ETV Bharat / sports

ವೀರೇಂದ್ರ ಸೆಹ್ವಾಗ್​​ ಕ್ರಿಕೆಟ್​ ಯಶಸ್ಸಿನ ಹಿಂದೆ ಇದ್ರಂತೆ ಅರುಣ್ ಜೇಟ್ಲಿ! - ಮಾಜಿ ಸಚಿವಾ ಅರುಣ್ ಜೇಟ್ಲಿ

13 ವರ್ಷಗಳ ಡೆಲ್ಲಿ ಕ್ರಿಕೆಟ್​ ಅಸೋಶಿಯೇಷನ್​ನಲ್ಲಿ ಅಧ್ಯಕ್ಷರಾಗಿದ್ದ ಅರುಣ ಜೇಟ್ಲಿಯವರಿಂದಾಗಿಯೇ ವೀರೇಂದ್ರ ಸೆಹ್ವಾಗ್​ ಟೀಂ ಇಂಡಿಯಾಗೆ ಸೆಲೆಕ್ಟ್ ಆಗೋದಕ್ಕೆ ಸಾಧ್ಯವಾಯ್ತು. ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ದಾಖಲೆ ಮಾಡಲು ನೆರವಾಯ್ತಂತೆ.

ವಿರೇಂದ್ರ ಸೆಹ್ವಾಗ್
author img

By

Published : Aug 25, 2019, 10:47 AM IST

ನವದೆಹಲಿ:ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಶನಿವಾರ ಅನಾರೋಗ್ಯದಿಂದ ಮೃತಪಟ್ಟ ಮಾಜಿ ಹಣಕಾಸು ಸಚಿವಾ ಹಾಗೂ ಮಾಜಿ ಡಿಡಿಸಿಎ ಅದ್ಯಕ್ಷ ಅರುಣ್​ ಜೇಟ್ಲಿ ನಿಧನಕ್ಕೆ ಭಾವನಾತ್ಮಕ ಸಂತಾಪ ಸಲ್ಲಿಸಿದ್ದಾರೆ.

ಭಾರತ ಕಂಡ ಅತ್ಯುತ್ತಮ ರಾಜಕಾರಣಿಯಾಗಿದ್ದ ಅರುಣ್​ ಜೇಟ್ಲಿ ಶನಿವಾರ ಅನಾರೋಗ್ಯ ಕಾರಣದಿಂದ ಏಮ್ಸ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಸೆಹ್ವಾಗ್, ತನ್ನ ವೃತ್ತಿ ಜೀವನದ ಆರಂಭಕ್ಕೆ ಕಾರಣರಾಗಿದ್ದ ಜೇಟ್ಲಿ ಅವರ ನಿಧನದ ಸುದ್ದಿ ತುಂಬಾ ನೋವು ತಂದಿದೆ ಎಂದು ಭಾವಾನಾತ್ಮಕವಾಗಿ ತಿಳಿಸಿದ್ದಾರೆ.

  • But under his leadership at the DDCA, many players including me got a chance to represent India. He listened to needs of the players & was a problem solver. Personally shared a very beautiful relationship with him. My thoughts & prayers are with his family & loved ones. Om Shanti https://t.co/Kl4NpprR6W

    — Virender Sehwag (@virendersehwag) August 24, 2019 " class="align-text-top noRightClick twitterSection" data=" ">

ಸತತ 13 ವರ್ಷಗಳ ಡೆಲ್ಲಿ ಕ್ರಿಕೆಟ್​ ಅಸೋಶಿಯೇಷನ್​ನಲ್ಲಿ ಅಧ್ಯಕ್ಷರಾಗಿದ್ದ ಜೇಟ್ಲಿ, ಸೆಹ್ವಾಗ್​ ಭಾರತ ಕ್ರಿಕೆಟ್‌ ತಂಡಕ್ಕೆ ಸೇರಿಕೊಳ್ಳಲು ನೆರವಾಗಿದ್ದರು. ಸೆಹ್ವಾಗ್​ ಅಲ್ಲದೆ ಡೆಲ್ಲಿ ಮೂಲದ ಹಲವಾರು ಕ್ರಿಕೆಟಿಗರ ಜೀವನ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅವರ ಕಾಲದಲ್ಲಿಯೇ ಭಾರತ ತಂಡಕ್ಕೆ ಹೆಚ್ಚು ಡೆಲ್ಲಿ ಮೂಲದ ಆಟಗಾರರು ಸೇರಿದ್ದರು ಎಂದು ಈ ಸಂದರ್ಭದಲ್ಲಿ ನೆನೆಪಿಸಿಕೊಂಡಿದ್ದಾರೆ.

ಜೇಟ್ಲಿ ಕೇವಲ ಅಧ್ಯಕ್ಷರಾಗಿದರೆ, ಆಟಗಾರರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ನಾನು ವೈಯಕ್ತಿಕವಾಗಿ ಅವರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದೆ. ಅಗಲಿಕೆ ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಸೆಹ್ವಾಗ್‌ ಸಂತಾಪ ಸೂಚಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.