ETV Bharat / sports

ಶುಬ್ಮನ್​ ಗಿಲ್​ ದ್ವಿಶತಕ, ಟೆಸ್ಟ್​ ಸರಣಿಯಲ್ಲಿ ಸ್ಥಾನ ಪಡೀತಾರಾ ಯಂಗ್​ ಹಿಟ್ಟರ್?​

ಅತ್ತ ಭಾರತ ಹಿರಿಯರ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಟಿ20 ಸರಣಿ ಕ್ಲೀನ್‌ ಸ್ವೀಪ್‌ ತವಕದಲ್ಲಿದ್ದು, ಇತ್ತ ಕಿರಿಯರು ಕೂಡಾ ನಾವೇನೂ ಕಮ್ಮಿ ಇಲ್ಲ ಎಂದು ಆಟವಾಡುತ್ತಿದ್ದಾರೆ. ಭಾರತ- ನ್ಯೂಜಿಲ್ಯಾಂಡ್​ ನಡುವಿನ 4 ದಿನಗಳ ಅನಧಿಕೃತ ಟೆಸ್ಟ್​ ಪಂದ್ಯದ ಅಂತಿಮ ದಿನವಾದ ಶುಕ್ರವಾರ, ಶುಬ್ಮನ್​ ಗಿಲ್​ ಆಕರ್ಷಕ ದ್ವಿಶತಕ ಸಿಡಿಸಿದರು. ಅಜೇಯ 204ರನ್​ ಸಿಡಿಸಿ ಮುಂಬರುವ ಭಾರತ -ನ್ಯೂಜಿಲ್ಯಾಂಡ್ ಟೆಸ್ಟ್​ ಸರಣಿಗೆ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದರು.

author img

By

Published : Feb 2, 2020, 1:18 PM IST

ಶುಬ್ಮನ್​ ಗಿಲ್​ ದ್ವಿಶತಕ, Gill smashes double century
ಶುಬ್ಮನ್​ ಗಿಲ್​ ದ್ವಿಶತಕ

ಕ್ರೈಸ್ಟ್‌ಚರ್ಚ್(ನ್ಯೂಜಿಲ್ಯಾಂಡ್​): ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಪ್ರವಾಸಿ ಭಾರತ 'ಎ' ತಂಡವು, ಆತಿಥೇಯ ತಂಡದ ವಿರುದ್ಧ ಉತ್ತಮ ಆಟವಾಡಿದ್ದಾರೆ. ಶುಬ್ಮನ್​ ಗಿಲ್​ ಆಕರ್ಷಕ ದ್ವಿಶತಕ ಸಿಡಿಸಿ 4 ದಿನಗಳ ಅನಧಿಕೃತ ಟೆಸ್ಟ್​ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡಿದ್ದಾರೆ.

ಭಾರತ- ನ್ಯೂಜಿಲ್ಯಾಂಡ್​ ನಡುವಿನ 4 ದಿನಗಳ ಅನಧಿಕೃತ ಟೆಸ್ಟ್​ ಪಂದ್ಯದ ಅಂತಿಮ ದಿನವಾದ ಶುಕ್ರವಾರ, ಶುಬ್ಮನ್​ ಗಿಲ್​ ಆಕರ್ಷಕ ದ್ವಿಶತಕ ಸಿಡಿಸಿದರು. ಅಜೇಯ 204ರನ್​ ಸಿಡಿಸಿ ಮುಂಬರುವ ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್​ ಸರಣಿಗೆ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದರು.

ಒಟ್ಟು 279 ಎಸೆತಗಳನ್ನೆದುರಿಸಿದ ಗಿಲ್,​ 4 ಸಿಕ್ಸರ್​ ಹಾಗೂ 22 ಬೌಂಡರಿ ನೆರವಿನಿಂದ 204 ರನ್​ ಸಿಡಿಸಿದರು. ಇದು ಶುಬ್ಮನ್​ ಗಿಲ್​ ಸಿಡಿಸಿದ ಎರಡನೇ ದ್ವಿಶತಕವಾಗಿದ್ದು, ಈ ಹಿಂದೆ ವೆಸ್ಟ್​ ಇಂಡೀಸ್​ ವಿರುದ್ಧ ಕಳೆದ ವರ್ಷ ದ್ವಿಶತಕ ಸಿಡಿಸಿದ್ದರು.

ನ್ಯೂಜಿಲ್ಯಾಂಡ್ ತಂಡ 562 ರನ್​ ಗಳಿಸಿ ಡಿಕ್ಲೇರ್​ ಮಾಡಿದರೆ, ಭಾರತ 216 ಮತ್ತು 448 ರನ್​ ಗಳಿಸಲಷ್ಟೇ ಶಕ್ತವಾಯ್ತು. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು.

ಇದೆ ಫೆಬ್ರವರಿ 21ರಿಂದ ಭಾರತ- ನ್ಯೂಜಿಲ್ಯಾಂಡ್​ 2 ಪಂದ್ಯಗಳ ಟೆಸ್ಟ್​ ಸರಣಿ ಆರಂಭಗೊಳ್ಳಲಿದ್ದು, ಇದಕ್ಕಾಗಿ ಭಾರತ ತಂಡ ಇನ್ನಷ್ಟೇ ಪ್ರಕಟವಾಗಬೇಕಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಗಿಲ್​ ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.