ETV Bharat / sports

ಆಯ್ಕೆ ಸಮಿತಿಯಿಂದ ದ್ರಾವಿಡ್ ಶಿಷ್ಯನ ಕಡೆಗಣನೆ... ಬೇಸರ ಹೊರಹಾಕಿದ ಗಿಲ್​​..! - ಶುಬ್ಮನ್ ಗಿಲ್

ಎಂ.ಎಸ್​.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಶುಬ್ಮನ್​​ ಗಿಲ್​ ಎನ್ನುವ ಅದ್ಭುತ ಪ್ರತಿಭೆಯನ್ನು ವಿಂಡೀಸ್ ಪ್ರವಾಸದಿಂದ ದೂರ ಇಟ್ಟಿದ್ದು, ಈ ವಿಚಾರಕ್ಕೆ ಇದೀಗ ಗಿಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಗಿಲ್
author img

By

Published : Jul 23, 2019, 2:27 PM IST

ಹೈದರಾಬಾದ್: ಮುಂದಿನ ತಿಂಗಳ ಆರಂಭದಲ್ಲಿ ಶುರುವಾಗಲಿರುವ ವಿಂಡೀಸ್ ಪ್ರವಾಸಕ್ಕೆ ಭಾನುವಾರದಂದು ಟೀಮ್ ಇಂಡಿಯಾ ಘೋಷಣೆಯಾಗಿದ್ದು, ಇದೇ ವಿಚಾರದಲ್ಲಿ ಯುವ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಉದಯೋನ್ಮುಖ ಆಟಗಾರ ಶುಬ್ಮನ್ ಗಿಲ್ ವಿಂಡೀಸ್ ಪ್ರವಾಸಕ್ಕೆ ಆಯ್ಕೆಯಾಗುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಎಂ.ಎಸ್​.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅದ್ಭುತ ಪ್ರತಿಭೆಯನ್ನು ಆಯ್ಕೆಯಿಂದ ದೂರ ಇಟ್ಟಿದೆ.

ಕೇದಾರ್​ ಯಾಕೆ? ಶುಬ್ಮನ್​ ಗಿಲ್​​ ಯಾಕಿಲ್ಲ? ಆಯ್ಕೆ ಸಮಿತಿ ವಿರುದ್ದ ಗರಂ​ ಆದ ಫ್ಯಾನ್ಸ್​

"ವಿಂಡೀಸ್ ಪ್ರವಾಸಕ್ಕೆ ಯಾವುದಾದರು ಒಂದು ಮಾದರಿಯಲ್ಲಿ ನನ್ನ ಹೆಸರು ಆಯ್ಕೆಯಾಗುವ ನಿರೀಕ್ಷೆ ನನ್ನಲ್ಲಿತ್ತು. ಆದರೆ, ತಂಡ ಘೋಷಣೆಯಾದ ಬಳಿಕ ಸಾಕಷ್ಟು ಬೇಸರಗೊಂಡಿದ್ದೇನೆ. ಆದರೆ, ಇದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ನಾನು ನನ್ನ ಆಟದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತೇನೆ. ಉತ್ತಮವಾಗಿ ರನ್​ ಗಳಿಸುತ್ತಾ ಆಯ್ಕೆಗಾರರ ಗಮನ ಸೆಳೆಯುತ್ತೇನೆ" ಎಂದು ಗಿಲ್​ ಬೇಸರದಲ್ಲಿ ಹೇಳಿದ್ದಾರೆ.

Gill
ವಿಂಡೀಸ್​ ಎ ವಿರುದ್ಧದ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಗಿಲ್

ಇದೇ ವರ್ಷ ನ್ಯೂಜಿಲ್ಯಾಂಡ್​ ವಿರುದ್ಧ ಶುಬ್ಮನ್ ಗಿಲ್ ಟೀಮ್ ಚೊಚ್ಚಲ ಪಂದ್ಯವನ್ನಾಡಿದ್ದರು. ಕೆಲ ದಿನದ ಹಿಂದೆ ಮುಕ್ತಾಯವಾದ ವಿಂಡೀಸ್ ಎ ವಿರುದ್ಧದ ಸರಣಿಯಲ್ಲಿ ಭಾರತ ಎ ಪರ ಅತೀ ಹೆಚ್ಚು ರನ್​ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐದು ಪಂದ್ಯಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 218 ರನ್​​ ಸಿಡಿಸಿದ್ದಾರೆ.

ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪಂಜಾಬ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್, ಕೇವಲ ಐದು ಪಂದ್ಯದಲ್ಲಿ 700 ರನ್ ಬಾರಿಸಿದ್ದರು. 268 ರನ್ ಅತ್ಯಧಿಕ ಗಳಿಕ. ಮೊದಲ ದರ್ಜೆ ಪಂದ್ಯದಲ್ಲಿ ಗಿಲ್ 77.78ರ ಸರಾಸರಿಯಲ್ಲಿ ಬರೋಬ್ಬರಿ 1,089 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಏಳು ಅರ್ಧಶತಕ ಸೇರಿದೆ.

Intro:Body:

ಆಯ್ಕೆ ಸಮಿತಿಯಿಂದ ದ್ರಾವಿಡ್ ಶಿಷ್ಯನ ಕಡೆಗಣನೆ... ಬೇಸರ ಹೊರಹಾಕಿದ ಗಿಲ್​​..!

ಹೈದರಾಬಾದ್: ಮುಂದಿನ ತಿಂಗಳ ಆರಂಭದಲ್ಲಿ ಶುರುವಾಗಲಿರುವ ವಿಂಡೀಸ್ ಪ್ರವಾಸಕ್ಕೆ ಭಾನುವಾರದಂದು ಟೀಮ್ ಇಂಡಿಯಾ ಘೋಷಣೆಯಾಗಿದ್ದು, ಇದೇ ವಿಚಾರದಲ್ಲಿ ಯುವ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಉದಯೋನ್ಮುಖ ಆಟಗಾರ ಶುಬ್ಮನ್ ಗಿಲ್ ವಿಂಡೀಸ್ ಪ್ರವಾಸಕ್ಕೆ ಆಯ್ಕೆಯಾಗುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಎಂ.ಎಸ್​.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅದ್ಭುತ ಪ್ರತಿಭೆಯನ್ನು ಆಯ್ಕೆಯಿಂದ ದೂರ ಇಟ್ಟಿದೆ.

"ವಿಂಡೀಸ್ ಪ್ರವಾಸಕ್ಕೆ ಯಾವುದಾದರು ಒಂದು ಮಾದರಿಯಲ್ಲಿ ನನ್ನ ಹೆಸರು ಆಯ್ಕೆಯಾಗುವ ನಿರೀಕ್ಷೆ ನನ್ನಲ್ಲಿತ್ತು. ಆದರೆ ತಂಡ ಘೋಷಣೆಯಾದ ಬಳಿಕ ಸಾಕಷ್ಟು ಬೇಸರಗೊಂಡಿದ್ದೇನೆ. ಆದರೆ ಇದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ನಾನು ನನ್ನ ಆಟದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತೇನೆ. ಉತ್ತಮವಾಗಿ ರನ್​ ಗಳಿಸುತ್ತಾ ಆಯ್ಕೆಗಾರರ ಗಮನ ಸೆಳೆಯುತ್ತೇನೆ" ಎಂದು ಗಿಲ್​ ಬೇಸರದಲ್ಲಿ ಹೇಳಿದ್ದಾರೆ.  

ಇದೇ ವರ್ಷ ನ್ಯೂಜಿಲ್ಯಾಂಡ್​ ವಿರುದ್ಧ ಶುಬ್ಮನ್ ಗಿಲ್ ಟೀಮ್ ಚೊಚ್ಚಲ ಪಂದ್ಯವನ್ನಾಡಿದ್ದರು. ಕೆಲ ದಿನದ ಹಿಂದೆ ಮುಕ್ತಾಯವಾದ ವಿಂಡೀಸ್ ಎ ವಿರುದ್ಧದ ಸರಣಿಯಲ್ಲಿ ಭಾರತ ಎ ಪರ ಅತೀ ಹೆಚ್ಚು ರನ್​ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐದು ಪಂದ್ಯಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 218 ರನ್​​ ಸಿಡಿಸಿದ್ದಾರೆ.

ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪಂಜಾಬ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್, ಕೇವಲ ಐದು ಪಂದ್ಯದಲ್ಲಿ 700 ರನ್ ಬಾರಿಸಿದ್ದರು. 268 ರನ್ ಅತ್ಯಧಿಕ ಗಳಿಕ. ಮೊದಲ ದರ್ಜೆ ಪಂದ್ಯದಲ್ಲಿ ಗಿಲ್ 77.78ರ ಸರಾಸರಿಯಲ್ಲಿ ಬರೋಬ್ಬರಿ 1,089 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಏಳು ಅರ್ಧಶತಕ ಸೇರಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.