ETV Bharat / sports

ಪಾಕ್​ ಮತ್ತು ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ನ​ ಪ್ರಾರಂಭದ ಸಮಯದಲ್ಲಿ ಬದಲಾವಣೆ - ಟೆಸ್ಟ್​ ಪಂದ್ಯದಲ್ಲಿ ಸಮಯ ಬದಲಾವಣೆ

2ನೇ ಪಂದ್ಯದ ವೇಳೆ ಮಳೆ ಹಾಗೂ ಮಂದಬೆಳಕಿನ ಕಾರಣ ಹೆಚ್ಚು ಸಮಯ ವ್ಯರ್ಥವಾಗಿದ್ದರಿಂದ 3ನೇ ಪಂದ್ಯದಲ್ಲಿ ಬೆಳಿಗ್ಗೆ 11 ಗಂಟೆಯ ಬದಲಾಗಿ 10:30ಕ್ಕೆ ಪಂದ್ಯವನ್ನು ಪ್ರಾರಂಭಿಸಲು ಎರಡು ಕ್ರಿಕೆಟ್​ ಬೋರ್ಡ್​ಗಳು ಒಪ್ಪಿಗೆ ಸೂಚಿಸಿವೆ ಎಂದು ಐಸಿಸಿ ತಿಳಿಸಿದೆ.

ಪಾಕ್​ ಮತ್ತು ಇಂಗ್ಲೆಂಡ್​
ಪಾಕ್​ ಮತ್ತು ಇಂಗ್ಲೆಂಡ್​
author img

By

Published : Aug 20, 2020, 7:24 PM IST

ಲಂಡನ್​: ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದ ಪ್ರಾರಂಭದ ಸಮಯವನ್ನು ಹವಾಮಾನ ವೈಪರಿತ್ಯದ ಕಾರಣ ಬದಲಾವಣೆ ಮಾಡಲು ಕ್ರಿಸ್​ ಬ್ರಾಡ್​ ನೇತೃತ್ವದದಲ್ಲಿ ನಡೆದ ಸಭೆಯಲ್ಲಿ ಇಸಿಬಿ, ಪಿಸಿಬಿ ಮತ್ತು ಪ್ರಸಾರಕರು ಸೇರಿದಂತೆ ವಿವಿಧ ಪಾಲುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

2ನೇ ಪಂದ್ಯದ ವೇಳೆ ಮಳೆ ಹಾಗೂ ಮಂದಬೆಳಕಿನ ಕಾರಣ ಹೆಚ್ಚು ಸಮಯ ವ್ಯರ್ಥವಾಗಿದ್ದರಿಂದ 3ನೇ ಪಂದ್ಯದಲ್ಲಿ ಬೆಳಿಗ್ಗೆ 11 ಗಂಟೆಯ ಬದಲಾಗಿ 10:30ಕ್ಕೆ ಪಂದ್ಯವನ್ನು ಪ್ರಾರಂಭಿಸಲು ಎರಡು ಕ್ರಿಕೆಟ್​ ಬೋರ್ಡ್​ಗಳು ಒಪ್ಪಿಗೆ ಸೂಚಿಸಿವೆ ಎಂದು ಐಸಿಸಿ ತಿಳಿಸಿದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಆಗಸ್ಟ್​ 21, ಶುಕ್ರವಾರದಿಂದ ಸೌತಾಂಪ್ಟನ್​ನಲ್ಲಿ ಆರಂಭವಾಗಲಿದೆ.

ದಿನದ ಕೊನೆ ಸೆಸನ್​ಗಿಂತ ಬೆಳಿಗ್ಗಿನ ಸಮಯದಲ್ಲಿ ಉತ್ತಮ ವಾತಾವರಣವನ್ನು ಪಡೆಯುವುದರಿಂದ ಪಂದ್ಯವನ್ನು ಹಿಂದಿನ ಪಂದ್ಯಗಳಿಗಿಂದ ಬೇಗ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯದ ಅಧಿಕಾರಿಗಳು ಕೂಡ ಆಟದ ಸಮಯವನ್ನು ಗರಿಷ್ಠಗೊಳಿಸಲು ಮೇಲ್ವಿಚಾರಣೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆಟಗಾರರ ಸುರಕ್ಷತೆ ಪ್ರಮುಖವಾಗಿರುವುದರಿಂದ ಪ್ರೋಟೋಕಾಲ್​ಗಳನ್ನು ಅನುಸರಿಸುವುದಕ್ಕೆ ಪ್ರಥಮ ಆಧ್ಯತೆ ನೀಡಲಾಗಿದೆ.

ಪಂದ್ಯ 10:30ಕ್ಕೆ ಆರಂಭಿಸುವುದಾದರೆ ದಿನವೊಂದಕ್ಕೆ 90 ಓವರ್​ಗಳ ಬದಲಾಗಿ 98 ಓವರ್​ಗಳ ಆಟವಿರಲಿದೆ. ಆದರೆ ಸಮಯ ಬದಲಾವಣೆ ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್​ ತೀರ್ಮಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.