ETV Bharat / sports

ಪ್ರಿನ್ಸ್​​ ಮಹೇಶ್​ ಬಾಬು ಸಿಗ್ನೇಚರ್​ ಡೈಲಾಗ್​ಗೆ ಟಿಕ್​ಟಾಕ್​ ಮಾಡಿದ ಡೇವಿಡ್​ ವಾರ್ನರ್​ - ಟಿಕ್​ಟಾಕ್​ನಲ್ಲಿ ತೆಲುಗು ಡೈಲಾಗ್​ ಹೊಡೆದ ವಾರ್ನರ್​

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್​ ವಾರ್ನರ್​ ಟಿಕ್​ಟಾಕ್​ನಲ್ಲಿ ತೆಲುಗು ಸಿನಿಮಾಗಳ ಡೈಲಾಗ್​, ಸಾಂಗ್​ಗೆ ಅಭಿನಯ ಮಾಡುವ ಮೂಲಕ ಕುಟುಂಬದವರ ಜೊತೆಗೆ ಎಂಜಾಯ್​ ಮಾಡುವುದರ ಜೊತೆಗೆ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

David Warner entertained Indian fans
ಡೇವಿಡ್​ ವಾರ್ನರ್​ ಟಿಕ್​ಟಾಕ್
author img

By

Published : May 11, 2020, 8:23 AM IST

ಸಿಡ್ನಿ: ಕೋವಿಡ್​ 19 ಭೀತಿಯಿಂದ ಇಡೀ ವಿಶ್ವದಾದ್ಯತ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಕ್ರಿಕೆಟಿಗರು ತಮ್ಮ ಕುಟುಂಬದವರ ಜೊತೆ, ಇನ್ನು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿ ಕ್ರಿಕೆಟ್​ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್​ ವಾರ್ನರ್​ ಟಿಕ್​ಟಾಕ್​ನಲ್ಲಿ ತೆಲುಗು ಸಿನಿಮಾಗಳ ಡೈಲಾಗ್​, ಸಾಂಗ್​ಗೆ ಅಭಿನಯ ಮಾಡುವ ಮೂಲಕ ಕುಟುಂಬದವರ ಜೊತೆಗೆ ಎಂಜಾಯ್​ ಮಾಡುವುದರ ಜೊತೆಗೆ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಇತ್ತೀಚೆಗೆ ತೆಲುಗಿನ ಸ್ಟೈಲಿಸ್​ ಸ್ಟಾರ್​ ಖ್ಯಾತಿಯ ಅಲ್ಲು ಅರ್ಜುನ್​ ಅಭಿನಯದ 'ಅಲಾ ವೈಕುಂಠಪುರಂಲೋ' ಸಿನಿಮಾದ ‘ಬುಟ್ಟ ಬೊಮ್ಮ’ ಹಾಡಿಗೆ ವಾರ್ನರ್​ ತಮ್ಮ ಪತ್ನಿ ಮಗಳೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ಸ್ವತಃ ನಟ ಅಲ್ಲು ಅರ್ಜುನ್​ ಅವರು ಡೇವಿಡ್​ ವಾರ್ನರ್​ ಅವರ ತೆಲುಗು ಪ್ರೀತಿ ನೋಡಿ ಟ್ವಿಟ್ಟರ್​​ನಲ್ಲಿ ಕಮೆಂಟ್​ ಮಾಡಿದ್ದರು.

ಇದೀಗ ಸ್ಫೋಟಕ ಬ್ಯಾಟ್ಸ್​ಮನ್​ ​​ ವಾರ್ನರ್, ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ಪೋಕಿರಿ ಸಿನಿಮಾದ ಡೈಲಾಗ್ ಹೇಳುವ ಟಿಕ್​ಟಾಕ್​ ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.

ಈ ವಿಡಿಯೋದಲ್ಲಿ ವಾರ್ನರ್​​ ಬ್ಯಾಟ್​ ಹಿಡಿದುಕೊಂಡು ‘ಒಕ್ಕ ಸಾರಿ ಕಮಿಟ್​ ಆಯ್ತೆ ನಾ ಮಾತ ನೆನೆ ವಿನ್ನನು’ ಡೈಲಾಗ್​ ಹೊಡದಿದ್ದಾರೆ. ಈ ಡೈಲಾಗ್​ ಜೊತೆಗೆ, ಇದು ಯಾವ ಸಿನಿಮಾದ ಡೈಲಾಗ್​ ಹೇಳಿ? ನಾನೂ ಎಲ್ಲವನ್ನು ಪ್ರಯತ್ನಿಸುತ್ತಿರುವೆ, ಸಹಾಯ ಮಾಡಿ, ಗುಡ್​ ಲಕ್​​ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.