎಸೆತಗಳಲ್ಲಿ 30ರನ್​ಗಳಿಸಿ ರಶೀದ್ ಖಾನ್​ಗೆ ವಿಕೆಟ್​ ಒಪ್ಪಿಸಿ ನಿರಾಶೆಯನುಭವಿಸಿದರು.

ವಿಕೆಟ್ ಕೀಪರ್ ಸಂಜು ಸಾಮ್ಸನ್​ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 36 ರನ್​ಗಳಿಸಿದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಮತ್ತೊಮ್ಮೆ ವಿಫಲರಾದರು. ನಂತರ ಬಂದಂತಹ ಯಾವುದೇ ಬ್ಯಾಟ್ಸ್​ಮನ್​ಗಳು ರನ್​ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಸ್ಮಿತ್ 19, ರಿಯಾನ್ ಪರಾಗ್ 12 ಎಸೆತಗಳಲ್ಲಿ 20, ಆರ್ಚರ್​ 16 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಒಟ್ಟಾರೆ ರಾಜಸ್ಥಾನ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದು 154 ರನ್​ಗಳಿಸಿತು.

ಹೈದರಾಬಾದ್​ ತಂಡದ ಪರ ಜೇಸನ್ ಹೋಲ್ಡರ್​ 33 ರನ್​ ನೀಡಿ 3 ವಿಕೆಟ್​, ವಿಜಯ್ ಶಂಕರ್ 15 ಕ್ಕೆ1 ಹಾಗೂ ರಶೀದ್​ 20ಕ್ಕೆ 1 ವಿಕೆಟ್ ಪಡೆದು ರಾಜಸ್ಥಾನ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

Last Updated : Oct 22, 2020, 10:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.