ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಕೆಲವೊಂದು ಪ್ರಾಂಚೈಸಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಡೆಲ್ಲಿ ಕ್ಯಾಪಿಟಲ್ ತಂಡ ಕೂಡ ಇದರಿಂದ ಹೊರತಾಗಿಲ್ಲ.
ಏಪ್ರಿಲ್ 9ರಿಂದ ಪ್ರಸಕ್ತ ಸಾಲಿನ ಲೀಗ್ ಆರಂಭಗೊಳ್ಳಲಿರುವ ಕಾರಣ ಡೆಲ್ಲಿ ಕ್ಯಾಪಿಟಲ್ ತಂಡ ಭಾರತೀಯ ಕ್ರಿಕೆಟ್ ಮಂಡಳಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದು, ತಮ್ಮ ತಂಡದ ಪ್ಲೇಯರ್ಸ್ಗೆ ಕೋವಿಡ್ ವ್ಯಾಕ್ಸಿನ್ ನೀಡುವಂತೆ ತಿಳಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಜತೆ ಮಾತನಾಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಿದೆ ಅದು ಎಂದು ಡೆಲ್ಲಿ ಪ್ರಾಂಚೈಸಿ ತಿಳಿಸಿದೆ. ವಿಶೇಷವಾಗಿ ಈಗಾಗಲೇ ರಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ವಿದೇಶಿ ಪ್ಲೇಯರ್ಸ್ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ ಇದ್ದು, ಭಾರತದ ಪ್ಲೇಯರ್ಸ್ಗೆ ಈ ಲಸಿಕೆ ನೀಡುವ ಸಾಧ್ಯತೆ ದಟ್ಟವಾಗಿದೆ. ಬರುವ ಮಂಗಳವಾರದಿಂದ ಬಯೋ ಬಬಲ್ಗೆ ಡೆಲ್ಲಿ ಪ್ಲೇಯರ್ಸ್ ಒಳಗಾಗಲಿದ್ದಾರೆ. ಇದಾದ ಬಳಿಕ ಅವರನ್ನ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.