ನವದೆಹಲಿ: ಭಾರತ ತಂಡದ ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಆಕ್ರಮಣಕಾರಿ ಹಾಗೂ ಅಭಿವ್ಯಕ್ತಿಶೀಲ ನಾಯಕ ಆದರೆ ಎಂ ಎಸ್ ಧೋನಿ ನಾಯಕತ್ವವನ್ನು ಯಾರಿಂದಲೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಬೌಲರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಆಧುನಿಕ ಯುಗದ ಭಾರತ ತಂಡದ ಜನಪ್ರಿಯ ನಾಯಕರು. ಧೋನಿ ನಾಯಕತ್ವದ ಅವಧಿಯಲ್ಲಿ ಭಾರತ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಧೋನಿ ನೇತೃತ್ವದಲ್ಲಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013 ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಆದರೆ ಕೊಹ್ಲಿ ನಾಯಕತ್ವದಲ್ಲೂ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ನಲ್ಲೂ ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿದೆ.
ಧೋನಿ ನಾಯಕನಾಗಿ 200 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 110 ಗೆಲುವು, 74 ಸೋಲು ಕಂಡಿದ್ದು, 59.52 ಸರಾಸರಿ ಹೊಂದಿದ್ದಾರೆ. ಕೊಹ್ಲಿ 89 ಪಂದ್ಯಗಳನ್ನು ಮುನ್ನಡೆಸಿದ್ದು, 62 ಗೆಲುವು ಸಾಧಿಸುವ ಮೂಲಕ 71.83 ಗೆಲುವಿನ ಸರಾಸರಿ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಧೋನಿ 60 ಪಂದ್ಯಗಳನ್ನು ಮುನ್ನಡೆಸಿದ್ದು, 27 ಗೆಲುವು, 18 ಸೋಲು ಕಂಡಿವೆ. ಕೊಹ್ಲಿ 55 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದು, 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 12 ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಅವರು 60 ಗೆಲುವಿನ ಸರಾಸರಿ ಹೊಂದಿದ್ದಾರೆ. ಈ ಅಂಕಿ ಅಂಶಗಳ ಆಧಾರದ ಮೇಲೆ ಯಾರು ಉತ್ತಮ ನಾಯಕ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಈ ಪ್ರಶ್ನೆಗೆ ಉತ್ತರಿಸಿರುವ ಮಾಜಿ ಕ್ರಿಕೆಟಿಗ ಶಿವರಾಮಕೃಷ್ಣನ್, ಇಬ್ಬರು ಆಟಗಾರರು ತಮ್ಮದೇ ಆದ ನಾಯಕತ್ವ ಶೈಲಿಯನ್ನು ಹೊಂದಿದ್ದು, ಎರಡು ವಿಭಿನ್ನ ರೀತಿಯ ತಂಡಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಎರಡು ತಂಡಗಳು ತಮ್ಮದೇ ಆದ ರೀತಿಯಲ್ಲಿ ಯಶಸ್ಸನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ.
ವಿರಾಟ್ ಕೊಹ್ಲಿ ಬಹಳ ಪೂರ್ವಭಾವಿ ಮತ್ತು ಸಹಜವಾದ ನಾಯಕ. ಇದು ಅವರಿಗೆ ಹೆಚ್ಚಿನ ಹೆಚ್ಚಿನ ಶಕ್ತಿಯನ್ನು ನೀಡಿದೆ. ಅಲ್ಲದೆ ಅವರನ್ನು ಇನ್ನೂ ಉತ್ತಮ ನಾಯಕನನ್ನಾಗಿಸಿದೆ. ಅವರು ರನ್ ಗಳಿಸುವುದಲ್ಲದೆ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂದು ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಆಕ್ರಮಣಕಾರಿ ಮತ್ತು ಅಭಿವ್ಯಕ್ತಿಶೀಲ ನಾಯಕನಾಗಿದ್ದಾರೆ. ಎಂ ಎಸ್ ಧೋನಿ ವಿಚಾರದಲ್ಲಿ ಕೊಹ್ಲಿಗಿಂತ ಹಿಂದೆ ಇದ್ದಾರೆ. ಆದರೆ ಎಂ ಎಸ್ ಧೋನಿ ಮನಸ್ಸಿನಲ್ಲೇನಿದೆ ಎಂಬುದನ್ನು ಯಾರಿಂದಲೂ ತಿಳಿದುಕೊಳ್ಳುವುದಿಲ್ಲ. ಅಲ್ಲದೆ ಎಂ ಎಸ್ ಬೌಲರ್ಗಳ ನಾಯಕನಾಗಿರುವುದು ಬೌಲರ್ಗಳಿಗೆ ದೊಡ್ಡ ಅನುಕೂಲವಾಗಿದೆ ಎಂದು ಕೃಷ್ಣನ್ ಇಬ್ಬರ ನಡುವಿನ ನಾಯಕತ್ವವನ್ನು ವಿವರಿಸಿದ್ದಾರೆ.
ವಿರಾಟ್ ಕೊಹ್ಲಿಯ ನಾಯಕತ್ವವನ್ನು ಹೊಗಳಿರುವ ಶಿವರಾಮಕೃಷ್ಣನ್, ಅವರ ನೇತೃತ್ವದಲ್ಲಿ ಭಾರತ ತಂಡ 90ರ ದಶಕದ ಆಸ್ಟ್ರೇಲಿಯಾ ತಂಡದಂತಿದೆ. ಅವರು ಪ್ರತಿ ಪಂದ್ಯವನ್ನು ಗೆಲ್ಲಬೇಕೆಂಬ ಆಲೋಚನೆಯಲ್ಲಿ ಆಡುತ್ತಾರೆ. ಆಸ್ಟ್ರೇಲಿಯಾ ಕೂಡ 90 ಮತ್ತು 2000ದಲ್ಲಿ ಆಗಿದ್ದರಿಂದಲೇ ಯಶಸ್ವಿ ತಂಡವಾಗಿತ್ತು. ಅದೇ ರೀತಿ ಕೊಹ್ಲಿ ಕೂಡ ಹೋಗುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಕಾಮೆಂಟೇಟರ್ ಆಗಿರುವ ಶಿವರಾಮಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.