ನವದೆಹಲಿ : ಲಾಕ್ಡೌನ್ ಮುಗಿದ ಬಳಿಕ ಆರಂಭವಾಗುವ ತರಬೇತಿ ಅಥವಾ ಪಂದ್ಯಗಳ ವೇಳೆ ಪ್ರತ್ಯೇಕ ಬಾಟೆಲ್, ಟವೆಲ್ ಬಳಸಬೇಕು. ಮೊದಲಾಗಿ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು ಎಂದು ಹಾಕಿ ಇಂಡಿಯಾ ತನ್ನ ಆಟಗಾರರಿಗೆ ಸೂಚನೆ ನೀಡಿದೆ.
ಕೊರೊನಾ ಭೀತಿಯಿಂದ ಈಗಾಗಲೇ ಎಲ್ಲಾ ಮಾದರಿಯ ಕ್ರೀಡಾಕೂಟಗಳು ಸ್ತಬ್ಧಗೊಂಡಿವೆ. ಒಲಿಂಪಿಕ್ಸ್, ಪ್ರೀಮಿಯರ್ ಲೀಗ್ ಹಾಗೂ ಐಪಿಎಲ್ನಂತಹ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ.
ಇದೀಗ ಲಾಕ್ಡೌನ್ ಮುಗಿದ ನಂತರ ತರಬೇತಿಯಲ್ಲಿ ಪಾಲ್ಗೊಳ್ಳುವವರು 40x20ಮೀ ಸುತ್ತಳತೆಯಲ್ಲಿ 4 ರಿಂದ 6 ಆಟಗಾರರ ಗುಂಪಿನಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ದೊಡ್ಡ ಪ್ರದೇಶದಲ್ಲಿ ಕಡಿಮೆ ಜನರು ಇರುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ತನ್ನ 20 ಪುಟಗಳ ಎಸ್ಒಪಿ ಮತ್ತು ಮಾರ್ಗ ಸೂಚಿಗಳನ್ನು ಅಸೋಸಿಯೇಷನ್ಗೆ ತಿಳಿಸಿದೆ.
ಪೂರ್ಣ ಕ್ರೀಡಾಂಗಣವನ್ನು 4 ಭಾಗಗಳಾಗಿ ವಿಂಗಡಿಸಿ, ಒಂದು ಭಾಗದಲ್ಲಿ ಮೂರು ಆಟಗಾರರು ಒಂದು ಮೀಟರ್ ಅಂತರ ಕಾಯ್ದುಕೊಂಡು ತರಬೇತಿ ನಡೆಸಬೇಕು. ಉಳಿದ ಮೂರು ಭಾಗದಲ್ಲೂ ಕೂಡ ಇದೇ ಮಾರ್ಗವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಹಾಕಿ ಇಂಡಿಯಾ ತಿಳಿಸಿದೆ.
ಪಂದ್ಯದ ನಡುವೆ ಆಟಗಾರರು ಹೈಫೈವ್ಸ್ ಮಾಡುವುದು, ಮುಷ್ಟಿಗೆ ಮುಷ್ಟು ಗುದ್ದುವುದನ್ನು ನಿಷೇಧಿಸಿದೆ. ಇನ್ನು, ಪ್ರತಿಯೊಬ್ಬ ಆಟಗಾರರು ಪ್ರತ್ಯೇಕವಾದ ಕಿಟ್ಗಳನ್ನು ತರಬೇತಿಯ ವೇಳೆ ತರಬೇಕು. ಆಟಗಾರರು ತಮ್ಮ ಟವೆಲ್ ಹಾಗೂ ನೀರಿನ ಬಾಟಲಿಗಳನ್ನು ಮಾತ್ರವೇ ಉಪಯೋಗಿಸಬೇಕು ಎಂದು ಹಾಕಿ ಇಂಡಿಯಾ ಸೂಚಿಸಿದೆ.
ಗ್ರೌಂಡ್ಸ್ಮನ್ಗಳು ಆಟಗಾರರು ಬರುವ ಮುಂಚೆ ಬಂದು ಎಲ್ಲಾ ತಯಾರಿ ಮಾಡಬೇಕು. ಮತ್ತೆ ತರಬೇತಿ ಮುಗಿದ ನಂತರ ಎಲ್ಲಾ ವಸ್ತುಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಬೇಕು ಎಂದು ಸೂಚಿಸಲಾಗಿದೆ.