ETV Bharat / sports

ಮ್ಯಾಚ್​ ಫಿನಿಶರ್​ ಧೋನಿಯ ಐದು ಅವಿಸ್ಮರಣೀಯ ಇನ್ನಿಂಗ್ಸ್​ಗಳು ಹೀಗಿವೆ..

ಧೋನಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫಿನಿಶರ್ ಎಂದು ಪ್ರಸಿದ್ಧರಾಗಿದ್ದಾರೆ. ಅವರು ಭಾರತಕ್ಕಾಗಿ ಅನೇಕ ಪ್ರಮುಖ ಇನ್ನಿಂಗ್ಸ್​ಗಳನ್ನು ಆಡಿದ್ದಾರೆ. ಆ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

HappyBirthdayDhoni: Dhoni Most 5 memorable innings
ಧೋನಿಯ ಐದು ಅವಿಸ್ಮರಣೀಯ ಇನ್ನಿಂಗ್ಸ್​ಗಳು
author img

By

Published : Jul 7, 2020, 2:08 PM IST

ಹೈದರಾಬಾದ್ : ತನ್ನ ನಾಯಕತ್ವದ ಅವಧಿಯಲ್ಲಿ ಭಾರತ ಕ್ರಿಕೆಟ್​ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಮಹೇಂದ್ರ ಸಿಂಗ್ ಧೋನಿ, 15 ವರ್ಷಗಳ ಕಾಲ ಟೀಂ ಇಂಡಿಯಾದ ಪರ ಆಡಿದ್ದಾರೆ. ಈ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ಹಲವು ವರ್ಷಗಳ ಕಾಲ ಧೋನಿ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗಿದ್ದರು.

2005 ಪಾಕಿಸ್ತಾನ ಮತ್ತು 148 ರನ್

ತನ್ನ ಮೊದಲ ನಾಲ್ಕು ಏಕದಿನ ಇನ್ನಿಂಗ್ಸ್​​ಗಳಲ್ಲಿ ವಿಫಲವಾದ ಬಳಿಕ 2005 ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಈ ಏಕದಿನ ಪಂದ್ಯದಲ್ಲಿ, ಧೋನಿ ಅದ್ಭುತ ಆರಂಭ ಮಾಡಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ 15 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಕೇವಲ 123 ಎಸೆತಕ್ಕೆ 148 ರನ್ ಗಳಿಸಿದರು. ಈ ಮೂಲಕ 50 ಓವರ್​ಗಳಲ್ಲಿ 9 ವಿಕೆಟ್​ಗೆ 356 ರನ್​ ಗಳಿಸಿ 58 ರನ್​ಗಳಿಂದ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.

HappyBirthdayDhoni: Dhoni Most 5 memorable innings
ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯ

2005 ಶ್ರೀಲಂಕಾ ಮತ್ತು 183 ರನ್​

ಧೋನಿ ತಮ್ಮ ವೃತ್ತಿ ಜೀವನದ ಅತ್ಯಧಿಕ ಸ್ಕೋರ್ ಗಳಿಸಿದ್ದು 2005 ರಲ್ಲಿ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ. ಪ್ರಸ್ತುತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 298 ರನ್ ಗಳಿಸಿತ್ತು. ಕುಮಾರ​ ಸಂಗಕ್ಕಾರ ಶತಕ ದಾಖಲಿಸಿದ್ದರು. ಶ್ರೀಲಂಕಾ ನೀಡಿದ ಗುರಿ ಬೆನ್ನಟ್ಟಿ ಭಾರತದ ಪರ ಫೀಲ್ಡಿಗಿಳಿದ ಧೋನಿ 15 ಬೌಂಡರಿ 10 ಸಿಕ್ಸರ್​ ಬಾರಿಸುವ ಮೂಲಕ 145 ಎಸೆತಗಳಲ್ಲಿ 183 ರನ್​ ಗಳಿಸಿ ಅಜೇಯ ಇನ್ನಿಂಗ್ಸ್​ ಆಡಿದರು.

2007 ಆಫ್ರಿಕಾ XI ಮತ್ತು 139 ರನ್​

2007 ರ ಏಷ್ಯಾ ಇಲೆವೆನ್​ ಪಂದ್ಯದಲ್ಲಿ 97 ಎಸೆತಗಳಿಗೆ 139 ರನ್​ ಗಳಿಸುವ ಮೂಲಕ ಧೋನಿ ಆಫ್ರಿಕಾ ಇಲೆವೆನ್​ ಬೌಲರ್​ಗಳ ಬೆವರಿಳಿಸಿದ್ದರು. ಈ ಪಂದ್ಯದಲ್ಲಿ ಧೋನಿ 15 ಬೌಂಡರಿ 5 ಸಿಕ್ಸರ್​ ಬಾರಿಸಿದ್ದರು. ಆದರೆ, ಆಫ್ರಿಕಾ ಇಲೆವೆನ್ ಈ ಪಂದ್ಯವನ್ನು 13 ರನ್‌ಗಳಿಂದ ಗೆದ್ದುಕೊಂಡಿತು.

ಏಷ್ಯಾ ಇಲೆವೆನ್​ನಲ್ಲಿ ಆಫ್ರಿಕಾ ವಿರುದ್ಧ 139 ರನ್ ಗಳಿಸಿದಾಗ

2011 ಶ್ರೀಲಂಕಾ ಮತ್ತು 91 ರನ್

2011 ರ ವಿಶ್ವಕಪ್​ ಚಾಂಪಿಯನ್ಸ್​ ರೋಚಕ ಪಂದ್ಯದಲ್ಲಿ ಭಾರತ -ಶ್ರೀಲಂಕಾ ಮುಖಾಮಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 275 ರನ್​ ಗುರಿ ನೀಡಿತ್ತು. ಭಾರತದ ಪರ ಬ್ಯಾಟಿಂಗ್ ಮಾಡಿದ ಸಚಿನ್ ಮತ್ತು ಸೆಹ್ವಾಗ್ ಬೇಗನೆ ಪೆವಿಲಿಯನ್​ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಈ ವೇಳೆ ಗೌತಮ್ ಗಂಭೀರ್​ 97 ರನ್ ಗಳಿಸುವ ಮೂಲಕ ತಂಡವನ್ನು ಟ್ರ್ಯಾಕ್​ಗೆ ತಂದರು. ಕೊನೆಯದಾಗಿ ಫೀಲ್ಡಿಗಿಳಿದ ಧೋನಿ 91 ಎಸೆತಗಳಲ್ಲಿ ಅಜೇಯ ಇನ್ನಿಂಗ್ಸ್​ ಆಡಿ 8 ಬೌಂಡರಿ 2 ಸಿಕ್ಸರ್​ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ರನ್​ಗಳಿಂದ ಜಯಗಳಿಸಿ, ಚಾಂಪಿಯನ್ಸ್​ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ನಿರ್ಮಿಸಿತ್ತು.

ಧೋನಿ ಅದ್ಭುತ ಸಿಕ್ಸರ್​ ಬಾರಿಸಿದಾಗ ಯುವಿ ಪ್ರತಿಕ್ರಿಯೆ​

2013 ಆಸ್ಟ್ರೇಲಿಯಾ ಮತ್ತು 224 ರನ್

ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ನಡೆದ 2012-13 ರ ಬೊರ್ಡೆಲ್ -ಗವಾಸ್ಕರ್​ ಸರಣಿಯ ಮೊದಲ ಪಂದ್ಯದಲ್ಲಿ 265 ಎಸೆತಕ್ಕೆ 24 ಬೌಂಡರಿ ಮತ್ತು 6 ಸಿಕ್ಸರ್​ ಬಾರಿಸುವ ಮೂಲಕ ಧೋನಿ ಮೊದಲ ಬಾರಿ ಟೆಸ್ಟ್​ ಪಂದ್ಯದಲ್ಲಿ ದ್ವಿಶಕ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.