ETV Bharat / sports

2 ವಿಶ್ವಕಪ್​ ಗೆದ್ದುಕೊಟ್ಟ ಹೀರೋ, ಸಂಸದ ಗೌತಮ್​ ಗಂಭೀರ್​ಗೆ ಇಂದು ಜನ್ಮದಿನದ ಸಂಭ್ರಮ!

ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಅವಿಸ್ಮರಣೀಯ ಇನಿಂಗ್ಸ್​ ಕಟ್ಟಿದ ಕೀರ್ತಿ ಗಂಭೀರ್​ಗೆ ಸಲ್ಲುತ್ತದೆ. 2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ 97 ರನ್ ಬಾರಿಸಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು. 2007ರ ಚೊಚ್ಚಲ ಟಿ-20 ವಿಶ್ವಕಪ್ ಫೈನಲ್​ನಲ್ಲೂ ಪಾಕಿಸ್ತಾನದ ವಿರುದ್ಧ ಸಿಡಿಸಿದ್ದ 75 ರನ್​ಗಳ ಇನಿಂಗ್ಸ್ ಇಂದಿಗೂ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

author img

By

Published : Oct 14, 2020, 12:01 PM IST

Gautam Gambhir
ಗೌತಮ್​ ಗಂಭೀರ್

ನವದೆಹಲಿ: ಟೀಮ್‌ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ 2 ಬಾರಿ ಪ್ರಸಸ್ತಿ ಗೆದ್ದುಕೊಟ್ಟ ಮಾಜಿ ನಾಯಕ ಗೌತಮ್‌ ಗಂಭೀರ್‌ ಅವರು ಇಂದು 39ನೇ ವಸಂತಕ್ಕೆ ಕಾಲಿರಿಸಿದ್ದಾರೆ.

2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಡೆಲ್ಲಿ ಆಟಗಾರ 58 ಟೆಸ್ಟ್, 147 ಏಕದಿನ ಮತ್ತು 37 ಟಿ - 20 ಪಂದ್ಯಗಳಿಂದ ಕ್ರಮವಾಗಿ 4,154, 5,238 ಮತ್ತು 932 ರನ್ ಗಳಿಸಿದರು. ಸಚಿನ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಸೌರವ್ ಅವರಂತಹ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಸಂಖ್ಯೆಯ ತಾರೆಯರು ಇದ್ದಾಗ ರಾಷ್ಟ್ರೀಯ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

ಭಾರತದ ತಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಅವಿಸ್ಮರಣೀಯ ಇನಿಂಗ್ಸ್​ ಕಟ್ಟಿದ ಕೀರ್ತಿ ಗಂಭೀರ್​ಗೆ ಸಲ್ಲುತ್ತದೆ. 2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಬಾರಿಸಿದ 97 ರನ್ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು. 2007ರ ಚೊಚ್ಚಲ ಟಿ - 20 ವಿಶ್ವಕಪ್ ಫೈನಲ್​ನಲ್ಲೂ ಪಾಕಿಸ್ತಾನದ ವಿರುದ್ಧ ಸಿಡಿಸಿದ್ದ 75 ರನ್​ಗಳ ಇನಿಂಗ್ಸ್ ಇಂದಿಗೂ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಗೌತಮ್‌, 2016ರಲ್ಲಿ ಕೊನೆ ಬಾರಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. 2018ರ ಡಿಸೆಂಬರ್​ 4ರಂದು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ದೆಹಲಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸತ್​ ಪ್ರವೇಶಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.