ETV Bharat / sports

2002ರಲ್ಲಿ ಗಂಗೂಲಿ, 2020ರಲ್ಲಿ ಕೊಹ್ಲಿ... 2 ಸರಣಿಗಳ ವೈಟ್​ವಾಸ್​ಗೆ ಕಾರಣ ಇವರೇ ನೋಡಿ? - ಸೌರವ್​ ಗಂಗೂಲಿ 2002

ಭಾರತ ತಂಡ ವೆಲ್ಲಿಂಗ್ಟನ್​ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳಿಂದ ಶರಣಾದರೆ, ಎರಡನೇ ಪಂದ್ಯದಲ್ಲಿ 6 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದರೂ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ​ಅನುಭವಿಸಿದ ಕಾರಣ ಕಡಿಮೆ ಮೊತ್ತದ ಟಾರ್ಗೆಟ್​ ನೀಡಿ 7 ವಿಕೆಟ್​ಗಳಿಂದ ಸೋಲುಕಂಡಿತ್ತು.

IND vs NZ
ಭಾರತ - ನ್ಯೂಜಿಲ್ಯಾಂಡ್​
author img

By

Published : Mar 2, 2020, 10:04 PM IST

ಕ್ರೈಸ್ಟ್​ಚರ್ಚ್​: ಭಾರತ ತಂಡ ಕಿವೀಸ್​ ನೆಲದಲ್ಲಿ ಟೆಸ್ಟ್​​ ಸರಣಿಯನ್ನು 2-0ಯಲ್ಲಿ ಕಳೆದುಕೊಂಡು ನಿರಾಶೆಯನುಭವಿಸಿದೆ. ಆದರೆ ಈ ವೈಟ್​ ವಾಸ್​ ಮುಖಭಂಗ 18 ವರ್ಷಗಳ ಹಿಂದೆ ದಾದಾ ನೇತೃತ್ವದ ಭಾರತ ತಂಡಕ್ಕೂ ಸಂಭವಿಸಿತ್ತು. ಆಶ್ಚರ್ಯವೆಂದರೆ ಅಂದು ಕೂಡ ಪದಾರ್ಪಣೆ ಮಾಡಿದ್ದ ಹೊಸ ಬೌಲರ್​ಗಳೆ!.

ಭಾರತ ತಂಡ ವೆಲ್ಲಿಂಗ್ಟನ್​ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳಿಂದ ಶರಣಾದರೆ, ಎರಡನೇ ಪಂದ್ಯದಲ್ಲಿ 6 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದರೂ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ​ಅನುಭವಿಸಿದ ಕಾರಣ ಕಡಿಮೆ ಮೊತ್ತದ ಟಾರ್ಗೆಟ್​ ನೀಡಿ 7 ವಿಕೆಟ್​ಗಳಿಂದ ಸೋಲುಕಂಡಿತ್ತು.

ಸ್ವಾರಸ್ಯರಕರ ಸಂಗತಿ ಎಂದರೆ 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಕೂಡ 2 ಟೆಸ್ಟ್​ ಪಂದ್ಯಗಳನ್ನು ಇದೇ ರೀತಿ ಕಳೆದುಕೊಂಡಿತ್ತು.

ಟಾಸ್​ನಲ್ಲಿ ಸೋಲು:

2002 ಹಾಗೂ 2020 ಎರಡೂ ಸರಣಿಗಳಲ್ಲೂ ಭಾರತ ವಿರುದ್ಧ ನ್ಯೂಜಿಲ್ಯಾಂಡ್​ ಟಾಸ್​ ಗೆದ್ದಿದ್ದಲ್ಲದೆ. ಒಟ್ಟು 4 ಇನ್ನಿಂಗ್ಸ್​ನಲ್ಲೂ ಆಲೌಟ್​ ಮಾಡುವಲ್ಲಿ ಯಶಸ್ವಿಯಾಗಿದೆ.

ಭಾರತ ತಂಡ 2002ರಲ್ಲಿ 161,99,165 ಹಾಗೂ 242 ರನ್​ಗಳಿಗೆ ಆಲೌಟ್​ ಆಗಿತ್ತು. 2020ರಲ್ಲಿ 165, 191, 242 ಹಾಗೂ 124 ರನ್​ಗಳಿಗೆ ಆಲೌಟ್​ ಆಗಿದೆ.

ಎರಡೂ ಪಂದ್ಯಗಳಲ್ಲೂ ಸೋಲು:

ಎರಡು ಸಂದರ್ಭದಲ್ಲಿ ಮೊದಲ ಪಂದ್ಯವನ್ನು ಭಾರತ ತಂಡ 10 ವಿಕೆಟ್​ಗಳಿಂದ ಸೋಲುಕಂಡಿದೆ. 2002ರಲ್ಲಿ 36 ರನ್​ ಟಾರ್ಗೆಟ್​ ನೀಡಿದರೆ, 2020ರಲ್ಲಿ ಕೇವಲ 9 ರನ್​ ಟಾರ್ಗೆಟ್​ ನೀಡಿತ್ತು.

ಎರಡನೇ ಟೆಸ್ಟ್​ನಲ್ಲಿ ಎರಡು ಸರಣಿಯಲ್ಲೂ ಭಾರತ ಮೊದಲ ಇನ್ನಿಂಗ್ಸ್​ ಲೀಡ್​ ಪಡೆದುಕೊಂಡಿತ್ತು. 2002ರಲ್ಲಿ 5 ರನ್​ ಲೀಡ್​ ಪಡೆದರೆ, 2020ರಲ್ಲಿ 7 ರನ್ ಮುನ್ನಡೆ ಪಡೆದಿತ್ತು. ಆದರೂ ಮುನ್ನಡೆಯನ್ನು ಸದುಪಯೋಗಪಡಿಸಿಕೊಳ್ಳದೆ ಅಂದು ನಾಲ್ಕು ವಿಕೆಟ್​ಗಳಿಂದ ಸೋಲುಕಂಡರೆ, ಇಂದು 7 ವಿಕೆಟ್​ಗಳಿಂದ ಸೋಲುಕಂಡಿದೆ.

ಎರಡೂ ಸರಣಿಯಲ್ಲಿ ಸೆಂಚುರಿ ಇಲ್ಲ

ವಿಶೇಷವೆಂದರೆ ಈ ಎರಡು ಸರಣಿಗಳಲ್ಲೂ ಎರಡು ಕಡೆಯ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಸೆಂಚುರಿ ಬಾರಿಸುವಲ್ಲಿ ವಿಫಲರಾಗಿದ್ದರು. 2002 ರಲ್ಲಿ ಮಾರ್ಕ್​ ರಿಚಡ್ಸನ್​ 89 ರನ್​ಗಳಿಸಿದ್ದು, 2020ರಲ್ಲಿ ಕೇನ್ ವಿಲಿಯಮ್ಸನ್​ 89 ರನ್​ಗಳಿಸಿದ್ದೇ ಗರಿಷ್ಠ ರನ್ ಆಗಿದೆ. ಈ ಎರಡು ಸ್ಕೋರ್​ಗಳು ಸಹಾ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ಬಂದಿವೆ.

ಅತಿ ಹೆಚ್ಚು ಸ್ಕೋರ್​ ಕನ್ನಡಿಗರದ್ದು

ಭಾರತ ತಂಡದ ಆಟಗಾರರಿಂದ ಇವೆರಡೇ ಸರಣಿಗಳಲ್ಲಿ ಮಾತ್ರ ಒಂದು ಶತಕ ದಾಖಲಿಸಿಲ್ಲ. ಇವೆರಡೂ ಟೆಸ್ಟ್​ಗಳ ಮಧ್ಯೆ 60 ಟೆಸ್ಟ್​ ಪಂದ್ಯಗಳನ್ನಾಡಿದ್ದು ಕಡಿಮೆಯೆಂದರೂ ಸರಣಿಯಲ್ಲಿ ಒಂದಾದರು ಶತಕ ದಾಖಲಾಗಿದೆ. 2002ರಲ್ಲಿ ಕನ್ನಡಿಗ ದ್ರಾವಿಡ್ ಸಿಡಿಸಿದ 76 ರನ್​ ಗರಿಷ್ಠವಾದರೆ, 2020ರಲ್ಲೂ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಸಿಡಿಸಿದ 58 ರನ್​ ಭಾರತದ ಗರಿಷ್ಠ ರನ್​ ಆಗಿದೆ.

ಇಡೀ ಸರಣಿಯಲ್ಲಿ 100ರ ಗಡಿದಾಟಿದ್ದು ಇಬ್ಬರೇ!

ಇನ್ನು ಇವೆರಡು ಸರಣಿಗಳಲ್ಲಿ ಭಾರತ ತಂಡದ ಇಬ್ಬರು ಆಟಗಾರರು ಮಾತ್ರ ನಾಲ್ಕು ಇನ್ನಿಂಗ್ಸ್​ಗಳಿಂದ 100ರ ಗಡಿದಾಟಿದ್ದರು. 2002 ರಲ್ಲಿ ಸಚಿನ್​, 2020ರಲ್ಲಿ ಚೇತೇಶ್ವರ್​ ಪೂಜಾರ 100ರ ಗಡಿದಾಟಿದ್ದಾರೆ. ಭಾರತ 2002ರಲ್ಲಿ ಒಂದು ವಿಕೆಟ್​ಗೆ 13.37 ರನ್​ಗಳಿಸಿದ್ದರೆ, 2020ರಲ್ಲಿ 18.05 ರನ್​ ದಾಖಲಿಸಿದೆ. ಇವೆರಡು ಭಾರತ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಪ್ರತಿಯೊಂದಿ ವಿಕೆಟ್​ಗೆ ಗಳಿಸಿದ ಅತ್ಯಂತ ಕಡಿಮೆ ರನ್​ ಆಗಿದೆ.

ನಾಯಕರ ಅಂಕಿ-ಅಂಶ

2002ರಲ್ಲಿ ನಾಯಕ ಸೌರವ್​ ಗಂಗೂಲಿ ನಾಲ್ಕು ಇನ್ನಿಂಗ್ಸ್​ಗಳಲ್ಲಿ 29 ರನ್​ಗಳಿಸಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರು. ಅವರ ಸರಾಸರಿ 7.25 ಆಗಿತ್ತು. 2020ರ ನಾಯಕ ವಿರಾಟ್​ ಕೊಹ್ಲಿ 4 ಇನ್ನಿಂಗ್ಸ್​ಗಳಲ್ಲಿ 38 ರನ್​ಗಳಿಸಿದ್ದಾರೆ, ಇವರು ಸರಾಸರಿ 9.50 ಆಗಿದೆ.

ಪದಾರ್ಪಣೆ ಮಾಡಿದ ಆಲ್​ರೌಂಡರ್​ಗಳಿಂದಲೇ ಸೋಲು

2002ರಲ್ಲಿ ನ್ಯೂಜಿಲ್ಯಾಂಡ್​ ತಂಡಕ್ಕೆ ಜೇಕಬ್​ ಓರಮ್​ 2020ರಲ್ಲಿ ಕೈಲ್​ ಜೇಮೀಸನ್​ ತಂಡದಕ್ಕೆ ಪದಾರ್ಪಣೆ ಮಾಡಿದ್ದರು. ಓರಮ್​ ಇಡೀ ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಆದರೆ, ಜೇಮಿಸನ್​ 2020ರಲ್ಲಿ ಹೆಚ್ಚು ವಿಕೆಟ್​ ಪಡೆದ 2ನೇ ಬೌಲರ್​ ಆಗಿದ್ದಾರೆ.

ಓರಮ್​ 11 ವಿಕೆಟ್​ ಹಾಗೂ ಎರಡನೇ ಟೆಸ್ಟ್​ನ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಔಟಾಗದೆ 26 ರನ್​ಗಳಿಸಿ ಕ್ಲೀನ್​ಸ್ವೀಪ್​ ಸಾಧನೆಗೆ ನೆರವಾಗಿದ್ದರು. 2020ರಲ್ಲಿ ಜೇಮಿಸನ್ 9 ವಿಕೆಟ್ ಪಡೆದಿದ್ದಲ್ಲದೆ, ಎರಡು ಟೆಸ್ಟ್​ಗಳ ಮೊದಲ ಇನ್ನಿಂಗ್ಸ್​ಗಳಲ್ಲಿ 49 ಹಾಗೂ 44 ರನ್​ಗಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.