ಆಕ್ಲೆಂಡ್: ಭಾರತದ ವಿರುದ್ಧ ತವರು ನೆಲದಲ್ಲಿಯೇ ಕಿವೀಸ್ ಸೋತು ಸುಣ್ಣವಾಗಿಬಿಟ್ಟಿದೆ. ಈಗಾಗಲೇ ಏಕದಿನ ಸೋತಿರುವ ತಂಡ ಇದೀಗ ಟಿ-20 ಸಿರೀಸ್ ಕೂಡ ಕಳೆದುಕೊಳ್ಳುವ ಹೀನಾಯ ಸ್ಥಿತಿ ತಲುಪಿದೆ. ಇದಕ್ಕೆ ಕಾರಣ ಬ್ಲ್ಯಾಕ್ ಕ್ಯಾಪ್‌ಬಾಯ್ಸ್ ತಂಡದ ಓರ್ವ ಸ್ಫೋಟಕ ದಾಂಡಿಗನಿಲ್ಲದಿರೋದು ತಂಡಕ್ಕೆ ನಷ್ಟವಾಗಿತ್ತು. ಈಗ ಅದೇ ಸ್ಫೋಟಕ ಬ್ಯಾಟ್ಸ್‌ಮೆನ್ ಮಾರ್ಟಿನ್ ಗಪ್ಟಿಲ್ ಕಮ್‌ಬ್ಯಾಕ್ ಮಾಡಿದ್ದಾರೆ.
Here's our squad to face Bangladesh in 3 ODIs starting on Wednesday in Napier. 📄✍🏽| https://t.co/9em3a0MN3z #NZvBAN pic.twitter.com/wA7kbN1sI1
— BLACKCAPS (@BLACKCAPS) February 8, 2019 " class="align-text-top noRightClick twitterSection" data="
">Here's our squad to face Bangladesh in 3 ODIs starting on Wednesday in Napier. 📄✍🏽| https://t.co/9em3a0MN3z #NZvBAN pic.twitter.com/wA7kbN1sI1
— BLACKCAPS (@BLACKCAPS) February 8, 2019Here's our squad to face Bangladesh in 3 ODIs starting on Wednesday in Napier. 📄✍🏽| https://t.co/9em3a0MN3z #NZvBAN pic.twitter.com/wA7kbN1sI1
— BLACKCAPS (@BLACKCAPS) February 8, 2019
ಟೀಂ ಇಂಡಿಯಾ ವಿರುದ್ಧದ 5ನೇ ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಗಪ್ಟಿಲ್ ಈಗ ತಂಡಕ್ಕೆ ವಾಪಸ್ ಆಗಿದ್ದಾರೆ. ಬೆನ್ನು ನೋವಿನ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದ ಗಪ್ಟಿಲ್, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಫೆಬ್ರವರಿ 13ರಿಂದ ಆರಂಭಗೊಳ್ಳುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ನ್ಯೂಜಿಲೆಂಡ್ 14 ಸದಸ್ಯರನ್ನೊಳಗೊಂಡ ತಂಡವನ್ನ ಪ್ರಕಟಗೊಳಿಸಿದೆ. ಇದರಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ ಮಾರ್ಟಿನ್ ಗಪ್ಟಿಲ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಬ್ಲ್ಯೂಬಾಯ್ಸ್ ವಿರುದ್ಧ ನ್ಯೂಜಿಲೆಂಡ್ 4-1 ಅಂತರದಲ್ಲಿ ಏಕದಿನ ಪಂದ್ಯ ಕೈಚೆಲ್ಲಿದೆ. ಈಗ ವಿಶ್ವಕಪ್ ಗಮನದಲ್ಲಿರಿಸಿಕೊಂಡು ಬಾಂಗ್ಲಾ ವಿರುದ್ಧ ಬಲಿಷ್ಠ ತಂಡವನ್ನೇ ಪ್ರಕಟಗೊಳಿಸಲಾಗಿದೆ.
ಹೀಗಿರಲಿದೆ ಕಿವೀಸ್ ತಂಡ:
ಕೇನ್ ವಿಲಿಯಮ್ಸನ್(ಕ್ಯಾಪ್ಟನ್),ಟಾಡಾ ಆಸ್ಟ್ಲೈ, ಕಾಲಿನ್ ಡಿ ಗ್ರಾಂಡ್ಹೋಮ್, ಲಾಕೀ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಹೆನ್ರಿ, ಥಾಮ್ ಲಾಥಮ್, ಕಾಲಿನ್ ಮುನ್ರೋ, ಜಿಮ್ಮಿ ನಿಶಿಮ್, ಹೆನ್ರಿ ನಿಕೋಲ್ಸ್, ಮಿಚೆಲ್ ನಾಟ್ನರ್, ಟಿಮ್ ಸೌಥಿ, ರಾಸ್ ಟೇಲರ್.