ETV Bharat / sports

ಮೊದಲ ಟೆಸ್ಟ್: ದ್ವಿತೀಯ ಇನ್ನಿಂಗ್ಸ್​ನಲ್ಲಿ ಪಾಕ್​ ಮಂಕು - ಇಂಗ್ಲೆಂಡ್​ ಮೇಲುಗೈ

author img

By

Published : Aug 8, 2020, 8:52 AM IST

ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುತ್ತಿರುವ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 137 ರನ್​ ಗಳಿಸಿದೆ. ಈ ಮೂಲಕ 244 ರನ್​ಗಳ ಮುನ್ನಡೆಯಲ್ಲಿದೆ.

1st Test: Stokes gives ENG hope
ದ್ವಿತೀಯ ಇನ್ನಿಂಗ್ಸ್​ನಲ್ಲಿ ಪಾಕ್​ ಮಂಕು

ಮ್ಯಾಂಚೆಸ್ಟರ್: ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಗಳಿಸಿದ್ದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮಂಕಾಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್​ ಸ್ಟೋಕ್ಸ್​ ಕೊನೆ ಗಳಿಗೆಯಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಆಂಗ್ಲರ ತಂಡ ಕೊಂಚ ಮೇಲುಗೈ ಸಾಧಿಸುವಂತೆ ಮಾಡಿದ್ದಾರೆ.

ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುತ್ತಿರುವ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 137 ರನ್​ ಗಳಿಸಿದೆ. ಈ ಮೂಲಕ 244 ರನ್​ಗಳ ಮುನ್ನಡೆಯಲ್ಲಿದೆ.

An inspired display with the ball by England has put the game back in the balance at the end of day three in Manchester.#ENGvPAK REPORT 👇 https://t.co/gcBHrmeV0R pic.twitter.com/8lUg10Fs2v

— ICC (@ICC) August 7, 2020

ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 326 ರನ್‌ಗಳಿಸಿದ್ದು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಗುರುವಾರ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿತ್ತು. ಓಲಿ ಪೋಪ್ (62) ಮತ್ತು ಜೋಸ್ ಬಟ್ಲರ್ (38) ರನ್​ಗಳಿಸಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ದೂರ ಮಾಡಿದರು.

ಪೋಪ್ ಮತ್ತು ಬಟ್ಲರ್​ ವಿಕೆಟ್ ಪಡೆದ ನಸೀಮ್ ಶಾ ಮತ್ತು ಯಾಸೀರ್ ಶಾ ಪಾಕಿಸ್ತಾನಕ್ಕೆ ಮೇಲುಗೈ ತಂದುಕೊಟ್ರು. ಕ್ರಿಸ್ ವೋಕ್ಸ್‌, ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್​ ಕೊಂಚ ರನ್​ಗಳಿಸಿ ತಂಡವನ್ನು 200ರ ಗಡಿ ದಾಟಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡ 219 ರನ್​ಗಳಿಗೆ ಮೊದಲ ಇನ್ಸಿಂಗ್​ನಲ್ಲಿ ಪತನ ಕಂಡಿತು.

ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಂಗ್ಲ ವೇಗಿಗಳು ಉತ್ತಮವಾಗಿ ಸ್ಪೆಲ್​​ ಮಾಡಿ ಪಾಕ್​ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದ್ರು. ಪರಿಣಾಮಕಾರಿ ದಾಳಿ ಮಾಡಿದ ಸ್ಟುವರ್ಟ್‌ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದ್ರು. 44 ಓವರ್​​​ಗ​ಳಲ್ಲಿ 8 ವಿಕೆಟ್​ಗೆ 137 ರನ್​ಗಳಿಸಿರುವ ಪಾಕ್ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಮ್ಯಾಂಚೆಸ್ಟರ್: ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಗಳಿಸಿದ್ದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮಂಕಾಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್​ ಸ್ಟೋಕ್ಸ್​ ಕೊನೆ ಗಳಿಗೆಯಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಆಂಗ್ಲರ ತಂಡ ಕೊಂಚ ಮೇಲುಗೈ ಸಾಧಿಸುವಂತೆ ಮಾಡಿದ್ದಾರೆ.

ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುತ್ತಿರುವ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 137 ರನ್​ ಗಳಿಸಿದೆ. ಈ ಮೂಲಕ 244 ರನ್​ಗಳ ಮುನ್ನಡೆಯಲ್ಲಿದೆ.

ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 326 ರನ್‌ಗಳಿಸಿದ್ದು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಗುರುವಾರ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿತ್ತು. ಓಲಿ ಪೋಪ್ (62) ಮತ್ತು ಜೋಸ್ ಬಟ್ಲರ್ (38) ರನ್​ಗಳಿಸಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ದೂರ ಮಾಡಿದರು.

ಪೋಪ್ ಮತ್ತು ಬಟ್ಲರ್​ ವಿಕೆಟ್ ಪಡೆದ ನಸೀಮ್ ಶಾ ಮತ್ತು ಯಾಸೀರ್ ಶಾ ಪಾಕಿಸ್ತಾನಕ್ಕೆ ಮೇಲುಗೈ ತಂದುಕೊಟ್ರು. ಕ್ರಿಸ್ ವೋಕ್ಸ್‌, ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್​ ಕೊಂಚ ರನ್​ಗಳಿಸಿ ತಂಡವನ್ನು 200ರ ಗಡಿ ದಾಟಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡ 219 ರನ್​ಗಳಿಗೆ ಮೊದಲ ಇನ್ಸಿಂಗ್​ನಲ್ಲಿ ಪತನ ಕಂಡಿತು.

ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಂಗ್ಲ ವೇಗಿಗಳು ಉತ್ತಮವಾಗಿ ಸ್ಪೆಲ್​​ ಮಾಡಿ ಪಾಕ್​ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದ್ರು. ಪರಿಣಾಮಕಾರಿ ದಾಳಿ ಮಾಡಿದ ಸ್ಟುವರ್ಟ್‌ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದ್ರು. 44 ಓವರ್​​​ಗ​ಳಲ್ಲಿ 8 ವಿಕೆಟ್​ಗೆ 137 ರನ್​ಗಳಿಸಿರುವ ಪಾಕ್ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.